ಒಂದೂವರೆ ತಿಂಗಳಿನಿಂದ ಜಿಲ್ಲೆಯಲ್ಲಿ ಸುರಿದ ಗಾಳಿ-ಮಳೆಯಿಂದ ವ್ಯಕ್ತಿ ಹಾಗೂ ೪ ಜಾನುವಾರುಗಳು ಮೃತಪಟ್ಟು, ೪೭ ಮನೆಗಳು, 2 ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ.
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಒಂದೂವರೆ ತಿಂಗಳಿನಿಂದ ಜಿಲ್ಲೆಯಲ್ಲಿ ಸುರಿದ ಗಾಳಿ-ಮಳೆಯಿಂದ ವ್ಯಕ್ತಿ ಹಾಗೂ ೪ ಜಾನುವಾರುಗಳು ಮೃತಪಟ್ಟು, ೪೭ ಮನೆಗಳು, 2 ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ. ೧೫.೯೮ ಹೆಕ್ಟೇರ್‌ನಲ್ಲಿ ಕೃಷಿ ಬೆಳೆ ಹಾಗೂ ೧೦೭.೫೪ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಸೇರಿ ೧೨೩.೨೪ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿರುವುದಾಗಿ ವರದಿಯಾಗಿದೆ.ಬಿರುಗಾಳಿ-ಮಳೆಯಿಂದ ಜಿಲ್ಲೆಯಲ್ಲಿ ೧೩೦೨ ವಿದ್ಯುತ್ ಕಂಬಗಳು ಉರುಳಿಬಿದ್ದಿದ್ದರೆ, ೨೬ ಟ್ರಾನ್ಸ್‌ಫಾರ್ಮ್‌ಗಳು ಮತ್ತು ೪.೮೩ ಕಿ.ಮೀ. ದೂರದ ವಿದ್ಯುತ್ ತಂತಿಗಳಿಗೆ ಹಾನಿ ಸಂಭವಿಸಿದೆ. ಮಳೆಯಿಂದ ಸಾವಿಗೀಡಾಗಿರುವ ವ್ಯಕ್ತಿ, ಜಾನುವಾರುಗಳು, ಮನೆ ಜಖಂಗೊಂಡಿರುವುದಕ್ಕೆ ಇದುವರೆಗೆ ಪರಿಹಾರವನ್ನೂ ನೀಡಲಾಗಿಲ್ಲ. 42 ಮನೆಗಳು ಜಖಂ: ಮಳೆಯಿಂದಾಗಿ ಮಂಡ್ಯ ತಾಲೂಕಿನಲ್ಲಿ ೮, ಮದ್ದೂರು-೮, ಮಳವಳ್ಳಿ-೩, ಪಾಂಡವಪುರ-೧೨, ನಾಗಮಂಗಲ-೩, ಕೆ.ಆರ್.ಪೇಟೆ-೭, ಶ್ರೀರಂಗಪಟ್ಟಣ ತಾಲೂಕಿನಲ್ಲಿ ೬ ಮನೆಗಳು ಸೇರಿ ಒಟ್ಟು ೪೭ ಮನೆಗಳಿಗೆ ಹಾನಿಯಾಗಿದ್ದರೆ ಮಂಡ್ಯ ಹಾಗೂ ಮಳವಳ್ಳಿ ತಾಲೂಕಿನಲ್ಲಿ ತಲಾ ಒಂದೊಂದು ದನದ ಕೊಟ್ಟಿಗೆಗೆ ಹಾನಿಯಾಗಿದೆ.ಏಪ್ರಿಲ್‌ನಿಂದ ಈವರೆಗೆ ಸುರಿದ ಮಳೆಯಿಂದ ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ಹಾನಿ ಸಂಭವಿಸಿದೆ. ೧೦೭.