ದೇಶದಲ್ಲಿ 25 ಕೋಟಿ ಜನ ಬಡತನದಿಂದ ಹೊರಗೆ: ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Jan 11, 2026, 02:45 AM IST
ಬಸವರಾಜ ಬೊಮ್ಮಾಯಿ ಮಾತನಾಡಿದರು. | Kannada Prabha

ಸಾರಾಂಶ

ಗಜೇಂದ್ರಗಡ ಪಟ್ಟಣದ ದಿ ಲಕ್ಷ್ಮೀ ಅರ್ಬನ್ ಕೋ-ಆಪರೇಟಿವ್‌ ಬ್ಯಾಂಕ್‌ನಲ್ಲಿ ಶನಿವಾರ ಮಹಿಳಾ ಸಬಲೀಕರಣ ಸಾಲ ಸೌಲಭ್ಯ ವಿತರಣೆ ಹಾಗೂ ಗ್ರಾಹಕರ ಸಮಾವೇಶದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ಮಹಿಳೆಯರಿಗೆ ಸಾಲದ ಚೆಕ್‌ಗಳನ್ನು ವಿತರಿಸಿದರು.

ಗಜೇಂದ್ರಗಡ: ಕೇಂದ್ರ ಸರ್ಕಾರ ರೂಪಿಸಿದ ಯೋಜನೆಗಳ ಪರಿಣಾಮ ದೇಶದಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ದಿ ಲಕ್ಷ್ಮೀ ಅರ್ಬನ್ ಕೋ-ಆಪರೇಟಿವ್‌ ಬ್ಯಾಂಕ್‌ನಲ್ಲಿ ಶನಿವಾರ ನಡೆದ ಮಹಿಳಾ ಸಬಲೀಕರಣ ಸಾಲ ಸೌಲಭ್ಯ ವಿತರಣೆ ಹಾಗೂ ಗ್ರಾಹಕರ ಸಮಾವೇಶದಲ್ಲಿ ಮಹಿಳೆಯರಿಗೆ ಸಾಲದ ಚೆಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಮೋದಿ ಅವರು ದೇಶದ ಪ್ರಧಾನಿಮಂತ್ರಿಯಾದ ಮೇಲೆ ಜಾರಿಗೆ ತಂದಿರುವ ಯೋಜನೆಗಳಿಂದ ದೇಶದಲ್ಲಿ ಜನರಿಗೆ ಮನೆ, ಶಿಕ್ಷಣ, ಉದ್ಯೋಗ, ಗ್ಯಾಸ್ ಸಂಪರ್ಕ, ಪಡಿತರ ಹಾಗೂ ಗುಣಮಟ್ಟದ ನೀರು ಜತೆಗೆ ಉದ್ಯೋಗ ಸಿಕ್ಕಿದೆ. ಪರಿಣಾಮ ದೇಶದಲ್ಲಿ ೨೫ ಕೋಟಿ ಬಡಜನ ಬಡತನದಿಂದ ಹೊರಬಂದಿದ್ದಾರೆ. ಇತ್ತ ಬೀದಿಬದಿ ವ್ಯಾಪಾರಸ್ಥರು, ರೈತರು ಹಾಗೂ ಯುವ ಸಮೂಹಕ್ಕೆ ವಿವಿಧ ಯೋಜನೆಗಳ ಮೂಲಕ ಸಾಲ ಸೌಲಭ್ಯವನ್ನು ನೀಡುವ ಮೂಲಕ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಕಾರ್ಯವನ್ನು ಸಹ ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ. ಹೀಗಾಗಿ ಜನರ ಬಳಿ ಹಣ ಇರುವುದರಿಂದ ದೇಶ ಬೆಳೆಯುತ್ತಿದೆ ಎಂದು ಹೇಳಿದರು.

ದುಡಿಮೆಯನ್ನು ದೇವರನ್ನಾಗಿ ಮಾಡಿಕೊಂಡರೆ ಬದುಕು ಹಸನಾಗುತ್ತದೆ. ಉಳಿತಾಯ ಸಂಸ್ಕೃತಿ ಈ ದೇಶದ ಭಾಗವಾಗಿದ್ದು, ಜನರಲ್ಲಿ ದುಡ್ಡಿದ್ದರೆ ದೇಶ ಹಾಗೂ ಸಮುದಾಯ ಅಭಿವೃದ್ಧಿಯಾಗುತ್ತದೆ.

ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕೆ ಪ್ರಧಾನಮಂತ್ರಿ ಮೋದಿ ಅವರು ಹಲವು ಯೋಜನೆ ಜಾರಿಗೆ ತಂದಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಉಪಾಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ‍್ಯ ಸಿಗುವ ಮೊದಲೇ ಬ್ಯಾಂಕ್ ಸ್ಥಾಪನೆಯಾಗಿ, ಇಂದಿಗೂ ಗಜನಡಿಗೆ ನಡೆಸುತ್ತಿರುವುದು ಗರ್ವದ ಸಂಗತಿ. ಬ್ಯಾಂಕಿನ ಗ್ರಾಹಕರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಜನರ ಆರ್ಥಿಕ ಪ್ರಗತಿಗೆ ತನ್ನದೆಯಾದ ಕೊಡುಗೆ ನೀಡುತ್ತಿದೆ. ಶೈಕ್ಷಣಿಕ ಹಾಗೂ ಸಾಮಾಜಿಕ ಬದ್ಧತೆಯನ್ನು ಅಳವಡಿಸಿಕೊಂಡ ಬ್ಯಾಂಕ್ ಗ್ರಾಹಕಸ್ನೇಹಿ ಯೋಜನೆಗಳ ಜತೆಗೆ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಲು ಸಾಲ ಸೌಲಭ್ಯ ನೀಡಲು ಮುಂದಾಗಿದ್ದೇವೆ ಎಂದರು.

ಬ್ಯಾಂಕಿನ ಚೇರ್‌ಮನ್‌ ಸುರೇಶ ಕಾಳಪ್ಪ ಚನ್ನಿ ಮಾತನಾಡಿ, ಮಹಿಳೆಯರ ಸಬಲೀಕರಣ ಮುಖ್ಯವಾಗಿಸಿಕೊಂಡು ಮಹಿಳಾ ಸಾಲ ಸೌಲಭ್ಯ ಯೋಜನೆ ಜಾರಿಗೆ ತಂದಿದ್ದೇವೆ. ಮಹಿಳೆಯರು ಆರ್ಥಿಕವಾಗಿ ಸಬಲಿಕರಣಗೊಂಡರೆ ಒಂದು ಕುಟುಂಬವೇ ಆರ್ಥಿಕವಾಗಿ ಸಶಕ್ತವಾದಂತ ಎಂಬ ಆಶಯವೇ ನಮ್ಮದಾಗಿದೆ. ೨೬ ಮಹಿಳೆಯರಿಗೆ ₹೫೦ ಸಾವಿರ ಸಾಲ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ₹೧೦ ಲಕ್ಷ ವರೆಗೆ ನೀಡುವ ಯೋಜನೆಯಿದೆ ಎಂದರು.

ನಿರ್ದೇಶಕರಾದ ಡಾ. ಬಿ.ವಿ. ಕಂಬಳ್ಯಾಳ, ಪಿ.ಎಸ್. ಕಡ್ಡಿ, ಆರ್.ಬಿ. ನಿಡಗುಂದಿ, ಪಿ.ಬಿ. ಮ್ಯಾಗೇರಿ, ಎಸ್.ಯು. ಮೆಣಸಗಿ, ಕೆ.ಎಸ್. ಸಜ್ಜನರ, ವ್ಯವಸ್ಥಾಪಕ ರಾಜು ಹೊಸಗಂಡಿ ಹಾಗೂ ಅಮರೇಶಪ್ಪ ಬೂದಿಹಾಳ, ಬಿ.ಎಂ. ಸಜ್ಜನರ, ಶ್ರೀನಿವಾಸ ಸವದಿ, ಶರಣಪ್ಪ ರೇವಡಿ, ಅಮರೇಶ ಗಾಣಿಗೇರ, ಪ್ರಾಣೇಶ ಕೊಡಗಾನೂರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರ ಜಾತ್ರೆಗೆ ರಾಜ್ಯದಿಂದ 25 ಸಾವಿರ ಭಕ್ತರು
ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಲಿ: ಸಮ್ಮೇಳನಾಧ್ಯಕ್ಷ ಸುರೇಶ್ ಸಂಸ್ಕೃತಿ