ಜಿಲ್ಲೆಯಲ್ಲಿ ಸತತವಾಗಿ ಮಳೆ ಮುಂದುವರಿದಿದ್ದು, 2 ಮನೆಗಳು ಹಾನಿಗೀಡಾಗಿವೆ. ನಾಲ್ಕು ಜಾನುವಾರುಗಳು ಸಾವನ್ನಪ್ಪಿವೆ. ಕಳೆದ 3 ದಿನಗಳಿಂದ ಜಿಲ್ಲೆಯ ಜನತೆ ಮಲೆನಾಡಿನ ಮಳೆ ಅನುಭವ ಕಾಣುವಂತಾಗಿದೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲೆಯಲ್ಲಿ ಸತತವಾಗಿ ಮಳೆ ಮುಂದುವರಿದಿದ್ದು, 2 ಮನೆಗಳು ಹಾನಿಗೀಡಾಗಿವೆ. ನಾಲ್ಕು ಜಾನುವಾರುಗಳು ಸಾವನ್ನಪ್ಪಿವೆ. ಕಳೆದ 3 ದಿನಗಳಿಂದ ಜಿಲ್ಲೆಯ ಜನತೆ ಮಲೆನಾಡಿನ ಮಳೆ ಅನುಭವ ಕಾಣುವಂತಾಗಿದೆ.
ಹರಿಹರ ತಾಲೂಕಿನಲ್ಲಿ ಜೋರು ಮಳೆಯಿಂದಾಗಿ 4 ಜಾನುವಾರುಗಳು ಮೃತಪಟ್ಟಿವೆ. ದಾವಣಗೆರೆ ತಾಲೂಕಿನಲ್ಲಿ 1 ಮನೆ ಭಾಗಶಃ, ಚನ್ನಗಿರಿ ತಾಲೂಕಿನಲ್ಲಿ 1 ಮನೆ ತೀವ್ರ ಪ್ರಮಾಣದಲ್ಲಿ ಹಾನಿಯಾಗಿದೆ. ಕಂದಾಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಂದ ಪರಿಶೀಲನೆ ಕಾರ್ಯ ಮುಂದುವರಿದಿದೆ.
ಇಡೀ ಜಿಲ್ಲೆಯ ಬಹುತೇಕ ಕಡೆ ಬುಧವಾರವೂ ದಟ್ಟಮೋಡಗಳು ಆವರಿಸಿವೆ. ಬೆಳಗ್ಗೆಯಿಂದಲೇ ಮಳೆ ಸುರಿಯುವಂತಹ ಪರಿಸ್ಥಿತಿ ಇತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಸುಮಾರು ಹೊತ್ತು ಅಲ್ಲಲ್ಲಿ ಜೋರು ಮಳೆಯಾಗಿದ್ದು, ಸ್ವಲ್ಪ ಹೊತ್ತು ಬಿಡುವು ಕೊಟ್ಟಿದ್ದ ಮಳೆರಾಯ ಮಕ್ಕಳು ಶಾಲೆ, ಕಾಲೇಜಿನಿಂದ ಮನೆಗೆ ಮರಳಲು, ಕೆಲಸ ಮುಗಿಸಿಕೊಂಡು ಜನರು ಮನೆ ತಲುಪಲೇನೋ ಎಂಬಂತೆ ಬಿಡುವು ಕೊಟ್ಟು ಮತ್ತೆ ರಾತ್ರಿ ಪೂರ್ತಿ ಸುರಿಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.