ರೈತರಿಗಾಗಿ 220 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ

KannadaprabhaNewsNetwork |  
Published : May 11, 2026, 04:00 AM IST
ಸದಕಹಅದಸ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ತಾಲೂಕಿನ ಪೂರ್ವಭಾಗದ ಮಹತ್ವಾಕಾಂಕ್ಷಿ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಪೂರ್ಣಗೊಂಡ ನಂತರ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಸೌಲಭ್ಯ ಬೇಕಾಗುತ್ತದೆ. ಅದಕ್ಕಾಗಿ 5 ವಿದ್ಯುತ್ ಘಟಕಗಳನ್ನು ಆರಂಭಿಸಿ 220 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸೋಲಾರ್ ಪಾರ್ಕ್‌ಗಳನ್ನ ಸ್ಥಾಪಿಸುವುದಾಗಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ಪೂರ್ವಭಾಗದ ಮಹತ್ವಾಕಾಂಕ್ಷಿ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಪೂರ್ಣಗೊಂಡ ನಂತರ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಸೌಲಭ್ಯ ಬೇಕಾಗುತ್ತದೆ. ಅದಕ್ಕಾಗಿ 5 ವಿದ್ಯುತ್ ಘಟಕಗಳನ್ನು ಆರಂಭಿಸಿ 220 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸೋಲಾರ್ ಪಾರ್ಕ್‌ಗಳನ್ನ ಸ್ಥಾಪಿಸುವುದಾಗಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ತಾಲೂಕಿನ ತೆಲಸಂಗ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರ ಬದುಕು ಹಸನಾಗಬೇಕಾದರೆ ನೀರಾವರಿ, ನಿರಂತರ ವಿದ್ಯುತ್, ವ್ಯವಸ್ಥಿತ ಗ್ರಾಮೀಣ ರಸ್ತೆ ಹಾಗೂ ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯವಾಗಿದೆ. ರೈತರಿಗೆ ಮೂಲಭೂತ ಸೌಕರ್ಯಕ್ಕೆ ಮೊದಲ ಆದ್ಯತೆಯಾಗಿದೆ ಎಂದರು.ಅಂತರ್ಜಲ ಮಟ್ಟ ಹೆಚ್ಚಳ: ತೆಲಸಂಗ ಗ್ರಾಮದಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು 67 ಎಕರೆ ಪ್ರದೇಶದಲ್ಲಿ ನೂತನ ಕೆರೆ ನಿರ್ಮಿಸಲಾಗುವುದು. ಕೊಟ್ಟಲಗಿಯಲ್ಲಿ 4 ಹಾಗೂ ಕೇಸ್ಕರ್ ದಡ್ಡಿಯಲ್ಲಿ ಒಂದು ಕೆರೆ ಸೇರಿ ಲಭ್ಯವಿರುವ ಸರ್ಕಾರಿ ಜಾಗಗಳಲ್ಲಿ ಇನ್ನಷ್ಟು ಕೆರೆ ನಿರ್ಮಿಸಲಾಗುವುದು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗುವುದಲ್ಲದೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಪರಿಹಾರ ಸಿಗಲಿದೆ ಎಂದರು.

