ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನದಲ್ಲಿ 4 ಟಿಎಂಸಿ ನೀರು.

KannadaprabhaNewsNetwork |  
Published : Jun 19, 2025, 11:48 PM ISTUpdated : Jun 20, 2025, 02:06 PM IST
456 | Kannada Prabha

ಸಾರಾಂಶ

ಗುರುವಾರ ಜಲಾಶಯಕ್ಕೆ 51,654 ಸಾವಿರ ಕ್ಯುಸೆಕ್‌ ನೀರು ಹರಿದು ಬಂದಿದ್ದು, ಈ ವರ್ಷ ಅತ್ಯಧಿಕ ಪ್ರಮಾಣದ ಒಳಹರಿವಾಗಿದೆ. ಜಲಾಶಯದ ನೀರಿನ ಮಟ್ಟ 1608 ಅಡಿಗಳಿಗೆ ತಲುಪಿದ್ದು ಹಾಗೂ ಜಲಾಶಯದಲ್ಲಿ 34 ಟಿಎಂಸಿ ನೀರು ಶೇಖರಣೆಯಾಗಿದೆ.

ಮುನಿರಾಬಾದ್:ತುಂಗಭದ್ರಾ ಜಲಾಶಯಕ್ಕೆ ಗುರುವಾರ ಒಂದೇ ದಿನ ಬರೋಬ್ಬರಿ 4 ಟಿಎಂಸಿ ನೀರು ಹರಿದು ಬಂದಿದೆ. ಇದು ಪ್ರಸಕ್ತ ಸಾಲಿನಲ್ಲಿ ಹರಿದು ಬಂದ ಅತ್ಯಧಿಕ ಪ್ರಮಾಣದ ನೀರಾಗಿದೆ.

ಗುರುವಾರ ಜಲಾಶಯಕ್ಕೆ 51,654 ಸಾವಿರ ಕ್ಯುಸೆಕ್‌ ನೀರು ಹರಿದು ಬಂದಿದ್ದು, ಈ ವರ್ಷ ಅತ್ಯಧಿಕ ಪ್ರಮಾಣದ ಒಳಹರಿವಾಗಿದೆ. ಜಲಾಶಯದ ನೀರಿನ ಮಟ್ಟ 1608 ಅಡಿಗಳಿಗೆ ತಲುಪಿದ್ದು ಹಾಗೂ ಜಲಾಶಯದಲ್ಲಿ 34 ಟಿಎಂಸಿ ನೀರು ಶೇಖರಣೆಯಾಗಿದೆ. ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ ಕೇವಲ 6 ಟಿಎಂಸಿ ನೀರು ಮಾತ್ರ ಶೇಖರಣೆಯಾಗಿತ್ತು ಹಾಗೂ ಜಲಾಶಯದ ಒಳಹರಿವು 750 ಕ್ಯುಸೆಕ್‌ ಇತ್ತು. ಜಲಾಶಯದ ನೀರಿನ ಮಟ್ಟ 1582 ಅಡಿ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಜಲಾಶಯದ ನೀರಿನ ಸ್ಥಿತಿ ಉತ್ತಮವಾಗಿದೆ.

ನೀರಾವರಿ ಸಲ ಸಮಿತಿ ಸಭೆ ಯಾವಾಗ?. ಇದು ಅಚ್ಚಕಟ್ಟು ಭಾಗದ ರೈತರ ಪ್ರಶ್ನೆಯಾಗಿದೆ. ಜಲಾಶಯದಲ್ಲಿ 40 ಟಿಎಂಸಿ ನೀರು ಶೇಖರಣೆಯಾದರೆ ತಕ್ಷಣ ನೀರಾವರಿ ಸಲ ಸಮಿತಿ ಸಭೆ ಕರೆದು ಅಚ್ಚುಕಟ್ಟು ಪ್ರದೇಶದ ರೈತರ ಗದ್ದೆಗಳಿಗೆ ಮುಂಗಾರು ಬೆಳೆಗೆ ನೀರು ಹರಿಸುವ ದಿನಾಂಕ ನಿಗದಿಪಡಿಸಲಾಗುವುದು. ಆದರೆ, ನೀರಾವರಿ ಸಲಹಾ ಸಮಿತಿ ಈ ಬಗ್ಗೆ ಯಾವುದು ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಜೂನ್ ಕೊನೆಯ ವಾರದಲ್ಲಿ ಸಭೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