ಜಿಲ್ಲೆಯ ಕಾಫಿಗೆ 4 ಜಿಎ ಟ್ಯಾಗ್‌ ಲಭಿಸಿದೆ: ದೇವವೃಂದ ದಿನೇಶ್ ಮಾಹಿತಿ

KannadaprabhaNewsNetwork |  
Published : Apr 11, 2026, 02:00 AM IST
9ಸಿಕೆಎಂ 2ದೇವವೃಂದ ದಿನೇಶ್ | Kannada Prabha

ಸಾರಾಂಶ

ಚಿಕ್ಕಮಗಳೂರುಜಿಲ್ಲೆಯ ಕಾಫಿಗೆ 4 ಜಿಎ ಟ್ಯಾಗ್‌ ಲಭಿಸಿದೆ. 70 ಕಾಫಿ ಬೆಳೆಗಾರರಿಗೆ ಜಿಎ ಟ್ಯಾಗ್ ಪರವಾನಗಿ ಕೊಡಿಸಲಾಗುತ್ತಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ದೇವವೃಂದ ದಿನೇಶ್ ಹೇಳಿದರು.

70 ಕಾಫಿ ಬೆಳೆಗಾರರಿಗೆ ಜಿಎ ಟ್ಯಾಗ್ । ದಕ್ಷಿಣ ಭಾರತದ ಫಿಲ್ಟರ್‌ ಕಾಫಿ 2ನೇ ಅತ್ಯುತ್ತಮ ಕಾಫಿ ಎಂಬ ಹೆಗ್ಗಳಿಕೆಗೆ ಪಾತ್ರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯ ಕಾಫಿಗೆ 4 ಜಿಎ ಟ್ಯಾಗ್‌ ಲಭಿಸಿದೆ. 70 ಕಾಫಿ ಬೆಳೆಗಾರರಿಗೆ ಜಿಎ ಟ್ಯಾಗ್ ಪರವಾನಗಿ ಕೊಡಿಸಲಾಗುತ್ತಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ದೇವವೃಂದ ದಿನೇಶ್ ಹೇಳಿದರು.