ಬೋರ್‌ವೆಲ್‌ಗೆ ಇಲಾಖೆ ಒಪ್ಪಿಗೆ: ಚಿಕ್ಕನೀರಾವರಿ ಇಲಾಖೆಯಿಂದ ₹ 25 ಕೋಟಿ ವೆಚ್ಚದಲ್ಲಿ 1ಸಾವಿರ ಬೋರ್‌ವೆಲ್ ಕೊರೆಯುವ ಯೋಜನೆಗೆ ಒಪ್ಪಿಗೆ ನೀಡಿದೆ. ಈ ಯೋಜನೆ ಈ ಭಾಗದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ನೂತನ ನಿರ್ಮಿಸಲಾದ ಕಂಬಿ ಮಲ್ಲಯ್ಯ ಸಮುದಾಯ ಭವನ ಹಾಗೂ ಬಾಬು ಜಗಜೀವನರಾಯ ಸಮುದಾಯ ಭವನಗಳನ್ನು ಶಾಸಕ ಲಕ್ಷ್ಮಣ ಸವದಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಸಿದ್ರಾಯ ಯಲ್ಲಡಗಿ, ಶಂಕರ ನೇಮಗೌಡ, ಅರವಿಂದ ಗುಂಡುಡಿ, ಶಿವು ಗುಡ್ಡಾಪುರ, ಗುರು ದಾಸ್ಯಾಳ, ಅಶೋಕ ಪಾಟಿಲ, ಶೋಭಾ ಮಾಳಿ, ಡಿ.ಬಿ.ಟಕ್ಕಣವರ, ಅಮೋಘ ಕೊಬ್ರಿ, ಸಂತೋಷ ಸಾವಡಕರ, ಕಲ್ಮೇಶ್ ಮಡ್ಡಿ, ಭಾರತಿ ಲೋಕಂಡೆ, ಕೆಪಿಟಿಸಿಎಲ್ ಅಧಿಕಾರಿ ಮಂಜಪ್ಪ ಅಪ್ಪಣ್ಣವರ, ವೀರಣ್ಣ ವಾಲಿ, ಪ್ರವೀಣ ಹುಣಸಿಕಟ್ಟಿ ಸೇರಿ ಹಲವು ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ವಕೀಲ ಅಮೋಘ ಕೊಬ್ಬರಿ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀಶೈಲ ಶಿಲೆಪ್ಪಗೋಳ ಸ್ವಾಗತಿಸಿ, ವಂದಿಸಿದರು.

-------

ಕೋಟ್‌ತೆಲಸಂಗ ಗ್ರಾಮದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದ್ದು, ತಾಲೂಕಿನಲ್ಲಿ ಈಗಾಗಲೇ ಸವದಿ, ಯಲ್ಲಡಗಿ ಮತ್ತು ಸಂಕೋನಟ್ಟಿ ಹಾಗೂ ಅಥಣಿ ಗ್ರಾಮೀಣ ಭಾಗ ಸೇರಿ ಒಟ್ಟು 5 ವಿದ್ಯುತ್ ಕೇಂದ್ರಗಳು ಮಂಜೂರಾಗಿವೆ. ಇದರಿಂದ ಮುಂದಿನ 20 ವರ್ಷ ವಿದ್ಯುತ್ ತೊಂದರೆಯಾಗಲ್ಲ. ರೈತರಿಗೆ ಹಗಲು ವೇಳೆ ನಿರಂತರ 8 ಗಂಟೆ ವಿದ್ಯುತ್ ದೊರಕಲಿದೆ. ನೀರಾವರಿ ಯೋಜನೆ ಪೂರ್ಣವಾದ ನಂತರ ಹೆಚ್ಚಿನ ವಿದ್ಯುತ್‌ ಬೇಕಾಗುತ್ತದೆ. ಅದಕ್ಕಾಗಿ ಯಲಡಗಿ ಮತ್ತು ಕೊಕ್ಕಟನೂರು ಗ್ರಾಮಗಳಲ್ಲಿ 220 ಮೆ.ವ್ಯಾ ವಿದ್ಯುತ್ ಉತ್ಪಾದನೆಯ ಸೋಲಾರ್ ಪಾರ್ಕ್‌ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆಲಕ್ಷ್ಮಣ ಸವದಿ, ಅಥಣಿ ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಮಿಕರ ಮಕ್ಕಳಿಗೆ ಶ್ರಮಿಕ ವಸತಿ ಶಾಲೆ ಮಂಜೂರು: ಶಾಸಕ ಜೆ.ಟಿ. ಪಾಟೀಲ
ದೇಶದ ಬೆಳವಣಿಗೆಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ: ಸಚಿವ ಶಿವಾನಂದ ಪಾಟೀಲ