ಶಿಗ್ಗಾಂವಿ: ಶ್ರೀ ಜಗದ್ಗುರು ರೇಣುಕಾಚಾರ್ಯ ಕೋ ಆಪರೇಟಿವ್ ಸೊಸೈಟಿಯು ಸಾಮಾಜಿಕ ಕಳಕಳಿ, ಆಡಳಿತ ಮಂಡಳಿ ಸದಸ್ಯರ ಸಹಕಾರ ಮತ್ತು ಸಿಬ್ಬಂದಿಯ ಅತ್ಯುತ್ತಮ ಕಾರ್ಯ ನಿರ್ವಹಣೆಯಿಂದ ಸತತವಾಗಿ ಮೂರು ಬಾರಿ ಜಿಲ್ಲೆಯ ಅತ್ಯುತ್ತಮ ಸೊಸೈಟಿ ಎಂಬ ಪ್ರಶಸ್ತಿ ಪಡೆದಿದೆ ಎಂದು ನಿರ್ದೇಶಕ ಡಾ. ಆರ್.ಎಸ್. ಅರಳಲೆಮಠ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಯಶ್ರೀವರ್ಷಾ ಎಲಿಗಾರ, ಸಂಘವು ಸತತ ೨೯ ವರ್ಷಗಳಿಂದ ಎಲ್ಲರ ಸಹಕಾರದಿಂದಾಗಿ ಲಾಭದಲ್ಲಿದೆ. ಗ್ರಾಹಕರಿಗೆ ಸುಲಲಿತ ಸೇವೆ ನೀಡುತ್ತಾ ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ ತನ್ನ ಕಾರ್ಯ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ₹೨೫ ಲಕ್ಷದ ವರೆಗೆ ಸಾಲ ನೀಡುವ ಸಾಮರ್ಥ್ಯ ಹೊಂದಿದೆ. ೩೧೨೫ ಸದಸ್ಯರನ್ನು ಹೊಂದುವ ಮೂಲಕ ₹೮೮.೦೬ ಲಕ್ಷ ಶೇರು ಬಂಡವಾಳ ಹೊಂದಿದೆ ಎಂದರು.
ಜಗದ್ಗುರು ರೇಣುಕಾಚಾರ್ಯ ಕೋ-ಆಪ್ ಸೊಸೈಟಿ ಸದಸ್ಯರ ಕುಟುಂಬದ ೨೧ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.ಸಂಸ್ಥಾಪಕ ಅಧ್ಯಕ್ಷ ಡಾ. ಪ್ರಭುಗೌಡ ಪಾಟೀಲ, ಮಾಲತೇಶ ಕಂಕನವಾಡ, ಫಕ್ಕೀರಪ್ಪ ಯಲಿಗಾರ, ಭರಮಪ್ಪ ನವಲಗುಂದ, ಬಸವರಾಜ ವಾಲಿಶೆಟ್ಟರ, ನಾಗರಾಜ ಬ್ರಹ್ಮಾವರ, ವೀರಪ್ಪ ಬಡ್ಡಿ, ಐಪಿಕೆ ಶೆಟ್ಟರ, ಕಲ್ಲಪ್ಪ ಹೆಸರೂರ, ವಿಜಯಲಕ್ಷ್ಮಿ ಬೇವಿನಮರದ, ಬಿ.ಎಸ್. ನರೇಗಲ್, ರುದ್ರಪ್ಪ ಮೂಲಿಮನಿ, ಸುರೇಶ ಪಟ್ಟಣಶೆಟ್ಟಿ, ಕುಮಾರಗೌಡ ಪಾಟೀಲ, ದಯಾನಂದ ಅಕ್ಕಿ, ಚಂದ್ರಶೇಖರ ಶ್ಯಾಬಣ್ಣವರ, ಚಂದ್ರಶೇಖರ ಕೋರಿ ಇದ್ದರು.