362 ಎಕರೆ ಕೈಗಾರಿಕಾ ಕಾರಿಡಾರ್‌ ಡಿನೋಟಿಫೈ ಇಲ್ಲ: ಸಂಪುಟ ನಿರ್ಧಾರ

KannadaprabhaNewsNetwork |  
Published : Oct 07, 2026, 02:15 AM IST
ಕೆರೆ ಬಳಿ ಸೇರಿರುವ ಜನ | Kannada Prabha

ಸಾರಾಂಶ

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ(ಕೆಐಎಡಿಬಿ) ಸುವರ್ಣ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಕಾರಿಡಾರ್‌ ಯೋಜನೆಗಾಗಿ ಶಿವಮೊಗ್ಗ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ 362 ಎಕರೆ ಭೂಮಿಯನ್ನು ಭೂಸ್ವಾಧಿನದಿಂದ ಕೈಬಿಡದಿರಲು ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ(ಕೆಐಎಡಿಬಿ) ಸುವರ್ಣ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಕಾರಿಡಾರ್‌ ಯೋಜನೆಗಾಗಿ ಶಿವಮೊಗ್ಗ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ 362 ಎಕರೆ ಭೂಮಿಯನ್ನು ಭೂಸ್ವಾಧಿನದಿಂದ ಕೈಬಿಡದಿರಲು ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನಿನ ಪೈಕಿ ಶಿವಮೊಗ್ಗ ತಾಲೂಕಿನ ಸಿದ್ದಿಪುರ ಮತ್ತು ದೇವಕಾತಿಕೊಪ್ಪ ಗ್ರಾಮಗಳಲ್ಲಿ 362.21 ಎಕರೆ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವ ಪ್ರಸ್ತಾವನೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ಮುಂದಿತ್ತು.

ಅರಣ್ಯ ಭೂಮಿ ಎಂದು ಸಾಬೀತಾದ ಹಿನ್ನೆಲೆ:

ಸಚಿವರೊಬ್ಬರು ನೀಡಿದ ಮಾಹಿತಿ ಪ್ರಕಾರ, ಪ್ರಸ್ತಾಪಿತ ಭೂಮಿಯನ್ನು ಹಿಂದಿನ ಸರ್ಕಾರದಲ್ಲಿ ನೋಟಿಫೈ ಮಾಡಲಾಗಿದೆ. ಆದರೆ, ಈ ಭೂಮಿ ಅರಣ್ಯ ಭೂಮಿ ಎಂದು ನಂತರ ಸಾಬೀತಾಗಿದೆ. ಹಾಗಾಗಿ ಇದನ್ನು ಸರ್ಕಾರದ ಮಟ್ಟದಲ್ಲಿ ಡೀನೋಟಿಫೈ ಮಾಡುವುದು ಸರಿಯಲ್ಲ. ಈ ಬಗ್ಗೆ ನ್ಯಾಯಾಲಯದ ಅಭಿಪ್ರಾಯ ಕೇಳಲಾಗಿದೆ. ನ್ಯಾಯಾಲಯ ಆದೇಶ ಮಾಡಿದರೆ ನಂತರ ಡಿನೋಟಿಫಿಕೇಷನ್‌ ಬಗ್ಗೆ ತೀರ್ಮಾನ ಮಾಡೋಣ ಎಂದು ಸಭೆಯಲ್ಲಿ ಸಲಹೆ, ಅಭಿಪ್ರಾಯಗಳು ವ್ಯಕ್ತವಾದವು. ಈ ಹಿನ್ನೆಲೆಯಲ್ಲಿ ಜಿಲ್ಲೆಯ 362.21 ಎಕರೆ ಭೂಮಿಯನ್ನು ಡಿನೋಟಿಫೈ ಮಾಡುವ ನಿರ್ಧಾರ ಮಾಡದಿರಲು ತೀರ್ಮಾನಿಸಲಾಯಿತು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರೇಕೆರೂರಿನಲ್ಲಿ ಆಧಾರ್ ನೋಂದಣಿ, ತಿದ್ದುಪಡಿಗೆ ಪರದಾಟ
ಹಾವೇರಿ ತಾಲೂಕಲ್ಲಿ ಬಿರುಗಾಳಿ, ಮಳೆಗೆ ನೆಲಕಚ್ಚಿದ ಕಬ್ಬು, ಮೆಕ್ಕೆಜೋಳ