ಕೆ.ಬೆಟ್ಟಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜೆಡಿಎಸ್ ಬೆಂಬಲಿತ 12 ಮಂದಿ ನಿರ್ದೇಶಕರಿಗೆ ಗೆಲುವು

KannadaprabhaNewsNetwork |  
Published : Mar 11, 2025, 12:46 AM IST
10ಕೆಎಂಎನ್ ಡಿ11 | Kannada Prabha

ಸಾರಾಂಶ

ಪಾಂಡವಪುರ ತಾಲೂಕಿನ ಕೆ.ಬೆಟ್ಟಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳಲ್ಲೂ ಜೆಡಿಎಸ್ ಬೆಂಬಲಿತರು ಭರ್ಜರಿ ಗೆಲುವು ಸಾಧಿಸಿದ್ದಾರೆ. ರೈತಸಂಘ- ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸೋಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಕೆ.ಬೆಟ್ಟಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳಲ್ಲೂ ಜೆಡಿಎಸ್ ಬೆಂಬಲಿತರು ಭರ್ಜರಿ ಗೆಲುವು ಸಾಧಿಸಿದ್ದಾರೆ. ರೈತಸಂಘ- ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸೋಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಚುನಾವಣೆಯಲ್ಲಿ 12 ಸ್ಥಾನಗಳಿಗೆ ಎರಡು ಪಕ್ಷದ ಅಭ್ಯರ್ಥಿಗಳು ಗೆಲುವಿಗಾಗಿ ಸೆಣಸಾಟ ನಡೆಸಿದರು. ಅಂತಿಮವಾಗಿ ಮತದಾರರು ಜೆಡಿಎಸ್ ಬೆಂಬಲಿತರನ್ನು ಆಯ್ಕೆ ಮಾಡುವ ಮೂಲಕ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಕೈ ಬಲಪಡಿಸಿದರು. ರೈತಸಂಘ-ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸೋಲು ಹಾಲಿ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಅವರಿಗೆ ಮುಖಭಂಗ ಮಾಡಿದಂತಾಗಿದೆ.

ಚುನಾವಣೆಯಲ್ಲಿ ಸಾಲಗಾರ ಸಾಮಾನ್ಯ ಕ್ಷೇತ್ರ ಶ್ಯಾದನಹಳ್ಳಿ ಪಿ.ಚಲುವರಾಜು, ವಡ್ಡರಹಳ್ಳಿ ವಿ.ಎಸ್.ನಿಂಗೇಗೌಡ, ಹುಲ್ಕೆರೆಕೊಪ್ಪಲು ಎಚ್.ಆರ್. ಮಧುಸೂದನ್, ಡಾಮಡಹಳ್ಳಿ ಡಿ.ಜೆ.ಮಹೇಶ್, ಕೆ.ಬೆಟ್ಟಹಳ್ಳಿ ಕೆ.ಎಸ್.ಮನೋಹರ್, ಮಹಿಳಾ ಮೀಸಲು ಕ್ಷೇತ್ರ ನಂಜಾಮಣಿ, ಸಾವಿತ್ರಮ್ಮ, ಪರಿಶಿಷ್ಟ ಪಂಗಡ ಮೀಸಲು-ನರಸಿಂಹನಾಯಕ, ಪರಿಶಿಷ್ಟ ಜಾತಿ- ಎ.ಅಂಕಯ್ಯ, ಹಿಂದುಳಿದ ವರ್ಗಗಳ ಬಿ ಮೀಸಲು- ಶಂಭೂನಹಳ್ಳಿ ಗುರುಸ್ವಾಮಿ, ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು - ಬಿ.ಎಸ್. ವಿಜೇಂದ್ರಕುಮಾರ್, ಸಾಲಗಾರರಲ್ಲದ ಸಾಮಾನ್ಯ ಕೆ.ಬೆಟ್ಟಹಳ್ಳಿ ಎನ್.ಸುಪ್ರೀತ್‌ಗೌಡ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆರ್.ನಿರ್ಮಲ ಘೋಷಿಸಿದರು.

