ಹಿಟ್ನಾಳ ಹಾಗೂ ಹುಲಿಗಿ ಗ್ರಾಮಗಳ ನಡುವಿನ ರಸ್ತೆ ಹದಗೆಟ್ಟಿದ್ದು,ಈ ರಸ್ತೆಯ ಮೂಲಕ ಹುಲಿಗೆಮ್ಮದೇವಿ ದರ್ಶನಕ್ಕೆ ಬರುವ ಲಕ್ಷಾಂತರ ಜನ ಭಕ್ತಾದಿಗಳಿಗೆ ತೊಂದರೆ ಆಗುತ್ತದೆ
ಮುನಿರಾಬಾದ್: ಹಿಟ್ನಾಳ್-ಹುಲಿಗಿ ಗ್ರಾಮಗಳ ನಡುವೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದ ರಾಜಶೇಖರ್ ಹಿಟ್ನಾಳ್ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ, ಕಾಮಗಾರಿಯನ್ನು ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಡಿಯಲ್ಲಿ ಕೈಗೆತ್ತಿ ಕೊಳ್ಳಲಾಗಿದ್ದು. ಇದಕ್ಕೆ ತಗಲುವ ವೆಚ್ಚ ₹4.9 ಕೋಟಿ ಎಂದರು.ಹಿಟ್ನಾಳ ಹಾಗೂ ಹುಲಿಗಿ ಗ್ರಾಮಗಳ ನಡುವಿನ ರಸ್ತೆ ಹದಗೆಟ್ಟಿದ್ದು,ಈ ರಸ್ತೆಯ ಮೂಲಕ ಹುಲಿಗೆಮ್ಮದೇವಿ ದರ್ಶನಕ್ಕೆ ಬರುವ ಲಕ್ಷಾಂತರ ಜನ ಭಕ್ತಾದಿಗಳಿಗೆ ತೊಂದರೆ ಆಗುತ್ತದೆ. ಈ ರಸ್ತೆ ಅಭಿವೃದ್ಧಿಪಡಿಸಬೇಕು ಹಾಗೂ ಅಗಲೀಕರಣ ಮಾಡಬೇಕೆಂದು ಎರಡು ಗ್ರಾಮದ ಗ್ರಾಮಸ್ಥರು ಬಹು ದಿನಗಳಿಂದ ಆಗ್ರಹಿಸುತ್ತಿದ್ದರು.ಇಂದು
ಭೂಮಿ ಪೂಜೆ ನಡೆಯುವ ಮೂಲಕ ಗ್ರಾಮಸ್ಥರು ಹಾಗೂ ಹುಲಿಗೆಮ್ಮದೇವಿ ಭಕ್ತಾದಿಗಳ ಆಸೆ ಈಡೇರಿದಂತಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ವಿಶ್ವನಾಥ ರಾಜು, ಗ್ಯಾರೆಂಟಿ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷ ಬಾಲಚಂದ್ರ, ಕಾಂಗ್ರೆಸ್ ಮುಖಂಡ ಕೆ.ಎಂ. ಸೈಯದ್, ಫಾಲಾಕ್ಷಪ್ಪ ಗುಂಗಾಡಿ, ಈರಣ್ಣ, ಯಂಕಪ್ಪ ಹೊಸಳ್ಳಿ, ಶರಣಪ್ಪ ಹೊಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.