ಕನ್ನಡಪ್ರಭ ವಾರ್ತೆ ಬೀಳಗಿ
ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಬಾಧಿತವಾದ ಎಲ್ಲ ಗ್ರಾಮಗಳ ಪುರ್ನವಸತಿ ಕೇಂದ್ರಗಳ ವಿವಿಧ ಅಭಿವೃದ್ಧಿಗೆ ₹2500 ಕೋಟಿ ಅಧಿಕ ವೆಚ್ಚದ ಯೋಜನಾ ವರದಿ ಸಿದ್ಧವಾಗುತ್ತಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ, ಶಾಸಕ ಜೆ.ಟಿ.ಪಾಟೀಲ ಹೇಳಿದರು.ತಾಲೂಕಿನ ಕೊಪ್ಪ (ಎಸ್.ಕೆ) ಪುನರ್ವಸತಿ ಕೇಂದ್ರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಅನುದಾನದ ಅಡಿಯಲ್ಲಿ ಅಂದಾಜು ₹4.90 ಕೋಟಿ ವೆಚ್ಚದಲ್ಲಿ ಜರುಗಲಿರುವ ನಾಲಾಕ್ಕೆ ಸೇತುವೆ ನಿರ್ಮಾಣ ಕಾಮಗಾರಿ, ಹೆರಕಲ್ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ಸುಮಾರು ₹50 ಲಕ್ಷ ಅಂದಾಜು ವೆಚ್ಚದಲ್ಲಿ ಆಂತರಿಕ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ, ಕೋವಳ್ಳಿ ಪುನರ್ವಸತಿ ಕೇಂದ್ರದಲ್ಲಿ ಅಂದಾಜು ₹50 ಲಕ್ಷ ವೆಚ್ಚದಲ್ಲಿ ಆಂತರಿಕ ರಸ್ತೆ ನಿರ್ಮಾಣ ಕಾಮಗಾರಿ, ಅನಗವಾಡಿ ಪುನರ್ವಸತಿ ಕೇಂದ್ರದಲ್ಲಿ ಅಂದಾಜು ₹50 ಲಕ್ಷ ವೆಚ್ಚದಲ್ಲಿ ಆಂತರಿಕ ರಸ್ತೆ, ಚರಂಡಿ, ನಿರ್ಮಾಣ ಕಾಮಗಾರಿ, ಲೋಕೋಪಯೋಗಿ ಇಲಾಖೆ ವತಿಯಿಂದ ಅಂದಾಜು ₹2.50 ಕೋಟಿ ವೆಚ್ಚದಲ್ಲಿ ಸುನಗ-ಬೂದಿಹಾಳ (ಎಸ್.ಎ) ಜಿಲ್ಲಾ ಮುಖ್ಯರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅನಗವಾಡಿ-ಮುಧೋಳ ಮುಖ್ಯ ರಸ್ತೆಗೆ ಬೂದಿಹಾಳ (ಎಸ್.ಎ) ಗ್ರಾಮದಲ್ಲಿ ಬ್ರಿಡ್ಜ್ ನಿರ್ಮಿಸಿ, ರಸ್ತೆ ಎತ್ತರಿಸಲು ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದೆ. ಈಗಾಗಲೇ ಸಂಬಂಧಿಸಿದ ಸಚಿವರು ಯೋಜನಾ ವರದಿ ಸಿದ್ಧಪಡಿಸಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಕೆಬಿಜೆಎನ್ ಎಲ್ ಕಾರ್ಯನಿರ್ವಾಹಕ ಅಭಿಯಂತರ ವಿಶ್ವನಾಥ ಮಿಕ್ಕಲ್, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕೆ.ಎಸ್.ಹಾದಿಮನಿ, ಶಾಖಾಧಿಕಾರಿಗಳಾದ ಎಸ್.ಬಿ.ಶೇಗುಣಶಿ, ಸಿ.ಎಂ.ಮಲ್ಲಾಪೂರ, ಪಿಡಬ್ಲೂಡಿ ಎಇಇ ಐ.ಎಸ್.ಹೊಸೂರ, ಮುಖಂಡರಾದ ಎಂ.ಬಿ.ಕಂಬಿ, ಟಿ.ವೈ.ಜಾನಮಟ್ಟಿ, ಶ್ರೀಶೈಲ ಕೋರಿ, ಎಲ್.ಜಿ.ಮಲಘಾಣ, ಕೆ.ಆರ್.ಪಾಟೀಲ, ಬಿ.ಎಂ.ಗಡ್ಡಿ, ಎಸ್.ವಿ.ಜೀರಗಾಳ, ಆರ್.ವಿ.ಗೌಡರ, ಬಿ.ಜಿ.ಮಲಘಾಣ, ಬಾಳಾಸಾಹೇಬ ಕಲಾದಗಿ, ನೂರಲಿ ಆಸೋದಿ, ಹನಮಂತ ಬಿರೋಜಿ, ಯಲ್ಲಪ್ಪ ನಾಗಮ್ಮನವರ, ಬೀರಪ್ಪ ಪೂಜಾರಿ, ಎಸ್.ಎಸ್.ಮೇಟಿ, ಮಲ್ಲಪ್ಪ ಮೇಟಿ, ರಸೂಲಸಾಬ್ ಮುಜಾವರ, ನಾಗವ್ವ ಭಜಂತ್ರಿ, ಪೀರಸಾಬ್ ನದಾಪ, ವಿ.ವೈ.ಆಲಮಟ್ಟಿ, ಆರ್.ಎಸ್.ಹಿರನ್ನವರ, ರ್‍ಯಾವಪ್ಪ ಹೊಸಮನಿ, ಬಸು ಬೋಳರಡ್ಡಿ, ಚಿದಾನಂದ ಬೂದಿಹಾಳ, ಮಹೇಶ ಹಡಪದ, ಈರಪ್ಪ ಬಸರಡ್ಡಿ, ಯಲ್ಲಪ್ಪ ಮಾದರ, ಬಸು ಮೇಟಿ, ಲಾಲಸಾಬ್ ದಳವಾಯಿ, ರಮೇಶ ಅನಗವಾಡಿ, ಸಂಗಯ್ಯ ಕಂಬಿ, ಚಂದ್ರಶೇಖರ ಲಿಂಗದ, ಇಸ್ಮಾಯಿಲ್ ಯಂಡಿಗೇರಿ, ಸದಪ್ಪ ತಳವಾರ, ಪರಶು ಮೇಟಿ, ನಾರಾಯಣ ಕಂಬಾರ ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.ಎಂ.ಎಸ್.ಧನ್ನೂರ ಸ್ವಾಗತಿಸಿದರು. ಹರೀಶ ಗಾಯಕವಾಡ ವಂದಿಸಿದರು.
-----ಕೋಟ್...
ಕಾಮಗಾರಿಗಳು ಜರುಗುತ್ತಿರುವ ಗ್ರಾಮಗಳ ಸಾರ್ವಜನಿಕರು ಮುಂದೆ ನಿಂತುಕೊಂಡು ಗುತ್ತಿಗೆದಾರರಿಂದ ಕೆಲಸ ತೆಗೆದುಕೊಳ್ಳಬೇಕು. ಗುತ್ತಿಗೆದಾರರು ಯೋಜನಾ ವರದಿ ಪ್ರಕಾರ ಗುಣಮಟ್ಟದ ಕೆಲಸ ಮಾಡಬೇಕು. ಕಳಪೆ ಕಾಮಗಾರಿಯಾದರೇ ಅನುದಾನ ಬಿಡುಗಡೆ ಮಾಡುವುದಿಲ್ಲ. ಅಲ್ಲದೇ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ.- ಜೆ.ಟಿ.ಪಾಟೀಲ, ಶಾಸಕ.
-------------