ಶಿರಾ: ತಾಲೂಕಿನ ಗೌಡಗೆರೆ ಹೋಬಳಿಯ ತಾವರೆಕೆರೆ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಪಡಿಪೂಜೆ ಹಾಗೂ ಅಭಿಷೇಕ ಅಲಂಕಾರದೊಂದಿಗೆ ಅದ್ಧೂರಿಯಾಗಿ ನೆರವೇರಿತು. ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದೇವರಿಗೆ ಹೂವು ಹಣ್ಣು ಕಾಯಿಗಳನ್ನು ಸಮರ್ಪಿಸಿ ಕೃತಾರ್ಥರಾದರು. ಈ ಸಂದರ್ಭದಲ್ಲಿ ತಾವರೆಕೆರೆ ಭಕ್ತಮಂಡಳಿಯ ಗುರುಸ್ವಾಮಿಗಳಾದ ಸುಬ್ಬರಾಜು ಸ್ವಾಮಿ, ರಂಗಸ್ವಾಮಿ, ಅಂಜನಪ್ಪ ಸ್ವಾಮಿ, ಪುಟ್ಟರಾಜ್ ಸ್ವಾಮಿ, ಪಾಂಡು ಸ್ವಾಮಿ, ವಸಂತ ಸ್ವಾಮಿ ಸೇರಿದಂತೆ ಊರಿನ ಗ್ರಾಮಸ್ಥರು ಸೇರಿದಂತೆ ಹಲವರು ಭಕ್ತಾದಿಗಳು ಹಾಜರಿದ್ದರು.