೧೮೧೮೮ ಮತದಾರರು ಶಾಶ್ವತವಾಗಿ ಸ್ಥಳಾಂತರ: ನಂದಾ ಹಣಬರಟ್ಟಿ

KannadaprabhaNewsNetwork |  
Published : Aug 25, 2026, 02:45 AM IST
ಸಭೆಯಲ್ಲಿ ಮತದಾರರ ನೋಂದಣಾಧಿಕಾರಿ ನಂದಾ ಹಣಬರಟ್ಟಿ ಮಾತನಾಡಿದರು. | Kannada Prabha

ಸಾರಾಂಶ

ಶಿರಹಟ್ಟಿಯಲ್ಲಿ ಈ ಮೊದಲು ೨೫೨ ಮತಗಟ್ಟೆಗಳಿದ್ದು, ಇದೀಗ ಹೊಸದಾಗಿ ೭ ಮತಗಟ್ಟೆಗಳು(ಶಿವಾಜಿನಗರ, ಕುಂದ್ರಳ್ಳಿ, ರಾಮಗೇರಿ, ಆದ್ರಳ್ಳಿ, ಹರದಗಟ್ಟಿ, ಹುಲ್ಲೂರು ಹಾಗೂ ಕೋಗನೂರು) ಸೇರ್ಪಡೆಯಾಗಿರುವುದರಿಂದ ಒಟ್ಟು ೨೫೯ ಮತಗಟ್ಟೆಗಳಾಗಿವೆ.

ಶಿರಹಟ್ಟಿ: ಕರಡು ಮತದಾರರ ಪಟ್ಟಿ ಪ್ರಕಟವಾಗುವ ಮೊದಲು ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ ೨೩೦೨೬೮ ಇದ್ದು, ಇದೀಗ ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ೨೦೦೪೧೯ ಮತದಾರರು ಇದ್ದಾರೆ ಎಂದು ಮತದಾರರ ನೋಂದಣಾಧಿಕಾರಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಟ್ಟಿ ಹೇಳಿದರು.ಸೋಮವಾರ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ನಡೆದ ಮತದಾರರ ಪಟ್ಟಿಗಳ ಸಮಗ್ರ ವಿಶೇಷ ಪರಿಷ್ಕರಣೆ- ೨೦೨೬ರ ಸಂಬಂಧ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸುವ ಕುರಿತು ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾಹಿತಿ ನೀಡಿದ ಅವರು, ಶಿರಹಟ್ಟಿಯಲ್ಲಿ ಈ ಮೊದಲು ೨೫೨ ಮತಗಟ್ಟೆಗಳಿದ್ದು, ಇದೀಗ ಹೊಸದಾಗಿ ೭ ಮತಗಟ್ಟೆಗಳು(ಶಿವಾಜಿನಗರ, ಕುಂದ್ರಳ್ಳಿ, ರಾಮಗೇರಿ, ಆದ್ರಳ್ಳಿ, ಹರದಗಟ್ಟಿ, ಹುಲ್ಲೂರು ಹಾಗೂ ಕೋಗನೂರು) ಸೇರ್ಪಡೆಯಾಗಿರುವುದರಿಂದ ಒಟ್ಟು ೨೫೯ ಮತಗಟ್ಟೆಗಳಾಗಿವೆ ಎಂದರು.ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಕ್ಷೇತ್ರದಲ್ಲಿ ೧೦೧೫೬೩ ಪುರುಷ ಮತದಾರರು, ೯೮೮೪೭ ಮಹಿಳಾ ಮತದಾರರು ಹಾಗೂ ೦೯ ತೃತೀಯ ಲಿಂಗ ಮತದಾರರು ಇದ್ದಾರೆ. ಕರಡು ಮತದಾರರ ಪಟ್ಟಿ ಪ್ರಕಟವಾಗುವ ಮೊದಲು ಇದ್ದ ಮತದಾರರಲ್ಲಿ ೭೨೪೪ ಮತದಾರರು ಸಾವಿಗೀಡಾಗಿದ್ದಾರೆ. ೧೮೧೮೮ ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. ಇನ್ನೂ ಪತ್ತೆ ಹಚ್ಚಲಾಗದ ೮೧೨ ಮತದಾರರು ಇದ್ದಾರೆ. ಈಗಾಗಲೇ ನೋಂದಾಯಿಸಲಾಗಿರುವ ೩೫೫೨ ಮತದಾರರಿದ್ದು, ಇತರೆ ೫೩ ಮತದಾರರನ್ನು ಒಳಗೊಂಡಂತೆ ಒಟ್ಟು ೨೯೮೪೯ ಮತದಾರರು ಕಡಿಮೆಯಾಗಿದ್ದಾರೆ. ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ ಫಾರಂ ೦೬ಕ್ಕೆ ೭೩೦ ಅರ್ಜಿಗಳು, ಫಾರಂ ೦೭ಗೆ ೨೧೦ ಅರ್ಜಿಗಳು ಹಾಗೂ ಫಾರಂ ೦೮ಕ್ಕೆ ೧೮೮೦ ಅರ್ಜಿಗಳು ಹೀಗೆ ಒಟ್ಟು ೨೮೨೦ ಅರ್ಜಿಗಳು ಸ್ವೀಕೃತವಾಗಿವೆ ಎಂದರು. ಈ ವೇಳೆ ಶಿರಹಟ್ಟಿ ತಹಸೀಲ್ದಾರ್ ಕೆ. ರಾಘವೇಂದ್ರ ರಾವು, ಲಕ್ಷ್ಮೇಶ್ವರ ತಹಸೀಲ್ದಾರ್ ಕೆ. ಧನಂಜಯ, ಮುಖಂಡರಾದ ಸುಜಾತಾ ದೊಡ್ಡಮನಿ, ಶಂಕರ ಮರಾಠೆ, ಬಸವರಾಜ ವಡವಿ, ಶರಣಪ್ಪ ಹೂಗಾರ ಹಾಗೂ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿತ್ಯವೂ ಸೂರ್ಯೋಪಾಸನೆ ನಡೆಯಲಿ: ಸ್ವರ್ಣವಲ್ಲೀ ಶ್ರೀ
ಸಿದ್ಧಗೊಳ್ಳುತ್ತಿವೆ ತರಹೇವಾರಿ ಗಣೇಶನ ಮೂರ್ತಿಗಳು