ಸರ್ಕಾರದಿಂದ 170 ಕೋಟಿ ಅನುದಾನ: ಶಾಸಕ ಮುನಿರಾಜು

KannadaprabhaNewsNetwork |  
Published : May 07, 2026, 02:00 AM IST
ಮುನಿರಾಜು | Kannada Prabha

ಸಾರಾಂಶ

ನಮ್ಮ ಕ್ಷೇತ್ರದ ರಾಜ ಕಾಲುವೆಗಳ ಕಾಮಗಾರಿ ಅಭಿವೃದ್ಧಿಗೆ 170 ಕೋಟಿ ಅನುದಾನ ಸರ್ಕಾರ ನೀಡಿದೆ. ಆದ ಕಾರಣ ರಾಜ ಕಾಲುವೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಸ್.ಮುನಿರಾಜು ತಿಳಿಸಿದರು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ ನಮ್ಮ ಕ್ಷೇತ್ರದ ರಾಜ ಕಾಲುವೆಗಳ ಕಾಮಗಾರಿ ಅಭಿವೃದ್ಧಿಗೆ 170 ಕೋಟಿ ಅನುದಾನ ಸರ್ಕಾರ ನೀಡಿದೆ. ಆದ ಕಾರಣ ರಾಜ ಕಾಲುವೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಸ್.ಮುನಿರಾಜು ತಿಳಿಸಿದರು.ಡಿಫೆನ್ಸ್ ಕಾಲೋನಿ ಹತ್ತಿರದ ರಾಜ ಕಾಲುವೆ, ಕಾವೇರಿ ಬಡಾವಣೆ ಮತ್ತು ಧನಪಾಲ್ ಲೇಔಟ್ ಹತ್ತಿರದ ರಾಜ ಕಾಲುವೆಗಳ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿ, ರಾಜಕಾಲುವೆಗಳ ತಡೆಗೋಡೆ ನಿರ್ಮಾಣ, ಅದರ ಮೇಲೆ ಪೆನ್ಸಿಂಗ್, ಒತ್ತುವರಿ ತೆರವುಗಳ ಕಾರ್ಯ ನಡೆಯಲಿದೆ. ರಾಜ ಕಾಲುವೆಗಳಿಗೆ ಯಾರೂ ಸಹ ಕಸ ಹಾಕದಂತೆ ನಿರ್ಮಾಣ ಮಾಡಿ ನೀರು ಸರಾಗವಾಗಿ ಹರಿಯುವಂತೆ ಗುಣಮಟ್ಟದ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

ಸುಬ್ರಹ್ಮಣ್ಯಸ್ವಾಮಿ ಹೊಸ ಸ್ಥಿರ ಬಿಂಬ ಪ್ರತಿಷ್ಠಾಪನೆ

ಪೀಣ್ಯ ದಾಸರಹಳ್ಳಿ: ಹೆಸರಘಟ್ಟ ಮುಖ್ಯ ರಸ್ತೆಯ ಎಂಇಐ ಬಡಾವಣೆ ಉದ್ಯಾನವನದಲ್ಲಿರುವ ಶ್ರೀ ಗಣಪತಿ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶ್ರೀ ಗಣಪತಿಯ 14ನೇ ವರ್ಷದ ವಾರ್ಷಿಕೋತ್ಸವ ಮತ್ತು ಶ್ರೀವಲ್ಲಿ ದೇವಸೇನಾ ಸಮೇತ ಸುಬ್ರಹ್ಮಣ್ಯಸ್ವಾಮಿ ದೇವರ ನೂತನ ಸ್ಥಿರ ಬಿಂಬ ಪ್ರತಿಷ್ಠಾಪನೆ ಹಾಗೂ ಆದಿತ್ಯಾದಿ ನವಗ್ರಹ ದೇವರ ಪುನರ್ ಪ್ರತಿಷ್ಠಾಪನಾ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವದಲ್ಲಿ ಶಾಸಕ ಎಸ್.ಮುನಿರಾಜು ಭಾಗಿಯಾಗಿದ್ದರು. ಬಿಜೆಪಿ ಮುಖಂಡ ಲಕ್ಷ್ಮಣ್ ಗೌಡ್ರು, ದೇವಸ್ಥಾನದ ಅಧ್ಯಕ್ಷ ಆರ್.ಕೃಷ್ಣಪ್ಪ, ಉಪಾಧ್ಯಕ್ಷರಾದ ಕೆ.ಕೆ.ರಾಜಣ್ಣ, ಸಿ.ಎಸ್. ಚಂದ್ರಶೇಖರ್, ಕಾರ್ಯದರ್ಶಿಗಳಾದ ಪಿ.ಬಿ. ನಂಜುಂಡಯ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೂಡ್ಸ್‌ ಶೆಡ್ ಲಾರಿ ನಿಲುಗಡೆ ಜಾಗ ಉಳಿಸಿ
ಶೀಘ್ರ ಕಾಮಗಾರಿ ಪೂರ್ಣಗೊಳಿಸಿ: ರಾವ್