ಕನ್ನಡಪ್ರಭ ವಾರ್ತೆ ಬೆಂಗಳೂರುನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ಮಂಗಳವಾರ ಬಸವನಗುಡಿಯ ಗಾಂಧಿ ಬಜಾರ್ ಸೇರಿದಂತೆ ವಿವಿಧೆಡೆ ಒಟ್ಟು 17 ಕಿ.ಮೀ. ಮಾರ್ಗದಲ್ಲಿನ ಒತ್ತುವರಿ ತೆರವುಗೊಳಿಸಲಾಗಿದೆ.
ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ 11.62 ಕಿ.ಮೀ, ಪಶ್ಚಿಮದಲ್ಲಿ 1.10 ಕಿ.ಮೀ, ದಕ್ಷಿಣದಲ್ಲಿ 1.60 ಕಿ.ಮೀ ಮತ್ತು ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ 2.85 ಕಿ.ಮೀ ಸೇರಿದಂತೆ ಒಟ್ಟು 17 ಕಿಲೋಮೀಟರ್‌ಗಿಂತಲೂ ಹೆಚ್ಚು ಪಾದಚಾರಿ ಮಾರ್ಗವನ್ನು ಒತ್ತುವರಿ ಮುಕ್ತಗೊಳಿಸಲಾಗಿದೆ.
10 ನಿಮಿಷ ಟೈಮ್ ಕೊಡಿ ಎಂದ ಮಹಿಳೆ:ಗಾಂಧಿ ಬಜಾರ್‌ನಲ್ಲಿ ಫುಟ್‌ಪಾತ್ ಒತ್ತುವರಿ ಮಾಡಿಕೊಂಡು ಚಪ್ಪಲಿ ಮಾರಾಟ ಮಳಿಗೆ ಇಟ್ಟುಕೊಂಡಿದ್ದ ಮಹಿಳೆಯೊಬ್ಬರು, ಬೆಳಗ್ಗೆ ಜೆಸಿಬಿ ಬರುತ್ತಿದ್ದಂತೆಯೇ ಗಾಬರಿಗೊಂಡರು. ಚಪ್ಪಲಿ ಮತ್ತಿತರ ವಸ್ತುಗಳನ್ನು ತೆರವುಗೊಳಿಸಲು 10 ನಿಮಿಷ ಟೈಮ್ ಕೊಡಿ ಎಂದು ಕೇಳಿಕೊಂಡರು. ಆಗ ಅಧಿಕಾರಿಗಳು ಸ್ವಲ್ಪ ಸಮಯ ನೀಡಿದರು. ಕೂಡಲೇ ಮಹಿಳೆ ಬ್ಯಾಗ್‌ನಲ್ಲಿ ಚಪ್ಪಲಿಗಳನ್ನು ತುಂಬಿಕೊಂಡರು. ಬಳಿಕ ಅಧಿಕಾರಿಗಳು ತಾತ್ಕಾಲಿಕ ಪೆಟ್ಟಿ ಅಂಗಡಿಯನ್ನು ತೆರವು ಮಾಡಿದರು. ಮಾರ್ಗದಲ್ಲಿನ ಚಪ್ಪಲಿ ಅಂಗಡಿ, ಬಟ್ಟೆ, ಬಳೆ, ಸ್ಟೇಷನರಿ ವಸ್ತುಗಳ ಮಾರಾಟ ಟೇಬಲ್‌ಗಳನ್ನು ತೆರವುಗೊಳಿಸಲಾಯಿತು.