ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ 12 ಅಡಿಗಳ ಪೇಪರ್ ಗಣೇಶ

KannadaprabhaNewsNetwork |  
Published : Sep 09, 2024, 01:31 AM IST
ಕ್ಯಾಪ್ಷನಃ8ಕೆಡಿವಿಜಿ21ಃ ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯಿಂದ ನಿರ್ಮಿಸಿರುವ ಪರಿಸರ ಸ್ನೇಹಿ 12 ಅಡಿಯ ಪೇಪರ್ ಗಣೇಶ  | Kannada Prabha

ಸಾರಾಂಶ

ಗಣೇಶ ಚತುರ್ಥಿ ಅಂಗವಾಗಿ ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ 12 ಅಡಿ ಎತ್ತರದ ಪೇಪರ್ ಗಣೇಶನನ್ನು ಸೃಷ್ಟಿಸಲಾಗಿದ್ದು, ಈ ಪರಿಸರಸ್ನೇಹಿ ಭವ್ಯ ಆಕೃತಿ ಎಲ್ಲರ ಗಮನ ಸೆಳೆಯುತ್ತಿದೆ.

- ಚಿತ್ರಕಲಾ ಶಿಕ್ಷಕ ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ಮಕ್ಕಳ ಕೈ ಚಳಕ

- ಅನಂತ ಚತುರ್ದಶಿಯಂದು ವಿಸರ್ಜನೆ । ಸಾರ್ವಜನಿಕರ ವೀಕ್ಷಣೆಗೆ ಅವಕಾಶ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಗಣೇಶ ಚತುರ್ಥಿ ಅಂಗವಾಗಿ ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ 12 ಅಡಿ ಎತ್ತರದ ಪೇಪರ್ ಗಣೇಶನನ್ನು ಸೃಷ್ಟಿಸಲಾಗಿದ್ದು, ಈ ಪರಿಸರಸ್ನೇಹಿ ಭವ್ಯ ಆಕೃತಿ ಎಲ್ಲರ ಗಮನ ಸೆಳೆಯುತ್ತಿದೆ.

ವಿದ್ಯಾರ್ಥಿಗಳ ಸಹಾಯದಿಂದ ಶಾಲೆ ಚಿತ್ರಕಲಾ ಶಿಕ್ಷಕರಾದ ಪ್ರಶಾಂತ್ ಕುಮಾರ್, ಸ್ವಾತಿ, ಹೀನ ಕೌಸರ್, ಮುಜಸ್ಸಿಂ, ಸಹನಾ ಹಾಗೂ ಶಾಲಾ ಮಕ್ಕಳ ಕೈ ಚಳಕದಲ್ಲಿ ಈ ಗಣಪನನ್ನು ಸೃಷ್ಟಿಸಲಾಗಿದೆ. ಸಂಪೂರ್ಣ ಕಾಗದ, ಮೈದಾ ಅಂಟು ಮತ್ತು ಇದ್ದಿಲಿನ ಪುಡಿಯಿಂದ ಗಣಪನನ್ನು ನಿರ್ಮಿಸಲಾಗಿದೆ. 12 ಅಡಿ ಎತ್ತರದ ಗಣಪ ಕೇವಲ 20 ಕೆಜಿ ತೂಕವಿದ್ದು, 4 ಮಕ್ಕಳು ಸುಲಭವಾಗಿ ಎತ್ತಿ ಇಳಿಸಬಹುದಾಗಿದೆ.

ಗಣಪನನ್ನು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಗರದ ಗಾಂಧಿ ಸರ್ಕಲ್ಲಿಗೆ ಕರೆದೊಯ್ದು ಅಲ್ಲಿಂದ ಸುಂದರವಾದ ರಥದಲ್ಲಿ ಕೂರಿಸಿ, ಅಶೋಕ ರಸ್ತೆ, ಜಯದೇವ ಸರ್ಕಲ್, ಅಂಬೇಡ್ಕರ್ ಸರ್ಕಲ್, ವಿದ್ಯಾರ್ಥಿ ಭವನ ಸರ್ಕಲ್ ಮೂಲಕ ತಂದು ಶಾಲೆ ಸುಂದರ ಮಂಟಪದಲ್ಲಿ ಪ್ರತಿಷ್ಠಾಪಿಸಿದರು. ಸಾಂಪ್ರದಾಯಿಕ ಉಡುಗೆ ತೊಟ್ಟ ಬಾಲಕಿಯರು ಮೆರವಣಿಗೆಯುದ್ದಕ್ಕೂ ಗಣಪನ ಭಕ್ತಿ ಪ್ರಧಾನ ಗೀತೆಗಳಿಗೆ ಹೆಜ್ಜೆ ಹಾಕುತ್ತಾ ನಡುನಡುವೆ ಘೋಷಣೆ ಕೂಗಿದರು.

ಮೆರವಣಿಗೆಯ ನೇತೃತ್ವ ವಹಿಸಿದ ಸಂಸ್ಥೆಯ ನಿರ್ದೇಶಕ ಡಾ.ಜಯಂತ್ ಹಾಗೂ ಪೂಜಾ ವಿಧಿ ವಿಧಾನವನ್ನು ನೆರವೇರಿಸಿದರೆ, ಕಾರ್ಯದರ್ಶಿ ಡಿ.ಎಸ್.ಹೇಮಂತ್ ಪೂರ್ಣ ಕಾರ್ಯಕ್ರಮ ನಡೆಸಿಕೊಟ್ಟರು. ಅನಂತ ಚತುರ್ದಶಿಯಂದು ವಿಸರ್ಜಿತವಾಗುವ ಈ ವಿಶಿಷ್ಟ ಬೃಹತ್ ಗಣಪತಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ. ಭಕ್ತರು ದರ್ಶನ ಪಡೆಯಬಹುದು ಎಂದು ಸಂಸ್ಥೆ ಮುಖ್ಯಸ್ಥೆ ಡಾ.ಜಸ್ಟಿನ್ ಡಿಸೌಜ ತಿಳಿಸಿದ್ದಾರೆ.

- - - -8ಕೆಡಿವಿಜಿ21ಃ:

ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯಿಂದ ನಿರ್ಮಿಸಿರುವ ಪರಿಸರ ಸ್ನೇಹಿ 12 ಅಡಿಯ ಪೇಪರ್ ಗಣೇಶ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