ಕನ್ನಡಪ್ರಭ ವಾರ್ತೆ ಬೆಂಗಳೂರು
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಶ್ರೀಸಿದ್ಧಾರೂಢ ಮಿಷನ್ ಅಧ್ಯಕ್ಷ ಡಾ। ಆರೂಢಭಾರತೀ ಸ್ವಾಮೀಜಿ, ಮೇ 10ರಂದು ಬೆಳಗ್ಗೆ 6.45ಕ್ಕೆ ಹರಳಕಟ್ಟೆ ಶ್ರೀಶಿವಾನಂದ ಮಠದ ನಿಜಗುಣ ಸ್ವಾಮೀಜಿ ಅವರಿಂದ ಪ್ರಣವ ಧ್ವಜಾರೋಹಣ ನೆರವೇರಲಿದೆ. 7 ಗಂಟೆಗೆ ಶ್ರೀಸಿದ್ಧಾರೂಢರಿಗೆ ಪಂಚಾಮೃತ ಅಭಿಷೇಕ. ನಂತರ ಭಜನ ಸಮ್ಮೇಳನ. 8.30ರಿಂದ ಜಪಯಜ್ಞ, ಭಗವದ್ಗೀತೆ ವಚನ ಸಿದ್ದಾರೂಢ ಕಥಾಮೃತಗಳ ಪಾರಾಯಣವು ನಡೆಯಲಿದೆ ಎಂದರು.
ಹೊಸನಗರದ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ, ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿಸ್ವಾಮೀಜಿ, ಕಾಗಿನೆಲೆ ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಕಾಡರಕೊಪ್ಪ ಪೂರ್ಣಾನಂದಶ್ರಮದ ನ್ಯಾಯವೇದಾಂತ ಆಚಾರ್ಯ ದಯಾನಂದ ಸರಸ್ವತಿ ಸ್ವಾಮೀಜಿ ಅವರು ಸಾನಿಧ್ಯ ವಹಿಸುವರು.ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಮಾಜಿ ಸಚಿವರಾದ ವಿ.ಸೋಮಣ್ಣ, ಬೈರತಿ ಬಸವರಾಜು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಸಾಂಸ್ಕೃತಿಕ ಭವನ ಉದ್ಘಾಟನೆ ನೆರವೇರಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಿದ್ಧಾರೂಢ ಕಥಾಮೃತ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.