ಕನ್ನಡಪ್ರಭವಾರ್ತೆ ಪಾವಗಡ
ತಾಲೂಕಿನ ನೀಲಮ್ಮನಹಳ್ಳಿ (ಕಾಮನದುರ್ಗ) ಗ್ರಾಮದ ಅಲ್ಪ ಸಂಖ್ಯಾತರ ಕಾಲೋನಿಯ 50ಲಕ್ಷ ವೆಚ್ಚದ ಸಿಸಿರಸ್ತೆ ಹಾಗೂ ಚರಂಡಿ ನಿರ್ಮಾಣ ಮತ್ತು ತಾಲೂಕಿನ ಪಳವಳ್ಳಿಯಲ್ಲಿ 80 ಲಕ್ಷ ವೆಚ್ಚದ ಜೆಜೆಎಂ ಕಾಮಗಾರಿ ಹಾಗೂ ಇದೇ ಗ್ರಾಮದಲ್ಲಿ 50 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಸೇರಿ ತಾಲೂನಧ್ಯಂತ ಒಟ್ಟು 2.30ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸೋಮವಾರ ಶಾಸಕ ಎಚ್.ವಿ.ವೆಂಕಟೇಶ್ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.ಮೂಲಭೂತ ಸಮಸ್ಯೆ ಇರುವ ತಾಲೂಕಿನ ಹಲವು ಗ್ರಾಮಗಳಿಗೆ ಪ್ರವಾಸ ಕೈಗೊಂಡಿದ್ದ ಶಾಸಕ ಎಚ್.ವಿ.ವೆಂಕಟೇಶ್ ಮೊದಲಿಗೆ ತಾಲೂಕಿನ ಕಾಮನದುರ್ಗ ಗ್ರಾಮದ ಅಲ್ಪ ಸಂಖ್ಯಾತರ ಕಾಲೋನಿಯಲ್ಲಿ ಸಿಸಿರಸ್ತೆ ಹಾಗೂ ಚರಂಡಿ ಇತರೆ ಮೂಲಭೂತ ಸಮಸ್ಯೆ ನಿವಾರಣೆಗೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ 50ಲಕ್ಷ ವೆಚ್ಚದ ಕಾಮಗಾರಿ ಪ್ರಗತಿಗೆ ಗುದ್ದಲಿಪೂಜೆ ನೆರೆವೇರಿಸಿದರು.
ಇದಾದ ಬಳಿಕ ತಾಲೂಕಿನ ಪಳವಳ್ಳಿ ಗ್ರಾಮದಲ್ಲಿ ಮನೆಮನೆ ನಲ್ಲಿ ಆಳವಡಿಕೆಗೆ 80 ಲಕ್ಷ ವೆಚ್ಚದ ಜೆಜೆಎಂ ಕಾಮಗಾರಿಗೆ ಚಾಲನೆ ಮತ್ತು ಇದೇ ಗ್ರಾಮದಲ್ಲಿ 50ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣದ ಕಾಮಗಾರಿಗೆ ಗುದ್ದಲಿಪೂಜೆ ನೆರೆವೇರಿಸಿದರು.ತಾಲೂಕಿನ ಚಿಕ್ಕಹಳ್ಳಿ ಗ್ರಾಮದಲ್ಲಿ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ 50 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು ಸರ್ಕಾರದ ನಿಯಮನುಸಾರ ಕಾಲಮಿತಿಯೊಳಗೆ ಗುಣಮಟ್ಟದ ಕಾಮಗಾರಿ ನಿರ್ವಹಣೆ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಈ ವೇಳೆ ಪಳವಳ್ಳಿ ಗ್ರಾಪಂನ ಕೆಒಎಫ್ ನಿರ್ದೇಶಕ ಎ.ನಾರಾಯಣಪ್ಪ,ಗ್ರಾಪಂ ಅಧ್ಯಕ್ಷ ದಿನೇಶ್ ಮುಖಂಡರಾದ ನಾಗರಾಜು,ಹರೀಶ್,ಕೃಷ್ಣಮೂರ್ತಿ,ಹೊಸಹಳ್ಳಿ ಮಂಜುನಾಥ್,ವೆಂಕಟರಾಮ,ಗುತ್ತಿಗೆದಾರ ಶಿವು,ಜಿ.ಪಂ ಇಲಾಖೆಯ ಸುರೇಶ್ ರವರು,ಬಸವಲಿಂಗಪ್ಪ ಪಿಡಿಒ ನಬಿ ರಸುಲ್ಲಾ ಅಭಿ,ಹಾಗೂ ತಾಲೂಕಿನ ಚಿಕ್ಕಹಳ್ಳಿ ಗ್ರಾ ಪಂ ಅಧ್ಯಕ್ಷೆ ಮೀನಾಕ್ಷಿ,ಮುಖಂಡರಾದ ಮಾರಪ್ಪ,ಬಾಬು,ವೆಂಕಟೇಶಪ್ಪ,ನಾಗರಾಜು,ಗೋವಿಂದಪ್ಪ,ವಿರೇಶ್, ಜಗದೀಶ್,ಗೋಪಾಲ ಹಾಗೂ ನೀಲಮ್ಮನಹಳ್ಳಿ (ಕಾಮನದುರ್ಗ) ಗ್ರಾಪಂ ಅಧ್ಯಕ್ಷೆ ಸರಿತಾ,ಮುಖಂಡರಾದ ಅಂಜನರೆಡ್ಡಿ,ನಾಗಭೂಷಣಪ್ಪ,ಅಕ್ಕಲಪ್ಪ,ಶ್ರೀರಾಮಪ್ಪ,ಮುರುಳಿಧರರೆಡ್ಡಿ ಇತರೆ ಹಲವಾರು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಗುದ್ದಲಿಪೂಜೆ ಕಾಮಗಾರಿಯ ಪ್ರಗತಿಗೆ ಸಾಥ್ ನೀಡಿದರು.