ಪ್ರೆಸ್‌ಕ್ಲಬ್ ಹಮ್ಮಿಕೊಂಡಿದ್ದ ತಿಂಗಳ ಅತಿಥಿ ಸಂವಾದದಲ್ಲಿ ಮಾತನಾಡಿ, ಚಂದ್ರದ್ರೋಣ ಕಾಫಿ, ಬಾಬಾಬುಡನ್‌ ಕಾಫಿ,ಮಾನ್ಸೂನ್, ಮಲಬಾರ್ ಕಾಫಿಗೆ ಜಿಎಟ್ಯಾಗ್ ಸಿಕ್ಕಿದೆ. ದಕ್ಷಿಣ ಭಾರತದ ಫಿಲ್ಟರ್‌ ಕಾಫಿ 2ನೇ ಅತ್ಯುತ್ತಮ ಕಾಫಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.ಆರು ತಿಂಗಳಲ್ಲಿ ಟ್ರೈಕೊಡರ್ಮ ಎಂಬ ಕಾಫಿ ಹೊಸ ತಳಿಯನ್ನು ಕಂಡುಹಿಡಿದಿದ್ದು, ಬೇರೆ ದೇಶಗಳಿಗೂ ಇದನ್ನು ಪರಿಚಯಿಸ ಲಾಗುವುದು. ಗಿರಿಜನರು ಬೆಳೆಯುವ ಅರಗು ಕಾಫಿಗೂ ಬೇಡಿಕೆ ಇದೆ. ಈ ಕಾಫಿಯನ್ನು50 ಸಾವಿರ ಟನ್ ಬೆಳೆಯುವಂತೆ ತಿಳಿಸಲಾಗಿದೆ. ಏಳು ಬೀಜಗಳಿಂದ ಆರಂಭವಾದ ಕಾಫಿಯನ್ನು 7 ಲಕ್ಷ ಟನ್‌ಗೆ ಹೆಚ್ಚಿಸಲು ಗುರಿಹೊಂದಲಾಗಿದೆ ಎಂದರು.ಮಾರ್ಕೆಟ್ ಇಂಟಲಿಜೆನ್ಸ್ ಸರ್ವೆಯಾಗಿದ್ದು, ಮಾ.31ಕ್ಕೆ ವರದಿ ಬಂದಿದೆ. ಇಂಡಿಯನ್ ಕಾಫಿಗೆ ಸ್ಟಂಡರ್ಡ್ ಸೆಟ್‌ ಮಾಡಲಾಗುತ್ತಿದ್ದು, ವಿದೇಶಗಳಿಗೆ ರಫ್ತುಮಾಡಲು ಅನುಕೂಲವಾಗಲಿದೆ. ಕಾಫಿ ಕೃಷಿಕ್ಷೇತ್ರಕ್ಕೆ ಸೇರ್ಪಡೆಗೊಂಡರೆ ಸರ್ಫೇಸಿ ಕಾಯ್ದೆಯಿಂದ ಹೊರಗೆ ಬರುತ್ತದೆ. ಆದರೆ ಲ್ಯಾಂಡ್‌ಸೀಲಿಂಗ್ ವ್ಯಾಪ್ತಿಗೆ ಸೇರ್ಪಡೆಯಾಗುತ್ತದೆ. ಇದರ ಸಾಧಕ ಬಾಧಕ ಕುರಿತು ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.ಸರ್ಫೇಸಿ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಬೆಳೆಗಾರರಿಗೆ ಒನ್‌ಟೈಮ್ ಸೆಟ್ಲ್ಮೆಂಟ್‌ ಮಾಡಿಕೊಳ್ಳುವಂತೆ ತಿಳಿಸಲಾಯಿತು. ಒಟ್ಟು 6 ಸಾವಿರ ಬೆಳೆಗಾರರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಸಾಲ ₹25 ಲಕ್ಷದೊಳಗಿದ್ರೆ. ಶೇ.3ರಷ್ಟು ಬಡ್ಡಿ ಅದರ ಮೇಲ್ಪಟ್ಟು ಸಾಲವಿದ್ದರೆ ಶೇ.4 ಬಡ್ಡಿ ಪಾವತಿಸಬೇಕಾಗುತ್ತದೆ. ಈಗಾಗಲೇ ಸರ್ಫೇಸಿ ಕಾಯ್ದೆಯಿಂದ ಒಟ್ಟು 12-15 ಮಂದಿ ಬೆಳೆಗಾರರ ತೋಟಗಳು ಆನ್‌ಲೈನ್ ಮೂಲಕ ಹರಾಜಾಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಸಚಿವರ ಬಳಿ ಚರ್ಚೆ ನಡೆದಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವರು ಸಮಗ್ರ ಮಾಹಿತಿ ಕೇಳಿದ್ದಾರೆಂದು ತಿಳಿಸಿದರು.ಸಹಾಯಧನ ಜಾಸ್ತಿಮಾಡುವಂತೆ ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದ್ದು, ₹95 ಕೋಟಿ ಕೊಟ್ಟಿದ್ದಾರೆ. ನಿರೀಕ್ಷೆಗೂ ಮೀರಿ ಅರ್ಜಿಗಳು ಬಂದಿವೆ. ಮುಂದಿನ ಐದು ವರ್ಷಕ್ಕೆ ಕಾಫಿಮಂಡಳಿಯಿಂದ ₹1700 ಕೋಟಿ ಬಜೆಟ್ ತಯಾರಿಸಲಾಗುತ್ತಿದೆ. ಈ ಜಿಲ್ಲೆಗೆ ವಿದ್ಯಾನಿಧಿಗೆ ₹1 ಕೋಟಿ ಕೊಡಲಾಗಿದೆ. ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ನೀಡಲಾಗುವುದು. ಶೇ.10 ರಷ್ಟುನ್ನು ಪರಿಶಿಷ್ಟಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಗುವುದು ಎಂದು ಹೇಳಿದರು.ಪ್ರೆಸ್‌ಕ್ಲಬ್ ಅಧ್ಯಕ್ಷ ಸಿ.ಡಿ.ಚಂದ್ರೇಗೌಡ ಅಧ್ಯಕ್ಷತೆವಹಿಸಿದ್ದರು. ಪ್ರಧಾನಕಾರ್ಯದರ್ಶಿ ಎನ್.ಗೋಪಿ, ಖಜಾಂಚಿ ಪುನೀತ್, ಹಿರಿಯ ಉಪಾಧ್ಯಕ್ಷ ಎ.ಎನ್.ಮೂರ್ತಿ ಇದ್ದರು.9ಸಿಕೆಎಂ 2ದೇವವೃಂದ ದಿನೇಶ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋರ್ಟ್‌ನಲ್ಲಿ ವಾದ ಮಾಡುವಾಗಲೇ ಹೃದಯಾಘಾತದಿಂದ ವಕೀಲ ಸಾವು
ಹಿಟ್ನಾಳ-ಹುಲಿಗಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