ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ 49.34 ಲಕ್ಷ ಮತದಾರರ ಹೆಸರು ರದ್ದಾಗಲಿದೆ. 2026ರ ಜೂ.16ರ ಮತದಾರರ ಪಟ್ಟಿ ಪ್ರಕಾರ ಬೆಂಗಳೂರಿನ 4 ಜಿಲ್ಲೆಗಳ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,03,88,363 ಮತದಾರರು ಇದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ 49.34 (ಶೇ.47.75) ಲಕ್ಷ ಮತದಾರರ ಹೆಸರು ರದ್ದಾಗಲಿದೆ. 2026ರ ಜೂ.16ರ ಮತದಾರರ ಪಟ್ಟಿ ಪ್ರಕಾರ ಬೆಂಗಳೂರಿನ 4 ಜಿಲ್ಲೆಗಳ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,03,88,363 ಮತದಾರರು ಇದ್ದಾರೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಣೆ ವೇಳೆ ಗೈರು/ಪತ್ತೆಯಾಗದವರು, ಶಾಶ್ವತ ಸ್ಥಳಾಂತರ, ಮೃತರು, ಈಗಾಗಲೇ ಬೇರೆಕಡೆ ನೋಂದಣಿ ಹಾಗೂ ಇತರೆ (ಎಎಸ್‌ಡಿಡಿಒ) ವರ್ಗದಡಿ 49.34 ಲಕ್ಷ ಮತದಾರರನ್ನು ಸೇರಿಸಲಾಗಿದೆ. ಈ ಮತದಾರರ ಹೆಸರು ಹಾಲಿ ಮತದಾರರ ಪಟ್ಟಿಯಿಂದ ಡಿಲೀಟ್ ಆಗಲಿದೆ. ಅಂದರೆ, ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾಗುವುದಿಲ್ಲ.
ಈ ಎಎಸ್‌ಡಿಡಿಒ ವರ್ಗದ ಪೈಕಿ ಶಾಶ್ವತ ಸ್ಥಳಾಂತರಗೊಂಡ ಮತದಾರರ ಪ್ರಮಾಣವೇ ಹೆಚ್ಚಿದೆ. ಈ ಮತದಾರರು ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ನಿಗದಿತ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆ ಜತೆಗೆ ಫಾರ್ಮ್ 6 ಭರ್ತಿ ಮಾಡಿ ಸಲ್ಲಿಸಿದರೆ, ಬಿಎಲ್‌ಒ/ಇಆರ್‌ಒ ಪರಿಶೀಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಿದ್ದಾರೆ.
1.03 ಕೋಟಿ ಪೈಕಿ 49.34 ಕೋಟಿ ಹೆಸರು ಡಿಲೀಟ್:
ಬೆಂಗಳೂರು ನಗರ ಜಿಲ್ಲೆಯಲ್ಲಿ ಹಾಲಿ ಮತದಾರರ ಪಟ್ಟಿಯಲ್ಲಿರುವ 40,21,039 ಮತದಾರರ ಪೈಕಿ 18,10,111 (ಶೇ.45.02), ಬಿಬಿಎಂಪಿ ಉತ್ತರ ಜಿಲ್ಲೆಯಲ್ಲಿ 23,32,621 ಮತದಾರರ ಪೈಕಿ 11,05,176 (ಶೇ.47.38), ಬಿಬಿಎಂಪಿ ಕೇಂದ್ರ ಜಿಲ್ಲೆಯಲ್ಲಿ18,89,919 ಮತದಾರರ ಪೈಕಿ 9,13,442 (ಶೇ.48.33), ಬಿಬಿಎಂಪಿ ದಕ್ಷಿಣ ಜಿಲ್ಲೆಯಲ್ಲಿ21,44,784 ಮತದಾರರ ಪೈಕಿ 11,06,170 (ಶೇ.51.57) ಮತದಾರರು ಹೆಸರು ರದ್ದಾಗಲಿದೆ.
ಎಎಸ್‌ಡಿಡಿಒ ಮಾಹಿತಿ(ಆ.5ರ ಮಧ್ಯಾಹ್ನ 2 ಗಂಟೆ ವರೆಗೆ)
ಜಿಲ್ಲೆಆಬ್ಸೆಂಟ್(ಎ)ಶಿಫ್ಟ್(ಎಸ್)ಡೆಡ್(ಡಿ)ಡುಪ್ಲಿಕೇಟ್(ಡಿ)ಇತರೆ(ಒ)
ಬೆಂ.ನಗರ2.40 ಲಕ್ಷ13.27 ಲಕ್ಷ1.03 ಲಕ್ಷ25,5321.15 ಲಕ್ಷ
ಉತ್ತರ1.20 ಲಕ್ಷ8.13 ಲಕ್ಷ79,43814,80779,240
ಕೇಂದ್ರ1.59 ಲಕ್ಷ6.05 ಲಕ್ಷ63,7959,49576,801
ದಕ್ಷಿಣ2.75 ಲಕ್ಷ6.33 ಲಕ್ಷ68,72710,2581.19 ಲಕ್ಷ


