19ನೇ ಸದ್ಭಾವನಾ ಪಾದಯಾತ್ರೆ; ಶಿವಯೋಗೀಶ್ವರರ 974 ಜಯಂತಿ

KannadaprabhaNewsNetwork |  
Published : Sep 01, 2025, 01:03 AM IST
31ಕೆಪಿಆರ್‌ಸಿಆರ್‌ 02:  | Kannada Prabha

ಸಾರಾಂಶ

ಇಲ್ಲಿನ ಸಾವಿರ ದೇವರ ಸಂಸ್ಥಾನ ಕಿಲ್ಲೇಬೃಹನ್ಮಠದಿಂದ 19 ನೇ ಸದ್ಭಾವನಾ ಪಾದಯಾತ್ರೆ ಮತ್ತು ಕೊಳಂಕಿ ಜೀವೈಕ್ಯ ಗುರುಪಾದ ಶಿವಯೋಗೀಶ್ವರ ಶಿವಾಚಾರ್ಯರ 974 ನೇ ಜಯಂತಿಯ ಪರ್ವ ಸಮಾರಾಧನೆ ಪ್ರಯುಕ್ತ ಭಾನುವಾರ ಸದ್ಭವನಾ ಯಾತ್ರೆಯನ್ನು ನಡೆಸಲಾಯಿತು.

ರಾಯಚೂರು: ಇಲ್ಲಿನ ಸಾವಿರ ದೇವರ ಸಂಸ್ಥಾನ ಕಿಲ್ಲೇಬೃಹನ್ಮಠದಿಂದ 19 ನೇ ಸದ್ಭಾವನಾ ಪಾದಯಾತ್ರೆ ಮತ್ತು ಕೊಳಂಕಿ ಜೀವೈಕ್ಯ ಗುರುಪಾದ ಶಿವಯೋಗೀಶ್ವರ ಶಿವಾಚಾರ್ಯರ 974 ನೇ ಜಯಂತಿಯ ಪರ್ವ ಸಮಾರಾಧನೆ ಪ್ರಯುಕ್ತ ಭಾನುವಾರ ಸದ್ಭವನಾ ಯಾತ್ರೆಯನ್ನು ನಡೆಸಲಾಯಿತು.

ಕಿಲ್ಲೇಬೃಹನ್ಮಠದಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆ ಕಾರ್ಯಕ್ರಮವನ್ನು ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್‌ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಮಾಜದಲ್ಲಿರುವ ಮಠ-ಮಾನ್ಯಗಳು ಶಾಂತಿಸಾಮರಸ್ಯದ ಸಂಕೇತಗಳಾಗಿವೆ. ಶ್ರೀಮಠದಿಂದ ಜಾತಿ,ಮತ ಬೇದಭಾವವಿಲ್ಲದೇ ಪ್ರತಿ ವರ್ಷ ಹಮ್ಮಿಕೊಳ್ಳುವ ಸದ್ಭಾವನಾ ಪಾದಯಾತ್ರೆಯನ್ನು ನಡೆಸಲಾಗುತ್ತಿದೆ ಈ ಮುಖಾಂತರ ಜನರಿಗೆ, ರೈತರಿಗೆ, ಒಳಿತಾಗಲಿ ಎಂಬುವ ಸದುದ್ದೇಶದಿಂದು ಈ ಪಾದಯಾತ್ರೆಯನ್ನು ನಡೆಸಲಾಗುತ್ತಿದೆ ಎಂದರು.

ಮುಖಂಡ ಮೊಹಮ್ಮದ್‌ ಶಾಲಂ ಮಾತನಾಡಿ, ಪಾದಯಾತ್ರೆ ಮುಖಾಂತರ ಸಮಾಜದಲ್ಲಿ ಶಾಂತಿ-ಸಾಮರಸ್ಯವನ್ನು ಸಾರುವ ಕಾರ್ಯವನ್ನು ಶ್ರೀಮಠದ ಸ್ವಾಮೀಗಳು ಮಾಡಿಕೊಂಡು ಬರುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.

ಧರ್ಮ ಸಂದೇಶ ನೀಡಿದ ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ಶಿವಾಚಾರ್ಯರು, ಮನುಷ್ಯರು ಕಷ್ಟಗಳನ್ನು ಅರಿತು ಕೊಂಡು ಮುನ್ನಡೆಯಬೇಕು. ಸುಖ-ದುಖಃಗಳನ್ನು ಸಮಾನವಾಗಿ ಕಾಣುವ ಮನೋಭಾವನೆಯನ್ನು ಬೆಳೆಸಿಕೊಂಡಿಲ್ಲಿ ಬದುಕಿನಲ್ಲಿ ಎದುರಾಗುವ ಎಲ್ಲ ರೀತಿಯ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಬೇಕು ಎಂದು ನುಡಿದರು.

ಸಮಾರಂಭದ ಸಾನ್ನಿಧ್ಯವನ್ನು ಕಿಲ್ಲೇಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ವಹಿಸಿದ್ದರು. ತಂಡಿಕೇರ ಗಂಗಾಧರ ಶಿವಾಚಾರ್ಯರು, ಅಭಿನವ ಸೋಮನಾಥ ಶಿವಾಚಾರ್ಯರು, ಶಂಭು ಸೋಮನಾಥ ಶಿವಾಚಾರ್ಯರು, ಕೀರಲಿಂಗೇಶ್ವರ ಶರಣರು, ವೇದಮೂರ್ತಿ ರಾಚಯ್ಯಪ್ಪ, ಶರಣು, ಬಸವರಾಜ, ಎನ್‌.ಶಿವಶಂಕರ, ಡಾಜವುಳಿ ನಿಜಗುಣಪ್ಪ, ನರಸಿಂಹಲು, ಪಂಪಾಪತಿ ಶಾಸ್ತ್ರಿ, ನರಸಪ್ಪ, ರೇಣುಕಾ ಸ್ವಾಮಿ, ಶರಣಯ್ಯ, ಬಸವರಾಜ, ವೆಂಕಟೇಶ ಸೇರಿದಂತೆ ಮುಖಂಡರು,ಮಹಿಳೆಯರು ಭಕ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