ಮಲೇಬೆನ್ನೂರು: ಭಾರತದಲ್ಲಿ ಯುವಕರ ಗುರಿಯಾಗಿಸಿ ಮಾದಕ ವಸ್ತುಗಳನ್ನು ವಿತರಿಸುತ್ತಿರುವುದು ಖಂಡನೀಯ ಎಂದು ಸಂಪನ್ಮೂಲ ವ್ಯಕ್ತಿ ಎಚ್.ಎಂ. ಸದಾನಂದ ಹೇಳಿದರು. ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೇವರಬೆಕೆರೆ ಮೈಲಾರಲಿಂಗೆಶ್ವರ ಪ್ರೌಢಶಾಲೆ ಮತ್ತು ಬನ್ನಿಕೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ೧೮೨೮ ಮದ್ಯವರ್ಜನ ಶಿಬಿರದಲ್ಲಿ ಭಾಗಿಯಾದ ಲಕ್ಷಾಂತರ ಮದ್ಯವ್ಯಸನಿಗಳಲ್ಲಿ ೧.೧೯.೦೦೦ ಲಕ್ಷ ಕುಡುಕರು ಮದ್ಯವ್ಯಸನ ತೊರೆದು ನವಜೀವನ ನಡೆಸಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಮೇಲ್ವಿಚಾರಕ ಮಾರುತಿ ಮಾತನಾಡಿ ಯೋಜನೆಯಲ್ಲಿ ೨೮ಕ್ಕೂ ಹೆಚ್ಚು ಕಾರ್ಯಕ್ರಮಗಳಿವೆ, ಮಹಿಳೆಯರು ಹೊಸ ಮಾಹಿತಿ ತಿಳಿಯಲು ಆಸಕ್ತಿ ಇರಲಿ ಎಂದರು.ಉಪ ಪ್ರಾಚಾರ್ಯ ಕೊಟ್ರೇಶ್, ಮುಖ್ಯ ಶಿಕ್ಷಕ ವಿಜಯಕುಮಾರ್ ಓಲೇಕಾರ್, ಶಿಕ್ಷಕ ಹೂಗಾರ್, ಮಾರುತಿ, ಯಶೋಧಾ, ಸೇವಾ ಪ್ರತಿನಿಧಿ ವಿನುತಾ, ವೀಣಾ, ರೂಪ ಹಾಜರಿದ್ದರು.
- - --ಚಿತ್ರ-೧: ಬನ್ನಿಕೋಡು ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.