ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಬಿಎಸ್ಎನ್ಎಲ್ ಭವನದಲ್ಲಿ ಮಂಗಳವಾರ ದೂರಸಂಚಾರ ಕ್ಷೇತ್ರದಲ್ಲಿ ಆಗಿರುವ ಸಾಧನೆಗಳ ಕುರಿತು ಏರ್ಪಡಿಸಿದ್ದ ದೂರಸಂಪರ್ಕ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಮುಂದಿನ ಸಭೆಯ ವೇಳೆಗೆ ಬಾಕಿ ಇರುವ ಟವರ್‌ಗಳ ನಿರ್ಮಾಣಕ್ಕೆ ಅವಶ್ಯಕವಾಗಿರುವ, ವಿವಿಧ ಕಾರಣಗಳಿಂದಾಗಿ ಅನುಷ್ಟಾನಕ್ಕೆ ತೊಡಕಾಗಿರುವ ಸ್ಥಳಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಂಡು ಭೂಸ್ವಾದೀನ ಪೂರ್ಣಗೊಳಿಸಿ, ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ನಾಗಾಲೋಟದಲ್ಲಿ ಬೆಳೆಯುತ್ತಿರುವ ದೇಶದ ಅಭಿವೃದ್ಧಿಗೆ ಪೂರಕವಾಗಿ ಸೌಲಭ್ಯ-ಸಹಕಾರಗಳನ್ನು ಒದಗಿಸುವುದರ ಜೊತೆಗೆ ಎದುರಾಗುವ ಎಲ್ಲ ರೀತಿಯ ಸಮಸ್ಯೆ ಸವಾಲುಗಳನ್ನು ಎದುರಿಸಿ ಮುನ್ನುಗ್ಗುತ್ತಿದೆ. ಸ್ವಚ್ಚ ಭಾರತದಿಂದ ಇಂದಿನ ಡಿಜಿಟಲ್‌ಯುಗದವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಡಿಜಿಟಲೀಕರಣದ ಕಾರ್ಯ ಭರದಿಂದ ಸಾಗಿದೆ. ಬಹುಸಂಖ್ಯೆಯನ್ನು ಹೊಂದಿರುವ ರಾಷ್ಟ್ರಕ್ಕೆ ಅಗತ್ಯ ಸೌಲತ್ತುಗಳನ್ನು ಒದಗಿಸುವ ದೊಡ್ಡ ಹೊಣೆಗಾರಿಕೆ ಹೊಂದಿದೆ ಎಂದರು.ಒಂದು ಕಾಲದಲ್ಲಿ ನಷ್ಟದಲ್ಲಿ ಸಾಗುತ್ತಿದ್ದ ದೂರಸಂಚಾರ ನಿಗಮವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ಕೇಂದ್ರ ಸರ್ಕಾರವು ಅಗತ್ಯ ಆರ್ಥಿಕ ನೆರವನ್ನು ಒದಗಿಸಿದೆ. ಖಾಸಗಿ ವಲಯಗಳ ತೀವ್ರ ಸ್ಪರ್ಧೆಗಳ ನಡುವೆಯೂ ನಿಗಮ ಇನ್ನಷ್ಟು ಬಂಡವಾಳ ತೊಡಗಿಸಿ ಮುನ್ನುಗ್ಗುತ್ತಿದೆ. ಸಾಧಿಸಲು ಗುರಿ ಇರುವಂತೆಯೇ ಸವಾಲುಗಳೂ ಕೂಡ ಇವೆ ಎಂದು ಹೇಳಿದರು.
ಮಲೆನಾಡಿನ ಪ್ರದೇಶವಾಗಿರುವ ಬಸವಾನಿ ಎಂಬ ಗ್ರಾಮದಲ್ಲಿ ಟವರ್‌ಅಳವಡಿಸಿದ ಕೇಂದ್ರದಲ್ಲಿ ಬ್ಯಾಟರಿ ಕಳುವಾಗಿದ್ದು, ಅದು ನಿಗಮದ ಸಿಬ್ಬಂಧಿಗಳ ಸಹಕಾರಿದಂದಲೇ ಆಗಿರಬಹುದಾದ ಮಾಹಿತಿ ಇದೆ. ಕೂಡಲೇ ನಿಗಮದ ಮಹಾಪ್ರಬಂಧಕರು ಗಮನಹರಿಸುವಂತೆ ಸೂಚಿಸಿದ ಅವರು, ಆಡುಗೋಡಿಯಲ್ಲಿ ಅರಣ್ಯಭೂಮಿಯಲ್ಲಿ ಟವರ್‌ಅಳವಡಿಸಲು ಅರಣ್ಯ ಭೂಮಿಯನ್ನು ಗುರುತಿಸಲಾಗಿದ್ದು, ತ್ವರಿತವಾಗಿ ಸಂಪರ್ಕ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ದೂರಸಂಚಾರ ನಿಗಮದ ಹಿರಿಯ ಮಹಾಪ್ರಬಂಧಕ ವಿನಯ್‌ಕುಮಾರ್ ಸಿನ್ಹ, ಶ್ರೀಮತಿ ಸಮಿತಾ ಸರ್ಕಾರ್, ಶ್ರೀಮತಿ ಶ್ರೀದೇವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ಕುಮಾರ್, ದೂರಸಂಪರ್ಕ ಸಲಹಾ ಸಮಿತಿಯ ಸದಸ್ಯರಾದ ಸುಧೀಂದ್ರ ಕಟ್ಟೆ, ಅಶೋಕಮೂರ್ತಿ, ನಾಗರಾಜ್ ಬೊಬ್ಬಿಗೆ, ಟಿ.ಪಿ.ನಿರಂಜನ್, ರವಿ ಕೈತೋಟ, ಪಿ.ಶಿವಪ್ಪ , ಗಣಪತಿ ಬಿ., ಡಿ.ಶಿವಯೋಗಿ , ಪ್ರಸನ್ನ ಕೆರೆಕೈ ಸೇರಿದಂತೆ ದೂರಸಂಪರ್ಕ ಇಲಾಖೆಯ ಅಭಿಯಂತರರು, ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು..