ಕನ್ನಡ ಪ್ರಭವಾರ್ತೆ,ಮಾಲೂರು
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಅಧ್ಯಕ್ಷ ವಿಜಯನಾರಸಿಂಹ ಅವರು, ಶಾಸಕರ ಸತತ ಪ್ರಯತ್ನದಿಂದ ಪಟ್ಟಣದಲ್ಲಿ 3600 ಮೀ.ಉದ್ದದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ರಾಜ್ಯ ಸರ್ಕಾರವು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ ಎಂದರು.
ಕಾರಿಡಾರ್ ರಸ್ತೆ ಕಾಮಗಾರಿರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ 1860 ಕೋಟಿ ರು.ಗಳ ಕೈಗಾರಿಕಾ ಕಾರಿಡಾರ್ ರಸ್ತೆ ಕಾಮಗಾರಿಯನ್ನು 3190 ಕೋಟಿಗೆ ಹೆಚ್ಚಿಸಿ ಅನುಮೋದನೆ ನೀಡಿದೆ, ಇದರಿಂದ ಪಟ್ಟಣದಲ್ಲಿ ಮೇಲ್ಸೇತುವೆ ಸೇರಿದಂತೆ ಹೊಸಕೋಟೆ ವರೆಗೆ ಸಿಮೆಂಟ್ ರಸ್ತೆ ನಿರ್ಮಾಣ ವಾಗಲಿದೆ. ದೇನವಹಳ್ಳಿ ಕೈಗಾರಿಕಾ ಪ್ರದೇಶದಿಂದ ವಿಜಿಪುರ,ಹೆಚ್.ಕ್ರಾಸ್,ವೇಮಗಲ್ ನರಸಾಪುರ ಮೂಲಕ ಮಾಲೂರು ತಾಲೂಕು ಪ್ರವೇಶಿಸುವ ನಾಲ್ಕು ಫಥಗಳ ರಸ್ತೆಯು ತಮಿಳುನಾಡಿನ ಹೊಸೂರು ವರೆಗೆ ನಾಲ್ಕು ಪಥದ ರಸ್ತೆಯಾಗಿ ನಿರ್ಮಾಣ ವಾಗಲಿದೆ ಎಂದರು.
ಸಿಎಂ, ಡಿಸಿಎಂ, ಶಾಸಕರಿಗೆ ಅಭಿನಂದನೆ
ಪುರಸಭೆ ಅಧ್ಯಕ್ಷೆ ಕೋಮಲ ನಾರಾಯಣ್ ,ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ ,ಪ್ರಾಧಿಕಾರದ ಅಧ್ಯಕ್ಷ ನಯೀಮ್ ,ಆಂಜಿನಪ್ಪ ,ಪುರಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಕೃಷ್ಣಪ್ಪ , ವಿಜಯಲಕ್ಷ್ಮಿ ಲಕ್ಷ್ಮಿನಾರಾಯಣ್ ,ಜಾಕೀರ್ ಖಾನ್, ಭಾರತಮ್ಮ ಶಂಕರಪ್ಪ,ಸಂತೇಹಳ್ಳಿ ನಾರಾಯಣಸ್ವಾಮಿ ,ನವೀನ್,ಜಾಕಿ ಮಂಜು,ಚಾಕನಹಳ್ಳಿ ನಾಗರಾಜ್,ತನ್ವೀರ್ ,ಹುಂಗೇನಹಳ್ಳಿ ನಾಗೇಶ್ ಇನ್ನಿತರರು ಇದ್ದರು.