ಜೆಡಿಎಸ್ ಬೆಂಬಲಿತರು ಆಯ್ಕೆಯಾಗುತ್ತಿದ್ದಂತೆಯೇ ಬೆಂಬಲಿಗರು ಪಟಾಕಿಸಿಡಿಸಿ ಸಂಭ್ರಮಿಸಿದರು. ಇದೇ ವೇಳೆ ಸಂಘದ ನಿರ್ದೇಶಕರನ್ನು ಸಚಿವ ಸಿ.ಎಸ್.ಪುಟ್ಟರಾಜು ಗ್ರಾಮದ ಶ್ರೀಲಕ್ಷ್ಮೀದೇವಿ ದೇವಸ್ಥಾನದಲ್ಲಿ ಪೂಜೆಸಲ್ಲಿಸಿ ನಂತರ ಎಲ್ಲಾ ನಿರ್ದೇಶಕರನ್ನು ಅಭಿನಂದಿಸಿದರು.

ನಂತರ ಮಾತನಾಡಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕೆ.ಬೆಟ್ಟಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಜಿಲ್ಲೆಗೆ ಮಾದರಿಯಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಹೆಸರುಗಳಿಸಿದ ಸದಸ್ಯರಿದ್ದಾರೆ. ಯಾವುದೇ ಒಬ್ಬ ವ್ಯಕ್ತಿಗೆ ಸೋಲು ಖಚಿತ ಎಂಬುದು ತಿಳಿದ ಮೇಲೆ ಕೊನೆ ಅಸ್ತ್ರವಾಗಿ ಸುಳ್ಳು ಅಪಪ್ರಚಾರ ಮಾಡುತ್ತಾರೆ. ಅದೇ ರೀತಿ ವಿರೋಧಿಗಳು ಸಾಕಷ್ಟು ಅಪಪ್ರಚಾರ ನಡೆಸಿದರು. ಆದರೂ ಸಹ ಚುನಾವಣೆಯಲ್ಲಿ ಎಲ್ಲಾ ಷೇರುದಾರ ರೈತರು ಜೆಡಿಎಸ್ ಬೆಂಬಲಿತರನ್ನು ಗೆಲ್ಲಿಸುವ ಮೂಲಕ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.

ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲವಾಗಿದೆ. ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಯಾವುದೋ ಒಂದು ಸಮುದಾಯವನ್ನು ಓಲೈಸಿಕೊಳ್ಳುವ ಬಜೆಟ್ ಆಗಿದೆ. ಸರ್ಕಾರ ಈ ಧೋರಣೆ ನೀತಿ ಬಿಡಬೇಕು. ಇಲ್ಲವಾದರೆ ಜನರೆ ತಕ್ಕಪಾಠ ಕಲಿಸಿದ್ದಾರೆ ಎಂದು ಎಚ್ಚರಿಸಿದರು.

ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ಚಲುವರಾಜು, ಗುರುಸ್ವಾಮಿ, ನಿರ್ದೇಶಕರಾದ ವಿ.ಎಸ್.ನಿಂಗೇಗೌಡ, ಎಚ್.ಆರ್.ಮಧುಸೂದನ್, ಮನೋಹರ್, ಡಿ.ಜೆ.ಮಹೇಶ್, ನಂಜಾಮಣಿ, ಸಾವಿತ್ರಮ್ಮ, ನರಸಿಂಹನಾಯಕ, ಎ.ಅಂಕಯ್ಯ, ಬಿ.ಎಸ್.ವಿಜೇಂದ್ರಕುಮಾರ್, ಎನ್.ಸುಪ್ರೀತ್‌ಗೌಡ, ಮುಖಂಡರಾದ ದ್ಯಾವಪ್ಪ, ನಾರಾಯಣ, ಸ್ವಾಮಿ ಗ್ರಾಮಸ್ಥರು, ಮುಖಂಡರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚೈತ್ರ ‌ನವರಾತ್ರಿ ನಿಮಿತ್ತ ಕನ್ನಡ ಗೀತೆ ಜತೆ ಮೋದಿ ಶುಭಾಶಯ -ದಿನಕ್ಕೊಂದು ಭಾಷೆಯ ಗೀತೆ ಪೋಸ್ಟ್‌
ಸೌದೆ ಒಲೆಗೆ ಖಾನಾವಳಿ ಮೊರೆ-ಒಂದು ಕ್ವಿಂಟಲ್ ಕಟ್ಟಿಗೆಗೆ 900 ರು. ವೆಚ್ಚ