ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸಮಿತಿ ಅಧ್ಯಕ್ಷ ಸ್ವಾಮಿಗೌಡ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತದ ಅತ್ಯಂತ ಪ್ರಭಾವ ಶಕ್ತಿಶಾಲಿ ತತ್ವಜ್ಞಾನಿಯಲ್ಲಿ ಒಬ್ಬರು. ಭಾರತದ ಸಾಮಾಜಿಕ ಸಮಸ್ಯೆಗಳ ಬಗೆಗೆ ವಿಶಾಲ ದೂರ ದೃಷ್ಟಿ ಸಂಕೇತವಾಗಿ ಪರಿಗಣಿತರಾಗಿದ್ದಾರೆ. ಹಾಗಾಗಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನ ಎಂದು ಜನವರಿ 12 ರಂದು ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಚೆಲುವೇಗೌಡ, ಕರವೇ ಮುಖಂಡ ಗಂಜಾಂ ಯೋಗಣ್ಣ, ಕಸಾಪ ನಗರ ಘಟಕ ಅಧ್ಯಕ್ಷ ಸುರೇಶ್, ಕಸಾಪ ಕೋಶಾಧ್ಯಕ್ಷ ಬಸವರಾಜು, ಹೊಸೂರ್ ರಮೇಶ್, ಸಂತೆ ಮಾಳ ಸುರೇಶ್, ಆಟೋ ರಾಮಣ್ಣ ಸೇರಿದಂತೆ ಇತರರು ಇದ್ದರು.ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನಶ್ರೀರಂಗಪಟ್ಟಣ:
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರಜ್ಞಾವಂತರ ವೇದಿಕೆ ಅಧ್ಯಕ್ಷ ವಕೀಲ ವೆಂಕಟೇಶ್ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು.ನಂತರ ವೆಂಕಟೇಶ್ ಮಾತನಾಡಿ, ಪ್ರಸ್ತುತ ಯುವ ಪೀಳಿಗೆಗೆ ಸ್ವಾಮಿ ವಿವೇಕಾನಂದರ ಆದರ್ಶ ವ್ಯಕ್ತಿಯಾಗಿದ್ದಾರೆ. ಯುವಕರು ಸಾಧಿಸುವ ಗುರಿ ಇಟ್ಟುಕೊಂಡು ಬೇರಡೆ ಗಮನ ಸೆಳೆಯದೆ ಉತ್ತಮ ಕಾರ್ಯಗಳನ್ನು ಸಾಧಿಸಬೇಕು ಎಂದರು.
ಅಂದು ಸ್ವಾಮಿ ವಿವೇಕಾನಂದರು ಭಾರತವನ್ನು ಇಡೀ ಪ್ರಪಂಚದಲ್ಲಿ ಗುರುತಿಸುವಂತೆ ಮಾಡಿದ್ದರು. ಸರ್ವ ಜನಾಂಗದ ಶಾಂತಿಯ ತೋಟ ಎಂಬಂತೆ ಪ್ರತಿಯೊಬ್ಬ ಭಾರತೀಯನು ಸಹ ಅಂತಹ ವ್ಯಕ್ತಿಯನ್ನು ಸ್ಮರಿಸಬೇಕು ಎಂದರು.ಈ ವೇಳೆ ಮುಸ್ಲಿಂ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಅಪ್ಸರ್ ಪಾಷ, ಮುಖಂಡರಾದ ಅಯ್ಯಬ್ ಷರಿಪ್, ಅಪ್ತಬ್ ಅಹಮದ್, ಗಂಜಾಂ ಅಬ್ಬೆದುಬ್ಬ ಚರ್ಚಿನ ಪಾಧರ್ ಸಾಗೈಪುಷ್ಪರಾಜ್, ಪ್ರಸನ್ನ ಪಾಲಹಳ್ಳಿ, ದಾಸಪ್ರಕಾಶ್ ಬಲ್ಲೆನಹಳ್ಳಿ, ನಿವೃತ್ತ ಶಿಕ್ಷಕ ವೀರಭದ್ರಪ್ಪ, ಬೌದ್ಧ ಮಹಾಸಭಾ ಮಾಜಿ ಅಧ್ಯಕ್ಷ ಕೆ.ಟಿ.ರಂಗಯ್ಯ, ಜಯಶಂಕರ ಕಡತನಾಳ ಸೇರಿದಂತೆ ಇತರರು ಇದ್ದರು.
ವಿವೇಕಾನಂದ ಜಯಂತಿ ಆಚರಣೆಶ್ರೀರಂಗಪಟ್ಟಣ:
ತಾಲೂಕಿನ ಗಾಮನಹಳ್ಳಿ ಜ್ಞಾನ ಭಾರತಿ ಪ್ರೌಢಶಾಲೆಯಲ್ಲಿ 163ನೇ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು.ಶಾಲೆ ಮುಖ್ಯ ಶಿಕ್ಷಕರಾದ ಮಹಾದೇವಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ವಿವೇಕಾನಂದರ ಒಂದೊಂದು ವಾಕ್ಯವು ವಿವೇಕ ವಾಣಿ, ವೃತ್ತಿಪರ ಮತ್ತು ವೈಯುಕ್ತಿಕ ಪ್ರಗತಿಗೆ ಬಯಸುವವರಿಗೆ ದಾರಿ ದೀಪವಾಗಿದೆ ಎಂದರು.
ವಿವೇಕಾನಂದರು ಚಿಕಾಗೋ ಗ್ರಂಥಾಲಯದಲ್ಲಿ ಪ್ರತಿನಿತ್ಯವೂ ಭಾರಿ ಸಂಖ್ಯೆಯ ಪುಸ್ತಕಗಳನ್ನು ಮನೆಗೆ ಕೊಂಡೊಯ್ದು ಓದಿ ಮತ್ತೆ ಮಾರನೇ ದಿನ ತಪ್ಪದೇ ಪುಸ್ತಕಗಳನ್ನು ಹಿಂದಿರುಗಿಸುತ್ತಿದ್ದರು. ಒಂದೇ ದಿನ ಓದುತ್ತೀರಾ ಎಂದು ಕೇಳಿದರೆ ಪ್ರತಿಪುಟವನ್ನು ಬಿಡದೆ ಓದುತ್ತೇನೆ ಎಂದು ಹೇಳುತ್ತಿದ್ದರಂತೆ. ಹಾಗೆಯೇ ವಿದ್ಯಾರ್ಥಿಗಳು ಓದುವುದನ್ನು ವಿವೇಕಾನಂದರಂತೆ ಅನುಸರಿಸಿದಾಗ ಮಾತ್ರ ಜಗತ್ತಿಗೆ ಬೆಳಕಾಗಬಹುದು ಎಂದು ಸಲಹೆ ನೀಡಿದರು.ಶಾಲೆಯ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.