ಮಂಗಳೂರು: ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆ ಅತ್ತಾವರದ ವೈದ್ಯರು 90 ವರ್ಷದ ವೃದ್ಧೆಯೊಬ್ಬರಿಗೆ ಅತ್ಯಂತ ಸಂಕೀರ್ಣವಾದ ರಿವಿಷನ್ ಹಿಪ್ ರಿಕನ್ಸ್ಟ್ರಕ್ಷನ್ (ಸೊಂಟದ ಮೂಳೆಯ ಪುನರ್ನಿರ್ಮಾಣ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಮೂಲಕ ಈ ಹಿಂದೆ ಅಳವಡಿಸಲಾಗಿದ್ದ ಪ್ರಾಸ್ಥೆಸಿಸ್‌ನಿಂದ (ಕೃತಕ ಜೋಡಣೆ) ಉಂಟಾಗಿದ್ದ ವಿರಳ ಹಾಗೂ ಸವಾಲಿನ ತೊಂದರೆಯನ್ನು ನಿವಾರಿಸಿ, ವೃದ್ಧೆ ಮತ್ತೆ ನಡೆಯುವಂತೆ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಈ ರೋಗಿಯು ತಮ್ಮ ಎಡ ಸೊಂಟದಲ್ಲಿ ತೀವ್ರ ನೋವು ಮತ್ತು ಭಾರ ಹೊರುವಲ್ಲಿ ಸಮಸ್ಯೆ ಎದುರಿಸುತ್ತಿದ್ದರು. ವೈದ್ಯಕೀಯ ತಪಾಸಣೆಯ ಸಂದರ್ಭದಲ್ಲಿ ಈ ಹಿಂದೆ ಅಳವಡಿಸಲಾಗಿದ್ದ ಕೃತಕ ಜೋಡಣೆಯು ಕ್ರಮೇಣ ಶ್ರೋಣಿಯ ಕುಹರದ (pelvic cavity) ಒಳಭಾಗಕ್ಕೆ ಜಾರಿರುವುದು ಪತ್ತೆಯಾಯಿತು.ರೋಗಿಯ ವಯಸ್ಸು ಮತ್ತು ಪ್ರಕರಣದ ಸಂಕೀರ್ಣತೆಯನ್ನು ಗಮನದಲ್ಲಿಟ್ಟುಕೊಂಡು, ಮೂಳೆ ಚಿಕಿತ್ಸಕ ತಂಡ ವಿವರವಾದ ವೈದ್ಯಕೀಯ ಮೌಲ್ಯಮಾಪನ ಮತ್ತು ಬಹುಶಿಸ್ತೀಯ ಯೋಜನೆಯನ್ನು ರೂಪಿಸಿ ಶಸ್ತ್ರಚಿಕಿತ್ಸೆಗೆ ಮುಂದಾಯಿತು.ವೈದ್ಯಕೀಯ ತಂಡ ಆಂಟಿಪ್ರೊಟ್ರೂಶನ್ ಕೇಜ್ ಎಂಬ ವಿಶೇಷ ಇಂಪ್ಲಾಂಟ್ ಬಳಸಿ ರಿವಿಷನ್ ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಇದು ಸೊಂಟದ ಸಾಕೆಟ್ ಅನ್ನು ಪುನರ್ನಿರ್ಮಿಸಲು ಮತ್ತು ಮೂಳೆಯ ಬಲವು ಕಡಿಮೆಯಾದಾಗ ಬಲವಾದ ರಚನಾತ್ಮಕ ಬೆಂಬಲವನ್ನು ನೀಡಲು ವಿನ್ಯಾಸಗೊಳಿಸಲಾದ ವಿಶೇಷ ತಂತ್ರಜ್ಞಾನವಾಗಿದೆ.ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು, ದಾದಿಯರು ಮತ್ತು ಫಿಸಿಯೋಥೆರಪಿಸ್ಟ್‌ಗಳ ಸಂಯೋಜಿತ ಕಾಳಜಿಯೊಂದಿಗೆ ಆರಂಭಿಕ ಪುನರ್ವಸತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ವ್ಯವಸ್ಥಿತ ಫಿಸಿಯೋಥೆರಪಿಯ ಸಹಾಯದಿಂದ ರೋಗಿಯು ಕ್ರಮೇಣ ಸ್ಥಿರತೆ ಮತ್ತುಆತ್ಮವಿಶ್ವಾಸದೊಂದಿಗೆ ಚಲಿಸಲು ಶಕ್ತರಾಗಿದ್ದಾರೆ. ಅಸ್ಥಿರೋಗ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಆತ್ಮಾನಂದ ಎಸ್. ಹೆಗ್ಡೆ, ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ವೈದ್ಯಕೀಯ ಅಧೀಕ್ಷಕ ಡಾ. ಚಕ್ರಪಾಣಿ ಮತ್ತಿತರರಿದ್ದರು.ವೃದ್ಧೆಗೆ ಸಂಕೀರ್ಣ ಸೊಂಟದ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆ: ವೃದ್ಧೆ ಚೇತರಿಕೆ
ಮಂಗಳೂರು: ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆ ಅತ್ತಾವರದ ವೈದ್ಯರು 90 ವರ್ಷದ ವೃದ್ಧೆಯೊಬ್ಬರಿಗೆ ಅತ್ಯಂತ ಸಂಕೀರ್ಣವಾದ ರಿವಿಷನ್ ಹಿಪ್ ರಿಕನ್ಸ್ಟ್ರಕ್ಷನ್ (ಸೊಂಟದ ಮೂಳೆಯ ಪುನರ್ನಿರ್ಮಾಣ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಮೂಲಕ ಈ ಹಿಂದೆ ಅಳವಡಿಸಲಾಗಿದ್ದ ಪ್ರಾಸ್ಥೆಸಿಸ್‌ನಿಂದ (ಕೃತಕ ಜೋಡಣೆ) ಉಂಟಾಗಿದ್ದ ವಿರಳ ಹಾಗೂ ಸವಾಲಿನ ತೊಂದರೆಯನ್ನು ನಿವಾರಿಸಿ, ವೃದ್ಧೆ ಮತ್ತೆ ನಡೆಯುವಂತೆ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.