ಬೆಂಗಳೂರಲ್ಲಿ 5 ದಿನದಲ್ಲಿ 320 ಕಿ.ಮೀ ಫುಟ್ಪಾತ್‌ ಒತ್ತುವರಿ ತೆರವು

KannadaprabhaNewsNetwork |  
Published : Jul 07, 2026, 04:15 AM ISTUpdated : Jul 07, 2026, 04:50 AM IST
GBA clears footpath encroachments in banashankari bengaluru

ಸಾರಾಂಶ

ಭಾನುವಾರ ಒಂದು ದಿನ ವಿಶ್ರಾಂತಿ ಬಳಿಕ ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ಸೋಮವಾರ ನಗರದ ವಿವಿಧೆಡೆ 60 ಕಿ.ಮೀ ರಸ್ತೆ ಮಾರ್ಗದಲ್ಲಿನ ಫುಟ್‌ಪಾತ್ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇದರೊಂದಿಗೆ ಐದು ದಿನಗಳಲ್ಲಿ 320 ಕಿ.ಮೀ.ಗೂ ಹೆಚ್ಚು ಮಾರ್ಗದಲ್ಲಿನ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಿರುವುದಾಗಿ ಜಿಬಿಎ ಹೇಳಿದೆ.

  ಬೆಂಗಳೂರು :  ಭಾನುವಾರ ಒಂದು ದಿನ ವಿಶ್ರಾಂತಿ ಬಳಿಕ ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ಸೋಮವಾರ ನಗರದ ವಿವಿಧೆಡೆ 60 ಕಿ.ಮೀ ರಸ್ತೆ ಮಾರ್ಗದಲ್ಲಿನ ಫುಟ್‌ಪಾತ್ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇದರೊಂದಿಗೆ ಐದು ದಿನಗಳಲ್ಲಿ 320 ಕಿ.ಮೀ.ಗೂ ಹೆಚ್ಚು ಮಾರ್ಗದಲ್ಲಿನ ಫುಟ್‌ಪಾತ್ ಒತ್ತುವರಿಯನ್ನು ತೆರವುಗೊಳಿಸಿರುವುದಾಗಿ ಜಿಬಿಎ ಹೇಳಿದೆ.

ಸೋಮವಾರ ಬೆಳ್ಳಂಬೆಳಗ್ಗೆ ಪೊಲೀಸರ ಸಹಯೋಗದಲ್ಲಿ ತೆರವು

ಸೋಮವಾರ ಬೆಳ್ಳಂಬೆಳಗ್ಗೆ ಪೊಲೀಸರ ಸಹಯೋಗದಲ್ಲಿ ಜೆಸಿಬಿಗಳೊಂದಿಗೆ ಆಗಮಿಸಿದ್ದ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಒತ್ತುವರಿಯಾಗಿದ್ದ ಫುಟ್‌ಪಾತ್ ಅಕ್ರಮಿಸಿಕೊಂಡು ನಿರ್ಮಿಸಿದ್ದ ಅಂಗಡಿ ಮುಂಗಟ್ಟುಗಳು, ಮೆಟ್ಟಿಲುಗಳು, ಕೆನೋಪಿ, ತಳ್ಳುಗಾಡಿ, ಟೇಬಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಿದರು. ನಿಯಮಬಾಹಿರವಾಗಿ ನಿರ್ಮಿಸಿದ ಗೋಡೆ, ಮೆಟ್ಟಿಲುಗಳನ್ನು ಒಡೆದು ಹಾಕಿದರು. ಒತ್ತುವರಿ ಜಾಗದಲ್ಲಿನ ವಸ್ತುಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ಸಾಗಿಸಿದರು.

180ಕ್ಕೂ ಹೆಚ್ಚು ಸಿಬ್ಬಂದಿ, 8 ಜೆಸಿಬಿ ಹಾಗೂ 12 ಟ್ರ್ಯಾಕ್ಟರ್‌

ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ ಜಯನಗರ, ಬಿಟಿಎಂ ಲೇಔಟ್, ಎಚ್‌ಎಸ್‌ಆರ್ ಲೇಔಟ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ 180ಕ್ಕೂ ಹೆಚ್ಚು ಸಿಬ್ಬಂದಿ, 8 ಜೆಸಿಬಿ ಹಾಗೂ 12 ಟ್ರ್ಯಾಕ್ಟರ್‌ಗಳನ್ನು ಬಳಸಿ 15 ಕಿ.ಮೀ. ಒತ್ತುವರಿ ತೆರವುಗೊಳಿಸಿದರು. ಪಶ್ಚಿಮ ಪಾಲಿಕೆ ವ್ಯಾಪ್ತಿಯ ಮಲ್ಲೇಶ್ವರ, ಬಸವನಗುಡಿ, ವಿಜಯನಗರ ಸೇರಿದಂತೆ ವಿವಿಧೆಡೆ 14.80 ಕಿ.ಮೀ. ಒತ್ತುವರಿ ತೆರವು ನಡೆಸಲಾಯಿತು. ಈ ವೇಳೆ 19 ಪೆಟ್ಟಿ ಶಾಪ್, 24 ತಳ್ಳುಗಾಡಿ, 37 ಮೆಟ್ಟಿಲುಗಳು ಹಾಗೂ 11.55 ಟನ್ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ.

ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ 10 ಕಿ.ಮೀ ಫುಟ್‌ಪಾತ್ ಒತ್ತುವರಿ ಹಾಗೂ ಉತ್ತರ ಪಾಲಿಕೆ ವ್ಯಾಪ್ತಿಯ ಬ್ಯಾಟರಾಯನಪುರ, ಯಲಹಂಕ, ಹೆಬ್ಬಾಳ ಮತ್ತು ದಾಸರಹಳ್ಳಿ ವಿಭಾಗಗಳಲ್ಲಿ 18.60 ಕಿ.ಮೀ. ಮಾರ್ಗವನ್ನು ಒತ್ತುವರಿ ಮುಕ್ತಗೊಳಿಸಲಾಯಿತು. 41 ಅಂಗಡಿಗಳು, 114 ಮೆಟ್ಟಿಲು, ರ್‍ಯಾಂಪ್‌ ಹಾಗೂ ಸುಮಾರು 57 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಎಂದಿನಂತೆ ಕೆಲವು ಪ್ರದೇಶಗಳಲ್ಲಿ ಒತ್ತುವರಿ ತೆರವಿಗೆ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಆನ್ ಸಂಸ್ಥೆ ಸಹಯೋಗದಿಂದ ಶಿಶು ಮಂದಿರದಲ್ಲಿ 12 ಎಲೆಕ್ಟ್ರಿಕ್ ಆಟೋರಿಕ್ಷಾಗಳನ್ನು ಹಸ್ತಾಂತರ
ರಾಮಚರಿತ ಮಾನಸ ಸೇರಿ ಅಮೂಲ್ಯ ಕಾಣಿಕೆ ಪ್ರದರ್ಶನ