೫೪ ಹೆಕ್ಟೇರ್‌ನಲ್ಲಿದ್ದ ಬಾಳೆ, ತೆಂಗು, ಪರಂಗಿ, ಟಮೆಟೋ, ಸೌತೆಕಾಯಿ, ವೀಳ್ಯದೆಲೆ ಹಾಗೂ ತರಕಾರಿ ಬೆಳೆ ಹಾನಿಗೊಳಗಾಗಿದ್ದರೆ, ೦.೯೮ ಹೆಕ್ಟೇರ್‌ನಲ್ಲಿ ಭತ್ತ, ೧೫ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆ ನಷ್ಟವಾಗಿರುವುದು ಕಂಡುಬಂದಿದೆ.ಎಲ್ಲೆಲ್ಲಿ ಎಷ್ಟು ನಷ್ಟ: ಕೆ.ಆರ್.ಪೇಟೆ ತಾಲೂಕಿನಲ್ಲಿ ಬಾಳೆ ಬೆಳೆ ೧ ಹೆಕ್ಟೇರ್, ಮದ್ದೂರು-೨೦.೫೪ ಹೆಕ್ಟೇರ್, ಮಳವಳ್ಳಿ-೪೩.೯೦ ಹೆಕ್ಟೇರ್, ಮಂಡ್ಯ-೩.೮೦ ಹೆಕ್ಟೇರ್, ಪಾಂಡವಪುರ-೨ ಹೆಕ್ಟೇರ್, ಶ್ರೀರಂಗಪಟ್ಟಣ-೨.೦೫ ಹೆಕ್ಟೇರ್‌ನಷ್ಟು ಹಾನಿಯಾಗಿದ್ದರೆ, ತೆಂಗು ಬೆಳೆ ಮದ್ದೂರು ತಾಲೂಕಿನಲ್ಲಿ ೪.೨೦ ಹೆಕ್ಟೇರ್, ಮಳವಳ್ಳಿ-೦.೨೦ ಹೆಕ್ಟೇರ್, ಮಂಡ್ಯ-೦.೪೦ ಹೆಕ್ಟೇರ್, ಶ್ರೀರಂಗಪಟ್ಟಣ ತಾಲೂಕಿನಲ್ಲಿ ೦.೨೦ ಹೆಕ್ಟೇರ್‌ನಷ್ಟು ನಷ್ಟವಾಗಿದೆ.ಮಾವು ಬೆಳೆ ಪಾಂಡವಪುರ ತಾಲೂಕಿನಲ್ಲಿ ೦.೭೦ ಹೆಕ್ಟೇರ್, ಶ್ರೀರಂಗಪಟ್ಟಣ ತಾಲೂಕಿನಲ್ಲಿ ೧ ಹೆಕ್ಟೇರ್‌ನಷ್ಟು ಹಾನಿಗೊಳಗಾಗಿದೆ. ಪಪ್ಪಾಯ ಬೆಳೆ ೦.೬೦ ಹೆಕ್ಟೇರ್ ಮದ್ದೂರಿನಲ್ಲಿ ಹಾಗೂ ೨.೪೭ ಹೆಕ್ಟೇರ್‌ನಷ್ಟು ಮಳವಳ್ಳಿ ತಾಲೂಕಿನಲ್ಲಿ ನಷ್ಟವಾಗಿದೆ. ವೀಳ್ಯದೆಲೆ ಬೆಳೆ ಮಳವಳ್ಳಿ ತಾಲೂಕಿನಲ್ಲಿ ೨೧.೪೦ ಹೆಕ್ಟೇರ್ ಮತ್ತು ಮದ್ದೂರು ತಾಲೂಕಿನಲ್ಲಿ ೦.೨೩ ಹೆಕ್ಟೇರ್‌ನಲ್ಲಿ ನಷ್ಟವಾಗಿದೆ. ಟಮೋಟೋ ಬೆಳೆ ಮಳವಳ್ಳಿ ತಾಲೂಕಿನಲ್ಲಿ ೦.೮೦ ಹೆಕ್ಟೇರ್, ಮಂಡ್ಯ ತಾಲೂಕಿನಲ್ಲಿ ೦.೨೦ ಹೆಕ್ಟೇರ್, ಸೌತೆಬೆಳೆ ಮಂಡ್ಯ ತಾಲೂಕಿನಲ್ಲಿ ೦.೪೦ ಹೆಕ್ಟೇರ್, ತರಕಾರಿ ಬೆಳೆಗಳು ಮಳವಳ್ಳಿ ತಾಲೂಕಿನ ೧.೪೫ ಹೆಕ್ಟೇರ್ ಪ್ರದೇಶದಲ್ಲಿ ಹಾನಿಗೊಳಗಾಗಿರುವುದಾಗಿ ತೋಟಗಾರಿಕೆ ಇಲಾಖೆ ದೃಢಪಡಿಸಿದೆ.
