ಅಂಶಿ ಪ್ರಸನ್ನಕುಮಾರ್
ಮೈಸೂರು ತಾಲೂಕು ನಗರ್ತಹಳ್ಳಿಯ ನಾಗರತ್ನಮ್ಮ ಅವರು ನಿಂಬೆ ಹಣ್ಣು, ಕರಿಬೇವಿನ ಸೊಪ್ಪು ಮಾರಾಟದಿಂದ ವಾರ್ಷಿಕ ಒಂದೂವರೆ ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ.
ಅವರಿಗೆ ಎರಡು ಎಕರೆ ಜಮೀನಿದೆ. ನೀರಾವರಿ ಸೌಲಭ್ಯವಿದೆ. ಒಂದು ಕೊಳವೆಬಾವಿಯನ್ನು ಕೊರೆಸಿದ್ದಾರೆ. ನಿಂಬೆ-400, ಕರಿಬೇವು- 80, ಹೆಬ್ಬೇವು- 70, ತೆಂಗು- 10 ಮರಗಳಿವೆ. ಉಳಿಕೆ 15 ಕುಂಟೆ ಜಮೀನಿನಲ್ಲಿ ತೊಗರಿ,. ಜೋಳ ಬೆಳೆಯುತ್ತಾರೆ. ಪ್ರತಿ ವರ್ಷ ಬೇರೆ ಕಡೆಯಿಂದ ಎರಡು ಟ್ರ್ಯಾಕ್ಟರ್ ಕುರಿ ಗೊಬ್ಬರ ತರಿಸಿ ಜಮೀನಿಗೆ ಹಾಕುತ್ತಾರೆ.ನಿಂಬೆ ಹಣ್ಣನ್ನು ಜಮೀನಿನ ಬಳಿಯೇ ಬಂದು ಖರೀದಿಸುತ್ತಾರೆ. ಕೆಲವೊಮ್ಮೆ ಮೈಸೂರಿನ ವಿವೇಕಾನಂದ ವೃತ್ತದಲ್ಲಿ ತರಕಾರಿ ಮಾರುವವರಿಗೆ ಪೂರೈಸುವುದು ಉಂಟು. ಕರಿಬೇವಿನ ಸೊಪ್ಪನ್ನು ನಾಲ್ಕು ತಂಡದಲ್ಲಿ ಮಾರಾಟ ಮಾಡುತ್ತಾರೆ. ಪ್ರತಿ ಬಾರಿ ಒಂದೂವರೆ ಸಾವಿರ ರು. ಸಿಗುತ್ತದೆ.
ಅರಣ್ಯ ಕೃಷಿ ಕ್ಷೇತ್ರದಲ್ಲಿನ ಸಾಧನೆಗಾಗಿ ನಾಗರತ್ನಮ್ಮ ಅವರನ್ನು 2022 ರ ರೈತ ದಸರಾದಲ್ಲಿ ಸನ್ಮಾನಿಸಲಾಗಿದೆ. ನಾಗರತ್ನಮ್ಮ ಹಾಗೂ ಅವರ ಪತಿ ಸಿದ್ದಮಲ್ಲಯ್ಯ ಅವರು ಜಮೀನು ಬಳಿ ವಾಸವಾಗಿದ್ದಾರೆ. ಮಕ್ಕಳು ಇಬ್ಬರು ಎಂಜಿನಿಯರಿಂಗ್ ಓದಿದ್ದಾರೆ. ಕಿರಣ್ ಕುಮಾರ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್. ಮಹೇಶ್ ಸ್ವಯಂ ಉದ್ಯೋಗ ಮಾಡುತ್ತಾರೆ.
ನಾಗರತ್ನಮ್ಮ ಕೋಂ ಸಿದ್ದಮಲ್ಲಯ್ಯ
ಮೈಸೂರು ತಾಲೂಕು
ಮೊ. 93805 43345