ಕಾರಿಗೆ ಸಿಲುಕಿ ಮೃತಪಟ್ಟಿದ್ದ ಕೋತಿಯ 11ನೇ ಪುಣ್ಯಸ್ಮರಣೆ

KannadaprabhaNewsNetwork | Published : Sep 21, 2024 1:46 AM

ಸಾರಾಂಶ

ಹಂಸ ಬಿಲ್ಡಿಂಗ್ ಪಕ್ಕದ ಸೋಮಣ್ಣ ಟೀ ಕ್ಯಾಂಟೀನ್ ಬಳಿ ಮುತ್ತತ್ತಿರಾಯ ದೇಗುಲದ ಅರ್ಚಕ ಮುತ್ತರಾಜು ಕೋತಿ ಭಾವಚಿತ್ರಕ್ಕೆ ಹಾಗೂ ಸಮಾಧಿಗೆ ಪೂಜೆ ನಡೆಸಿ ಅದು ತಿನ್ನುವ ತಿಂಡಿ ತಿನಿಸುಗಳನ್ನು ಎಡೆ ಇಟ್ಟು ಪೂಜೆ ಸಲ್ಲಿಸಿದರು. ನಂತರ ಪ್ರಸಾದ ವಿನಿಯೋಗಿಸಲಾಯಿತು.

ಕನ್ನಡಪ್ರಭ ವಾರ್ತೆ ಹಲಗೂರು

ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ಕಾರಿಗೆ ಸಿಲುಕಿ ಮೃತಪಟ್ಟಿದ್ದ ಕೋತಿಯ 11ನೇ ಪುಣ್ಯಸ್ಮರಣೆ ನಡೆಸಲಾಯಿತು.

ಶುಕ್ರವಾರ ಹಂಸ ಬಿಲ್ಡಿಂಗ್ ಪಕ್ಕದ ಸೋಮಣ್ಣ ಟೀ ಕ್ಯಾಂಟೀನ್ ಬಳಿ ಮುತ್ತತ್ತಿರಾಯ ದೇಗುಲದ ಅರ್ಚಕ ಮುತ್ತರಾಜು ಕೋತಿ ಭಾವಚಿತ್ರಕ್ಕೆ ಹಾಗೂ ಸಮಾಧಿಗೆ ಪೂಜೆ ನಡೆಸಿ ಅದು ತಿನ್ನುವ ತಿಂಡಿ ತಿನಿಸುಗಳನ್ನು ಎಡೆ ಇಟ್ಟು ಪೂಜೆ ಸಲ್ಲಿಸಿದರು. ನಂತರ ಪ್ರಸಾದ ವಿನಿಯೋಗಿಸಲಾಯಿತು.

ಈ ವೇಳೆ ಟೀ ಅಂಗಡಿ ಮಾಲೀಕ ಸೋಮಣ್ಣ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ವಾಹನಗಳು ಅತಿ ವೇಗವಾಗಿ ಸಂಚಾರ ಮಾಡುತ್ತಿದ್ದ ಕಾರಣ ಕಾರಿಗೆ ಸಿಲುಕಿ ಹಿಂದೆ ಒಂದು ಕೋತಿ ಮೃತಪಟ್ಟಿತ್ತು. ಅದರ ಅಂತ್ಯಕ್ರಿಯೆ ನಂತರ 11ನೇ ದಿನ ಪೂಜೆ, ಪುನಸ್ಕಾರ ನಡೆಸಿ ಪ್ರಸಾದ ವಿನಯೊಗಿಸಿದ್ದೇವೆ ಎಂದರು.

ಗ್ರಾಮದ ಮುಖಂಡರಾದ ನಂಜಾಪುರದ ವಿಷಕಂಠ ,ಶಿವಕುಮಾರ್, ಗುರುಮೂರ್ತಿ, ಗೋಪಿ, ಕಾಂತರಾಜ್ ,ಸೋಮಣ್ಣ, ಸೇರಿದಂತೆ ಇತರರು ಇದ್ದರು. ನಾಳೆ ಅನುದಿನವೂ ಅಭಿಜ್ಞಾನ ಕಥಾಸಂಕಲನ ಬಿಡುಗಡೆ

ಮಂಡ್ಯ:ಐಡಿಯಲ್ ಪಬ್ಲಿಕೇಷನ್ಸ್ ವತಿಯಿಂದ ಸೆ.೨೨ರಂದು ಬೆಳಗ್ಗೆ ೧೦.೩೦ಕ್ಕೆ ನಗರದ ಕರ್ನಾಟಕ ಸಂಘದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ಡಾ.ಶುಭಶ್ರೀ ಪ್ರಸಾದ್ ಅವರ ಅನುದಿನವೂ ಅಭಿಜ್ಞಾನ ಕಥಾ ಸಂಕಲನ ಬಿಡುಗಡೆ ಹಾಗೂ ಶ್ರೀ ನಿನಾದ ಕೃಷ್ಣನ ಹಾಡುಗಳ ಆಲ್ಬಂ ಬಿಡುಗಡೆ ಸಮಾರಂಭ ನಡೆಯಲಿದೆ. ಖ್ಯಾತ ಕೊಳಲು ವಾದಕ ಕೆ.ಮುರಳೀಧರ್ ಉಡುಪಿ ಅಧ್ಯಕ್ಷತೆ ವಹಿಸುವರು. ಸಾಹಿತಿ ಮಂಜುಳಾ ಜಯಪ್ರಕಾಶಗೌಡ ಅವರು ಅನುದಿನವೂ ಅಭಿಜ್ಞಾನ ಕಥಾ ಸಂಕಲನ ಬಿಡುಗಡೆ ಮಾಡುವರು. ಖ್ಯಾತ ಗಾಯಕ ಶಶಿಧರ್ ಕೋಟೆ ಅವರು ಶ್ರೀ ನಿನಾದ ಕೃಷ್ಣನ ಹಾಡುಗಳ ಆಲ್ಬಂ ಬಿಡುಗಡೆ ಮಾಡುವರು. ವಿಶ್ರಾಂತ ಪ್ರಾಂಶುಪಾಲ ಡಾ. ಎಸ್.ಬಿ. ಶಂಕರೇಗೌಡ ಪುಸ್ತಕ ಕುರಿತು ಮಾತನಾಡುವರು. ಐಡಿಯಲ್ ಪಬ್ಲಿಕೇಷನ್ ಪ್ರಕಾಶಕ ಎಂ.ಎಸ್.ಶಿವಪ್ರಕಾಶ್ ಭಾಗವಹಿಸುವರು.

Share this article