ಸಿದ್ದಾಪುರ: ಕೆರೆಯಲ್ಲಿ ಈಜಲು ತೆರಳಿದ ಕಾರ್ಮಿಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸಿದ್ದಾಪುರ ಠಾಣೆ ವ್ಯಾಪ್ತಿಯ ಹಾಲುಗುಂದ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.

ಹಾಲುಗುಂದ ಗ್ರಾಮದ ನಿವಾಸಿ ಅರುಣ್ ಎಂಬುವರ ಕಾಫಿ ತೋಟದಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿರುವ ಅಣ್ಣಪ್ಪ (26) ಮೃತರು. ಗುರುವಾರ ಸಂಜೆ ಕಾಫಿ ತೋಟದ ಕೆರೆಯಲ್ಲಿ ಈಜಲು ತೆರಳಿದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇತರ ಕಾರ್ಮಿಕರು ಅಣ್ಣಪ್ಪನನ್ನು ಹುಡುಕಾಡಿದಾಗ ಈತ ಪತ್ತೆಯಾಗಿಲ್ಲ. ಬಳಿಕ ಕೆರೆಯ ಒಳಗೆ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮೃತ ಅಣ್ಣಪ್ಪನ ತಾಯಿ ಕಾಮಿ‌ ಸಿದ್ದಾಪುರ ಪೊಲೀಸ್ ಠಾಣೆ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

------------------------------

ಅಮ್ಮತ್ತಿಯಲ್ಲಿ ಜಿಲ್ಲಾ ಮಟ್ಟದ ಲೆಜೆಂಡ್ಸ್ ಫುಟ್ಬಾಲ್ ಪಂದ್ಯಾಟಸಿದ್ದಾಪುರ: ಅಮ್ಮತ್ತಿಯ ಎಎಫ್‌ಸಿ ಅಮ್ಮತ್ತಿ ಕೊಡಗು ವತಿಯಿಂದ ಜಿಲ್ಲಾ ಮಟ್ಟದ ಲೆಜೆಂಡ್ಸ್ ಪುಟ್ಬಾಲ್ ಪಂದ್ಯಾಟ ಏ. 4 ಮತ್ತು 5ರಂದು ಅಮ್ಮತ್ತಿಯ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ. ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ 30,000 ಹಾಗೂ ಟ್ರೋಫಿ, ದ್ವಿತೀಯ ಬಹುಮಾನವಾಗಿ 20,000 ರು. ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ. ಪಂದ್ಯಾಟಕ್ಕೆ ಪ್ರವೇಶ ಶುಲ್ಕ 3,000 ನಿಗದಿಪಡಿಸಲಾಗಿದ್ದು, ಪಂದ್ಯಾಟ 40 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9535553315, 9480730781 ಹಾಗೂ 9449704232 ಸಂಪರ್ಕಿಸಲು ಕೋರಿದ್ದಾರೆ.