313 ಪ್ರಕರಣಗಳ ಪೈಕಿ 148 ಪ್ರಕಣಗಳನ್ನು ಇತ್ಯರ್ಥ ಪಡಿಸಿ, ₹10.77 ಲಕ್ಷ ರಾಜೀ ಸಂಧಾನದ ಮೂಲಕ ಬಗೆಹರಿಸಲಾಯಿತು.
ಹರಪನಹಳ್ಳಿ: ತಾಲೂಕು ಸೇವೆಗಳ ಪ್ರಾಧಿಕಾರದಿಂದ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜೆಎಂಎಫ್‌ಸಿ ಹಾಗೂ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯಗಳಿಂದ 422 ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು.ಉಭಯ ನ್ಯಾಯಾಲಯದ ನ್ಯಾಯಾಧೀಶರಾದ ಉಷಾರಾಣಿ ಆರ್., ಮನುಶರ್ಮ ಎಸ್.ಪಿ ನೇತೃತ್ವದಲ್ಲಿ ರಾಜಿ-ಸಂಧಾನದ ಜರುಗಿತು.
ಲೋಕ ಅದಾಲತ್‌ನಲ್ಲಿ ರಸ್ತೆ ಅಪಘಾತ, ಚೆಕ್ ಬೌನ್ಸ್, ಬ್ಯಾಂಕ್ ಸಾಲ ವಸೂಲಿ, ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ ಪ್ರಕರಣ, ಮೋಟರ್ ವಾಹನ, ಸಹಕಾರಿ ಬ್ಯಾಂಕುಗಳು, ನಿವೇಶನ ಮಾರಾಟ ಒಳಗೊಂಡಂತೆ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು313 ಪ್ರಕರಣಗಳ ಪೈಕಿ 148 ಪ್ರಕಣಗಳನ್ನು ಇತ್ಯರ್ಥ ಪಡಿಸಿ, ₹10.77 ಲಕ್ಷ ರಾಜೀ ಸಂಧಾನದ ಮೂಲಕ ಬಗೆಹರಿಸಲಾಯಿತು.
ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ 308 ಪ್ರಕರಣಗಳ ಪೈಕಿ 274 ಪ್ರಕಣಗಳನ್ನು ಇತ್ಯರ್ಥ ಪಡಿಸಿ
ಒಟ್ಟು 22.97 ಲಕ್ಷ .ಗಳನ್ನು ಹಣದ ರೂಪದಲ್ಲಿ ಬಗೆಹರಿಸಲಾಯಿತು. ವ್ಯಾಜ್ಯ ಪೂರ್ವ ಪ್ರಕರಣಗಳು ಒಳಗೊಂಡತೆ ರಾಜಿ ಆಗುವಂತಹ ಪ್ರಕರಣಗಳನ್ನು ಇತ್ಯರ್ಥ ಪಡಿಸಿ ರಾಜೀ ಸಂದಾನ ಮಾಡಲಾಯಿತು.
ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಸಹಕರಿಸಿದ ವಕೀಲರ ಸಂಘದ ಅಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ ಪದಾಧಿಕಾರಿಗಳಿಗೆ, ಹಿರಿಯ ಮತ್ತು ಹಿರಿಯ ನ್ಯಾಯಾವಾದಿಗಳಿಗೆ, ಹಾಗೂ ಎಲ್ಲ ಕಕ್ಷಿದಾರರಿಗೆ ಉಭಯ ನ್ಯಾಯಾಲಯದ ನ್ಯಾಯಾಧೀಶರಾದ ಉಷಾರಾಣ ಆರ್. ಮತ್ತು ಮನುಶರ್ಮ ಎಸ್.ಪಿ. ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸರಕಾರಿ ಅಭಿಯೋಜಕರಾದ ಮೀನಾಕ್ಷಿ ಎಂ., ನಿರ್ಮಲಾ, ವಕೀಲರ ಸಂಘದ ಉಪಾಧ್ಯಕ್ಷ ಬಾಗಳಿ ಮಂಜುನಾಥ, ಕಾರ್ಯದರ್ಶಿ ಎಂ.ಮಲ್ಲಪ್ಪ, ಖಜಾಂಚಿ ಕೆ.ಸಣ್ಣ ನಿಂಗನಗೌಡ, ಹಿರಿಯ ವಕೀಲರಾದ ಪಿ.ಜಗದೀಶ್ ಗೌಡ, ಬಸವರಾಜ್ ಕೆ, ಎಸ್.ಎಂ. ರುದ್ರಮನಿ, ಬಿ.ಹಾಲೇಶ್, ಕೆ.ಪ್ರಕಾಶ್, ಎಂ.ಮೃತ್ಯುಂಜಯ, ಟಿ.ಎಂ. ರಮೇಶ್, ಗಿರೀಶ್ ಗೌಡ, ತಿಪ್ಪೇಶ್, ನೋಟರಿ ಪ್ರಸಾದ್ ನಾಯ್ಕ ಸೇರಿದಂತೆ ಹಿರಿಯ ಹಾಗೂ ಕಿರಿಯ ನ್ಯಾಯವಾದಿಗಳು, ನ್ಯಾಯಾಲಯದ ಸಿಬ್ಬಂದಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.