೧೫೮ ಗ್ರಾಮಗಳಿಗೆ ಬೋರ್‌ವೆಲ್ ನೀರು: ಜಿಲ್ಲೆಯ ೧೫೮ ಗ್ರಾಮಗಳಿಗೆ ೧೭೪ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಸಲಾಗುತ್ತಿದ್ದು, ಕೆ.ಆರ್.ಪೇಟೆ ಗ್ರಾಮದ ಒಂದು ಗ್ರಾಮಕ್ಕೆ ಟ್ಯಾಂಕರ್ ಮೂಲಕ ದಿನಕ್ಕೆ ನಾಲ್ಕು ಬಾರಿ ಸರಬರಾಜು ಮಾಡಲಾಗುತ್ತಿದೆ. ಕೆ.ಆರ್.ಪೇಟೆ ತಾಲೂಕಿನ ೨೨ ಗ್ರಾಮಗಳಿಗೆ ೩೩ ಬೋರ್‌ವೆಲ್‌ಗಳು, ಮದ್ದೂರು ತಾಲೂಕಿನ ೪೦ ಗ್ರಾಮಗಳಿಗೆ ೪೪ ಬೋರ್‌ವೆಲ್‌ಗಳು, ಮಳವಳ್ಳಿ ತಾಲೂಕಿನ ೮ ಗ್ರಾಮಗಳಿಗೆ ೮ ಬೋರ್‌ವೆಲ್‌ಗಳು, ಮಂಡ್ಯ ತಾಲೂಕಿನ ೪೦ ಗ್ರಾಮಗಳಿಗೆ ೪೮ ಬೋರ್‌ವೆಲ್‌ಗಳು, ನಾಗಮಂಗಲ ತಾಲೂಕಿನ ೨೨ ಗ್ರಾಮಗಳಿಗೆ ೨೨ ಬೋರ್‌ವೆಲ್‌ಗಳು, ಪಾಂಡವಪುರ ತಾಲೂಕಿನ ೧೨ ಗ್ರಾಮಗಳಿಗೆ ೧೨ ಬೋರ್‌ವೆಲ್‌ಗಳು ಹಾಗೂ ಶ್ರೀರಂಗಪಟ್ಟಣ ತಾಲೂಕಿನ ೭ ಗ್ರಾಮಗಳಿಗೆ ೭ ಬೋರ್‌ವೆಲ್‌ಗಳ ಮುಖಾಂತರ ನೀರನ್ನು ಸರಬರಾಜು ಮಾಡಲಾಗುತ್ತಿದೆ. ೪.೯೮ ಲಕ್ಷ ರು. ಬಾಕಿ: ಇದೇ ವೇಳೆ ಡಿಸೆಂಬರ್ ತಿಂಗಳಿನಿಂದ ಇಲ್ಲಿಯವರರೆಗೆ ಕುಡಿಯುವ ನೀರು ಪೂರೈಸಿರುವುದಕ್ಕೆ ಪಾವತಿಸಬೇಕಾದ ಮೊತ್ತ ೪.೯೮ ಲಕ್ಷ ರು.ಗಳಾಗಿದೆ. ಈ ಹಣವನ್ನು ಇಲ್ಲಿಯವರೆಗೂ ಪಾವತಿಸಲಾಗಿಲ್ಲ. ಕೆ.ಆರ್.ಪೇಟೆ ತಾಲೂಕಿಗೆ ೬೮ ಸಾವಿರ ರು., ಮದ್ದೂರು-೩೬ ಸಾವಿರ ರು., ಮಳವಳ್ಳಿ-೧.೦೩ ಲಕ್ಷ ರು., ಮಂಡ್ಯ-೮೩ ಸಾವಿರ ರು., ನಾಗಮಂಗಲ-೯೭ ಸಾವಿರ ರು., ಪಾಂಡವಪುರ-೩೬ ಸಾವಿರ ರು., ಶ್ರೀರಂಗಪಟ್ಟಣ ತಾಲೂಕಿಗೆ ೭೫ ಸಾವಿರ ರು. ಪಾವತಿಸಬೇಕಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.