- ಖಾಸಗಿ ಅಂಗಡಿಗಳು, ಸಹಕಾರ ಸಂಘಗಳ ರೈತರಿಂದ ಖರೀದಿ: ಕೃಷಿ ಇಲಾಖೆ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಅಭಾವ ಅತಿ ಹೆಚ್ಚಾಗಿದ್ದು, ಗೊಬ್ಬರದ ಅಭಾವ ತಪ್ಪಿಸಲು ಚನ್ನಗಿರಿ ತಾಲೂಕಿಗೆ ಕಳೆದ ಎರಡ್ಮೂರು ದಿನಗಳಿಂದ 350 ಟನ್ ಯೂರಿಯಾ ಗೊಬ್ಬರ ಬಂದಿದೆ. ರೈತರು ಖಾಸಗಿ ಗೊಬ್ಬರದ ಅಂಗಡಿಗಳಲ್ಲಿ ಮತ್ತು ಸಹಕಾರ ಸಂಘಗಳ ಮೂಲಕ ಸೋಮವಾರದಿಂದ ಯೂರಿಯಾ ಗೊಬ್ಬರ ಖರೀದಿಗೆ ಸರತಿ ಸಾಲಿನಲ್ಲಿ ನಿಂತು ಖರೀದಿಸುತ್ತಿದ್ದಾರೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ.45 ಕೆ.ಜಿ. ತೂಗುವ 1 ಬ್ಯಾಗ್‌ಗೆ ಸರ್ಕಾರ ನಿಗದಿಪಡಿಸಿರುವಂತೆ ₹266 ಗಳಿದ್ದು, ದಾವಣಗೆರೆಯಿಂದ ಚನ್ನಗಿರಿಗೆ ತರಲು ಮತ್ತು ಹಮಾಲಿ ಖರ್ಚುಗಳು ಗೊಬ್ಬರದ ಅಂಗಡಿಯವರೇ ಭರಿಸಬೇಕಾಗಿದೆ. ರೈತರಿಗೂ ಹೊರೆಯಾಗದಂತೆ ನಿಗದಿತ ಹಣ ಪಡೆದು ಪ್ರತಿಯೊಬ್ಬರಿಗೂ 2 ಚೀಲ ಗೊಬ್ಬರವನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರೈತರಿಗೆ ಅನುಕೂಲ ಆಗುವಂತಹ ದ್ರವರೂಪದ ನ್ಯಾನೊ (ಲಿಕ್ವಿಡ್ ಯೂರಿಯಾ) ಕೂಡ ಯೂರಿಯಾ ಗೊಬ್ಬರದಂತೆ ಉತ್ತಮ ಪರಿಣಾಮಕಾರಿ ಕೆಲಸ ಮಾಡಲಿದೆ. ನ್ಯಾನೊ ಯೂರಿಯಾವನ್ನು ಬೆಳೆಗಳಿಗೆ ಸಿಂಪಡಿಸುವ ಮೂಲಕ ಹೆಚ್ಚು ಇಳುವರಿ ಪಡೆಯಲು ಸಹಾಯಕವಾಗಲಿದೆ ಎಂದು ಇಲಾಖೆ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.ಸೋಮವಾರದಿಂದ ತಾಲೂಕಿನಲ್ಲಿರುವ ಎಲ್ಲ ಗೊಬ್ಬರದ ಅಂಗಡಿಗಳಿಗೆ ಮತ್ತು ಸಹಕಾರ ಸಂಘಗಳಿಗೆ ಯೂರಿಯಾ ಗೊಬ್ಬರ ಬರಲಿದೆ. ರೈತರು ಆತಂಕಪಡಬೇಕಾಗಿಲ್ಲ. ದ್ರವರೂಪದ ನ್ಯಾನೊ ಔಷಧಿಯನ್ನು ತಾಲೂಕಿನ ಆಯ್ದ ಭಾಗಗಳಲ್ಲಿ ಪ್ರಾಯೋಗಿಕವಾಗಿ ಈಗಾಗಲೇ ಸಿಂಪರಣೆ ಮಾಡಲಾಗಿದೆ ಎಂದಿದ್ದಾರೆ.
- - -(ಬಾಕ್ಸ್) * ರೈತಸ್ನೇಹಿ ನ್ಯಾನೊ ಯೂರಿಯಾ ಹರಳು ರೂಪದ ಯೂರಿಯಾ ಗೊಬ್ಬರವನ್ನು ಬೆಳೆಗಳ ಬುಡಕ್ಕೆ ಹಾಕುವುದರಿಂದ ಮುಳ್ಳುಸಜ್ಜೆ ಮತ್ತು ಇತರೆ ಕಳೆ ಬೆಳೆಯುತ್ತಾ ಧಾನ್ಯಗಳ ಇಳುವರಿಯಲ್ಲಿ ಕುಂಠಿತ ಆಗುವುದು. ಆದರೆ, ದ್ರವರೂಪದ ನ್ಯಾನೊ ಯೂರಿಯಾ ಬೆಳೆಗಳ ಮೇಲೆ ಸಿಂಪರಣೆ ಮಾಡುವುದರಿಂದ ಬೆಳೆಗಳ ಬೆಳವಣಿಗೆ ಕಾಳು ಕಟ್ಟಲು ತುಂಬಾ ಸಹಕಾರಿಯಾಗಲಿದೆ. ದ್ರವರೂಪದ ನ್ಯಾನೊ ಯೂರಿಯಾ 1 ಎಕರೆ ಪ್ರದೇಶಕ್ಕೆ 1 ಲೀಟರ್ ನೀರಿಗೆ 5 ಎಂ.ಎಲ್.ನಂತೆ ಬೆರೆಸಿ ಸಿಂಪರಣೆ ಮಾಡಬೇಕು. 1 ಎಕರೆ ಪ್ರದೇಶಕ್ಕೆ 500 ಎಂ.ಎಲ್. ಔಷಧಿ ಸಾಕಾಗುತ್ತದೆ ಎಂದು ಕೃಷಿ ಇಲಾಖೆ ತಿಳಿಸಿದೆ.
- - --4ಕೆಸಿಎನ್ಜಿ1.ಜೆಪಿಜಿ:
ಚನ್ನಗಿರಿ ಪಟ್ಟಣದ ಖಾಸಗಿ ಗೊಬ್ಬರ ಮಾರಾಟ ಅಂಗಡಿಯಲ್ಲಿ ರೈತರು ಸರತಿ ಸಾಲಿನಲ್ಲಿ ನಿಂತು ಗೊಬ್ಬರ ಖರೀದಿಸಿದರು.