ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಬಿ.ವಿ.ವಿ.ಸಂಘದ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಪೊಲೀಸ್ ಇಲಾಖೆ, ಹಾಗೂ ಬಿ.ವಿ.ವಿ.ಸಂಘದ ವಿವಿಧ ಶಾಲಾ ಕಾಲೇಜುಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮುಕ್ತ ದಿನದ ನಿಮಿತ್ತ ಗುರುವಾರ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯಾದ್ಯಂತ 4 ಲಕ್ಷ ಒಟ್ಟು 4 ಲಕ್ಷ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧನೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿರುವ 3 ಸಾವರಕ್ಕೂ ಅಧಿಕ ಶಾಲಾ ಕಾಲೇಜುಗಳಲ್ಲಿ 4 ಲಕ್ಷ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಗಿದೆ, ಡ್ರಗ್ಸ್ ಕೊಲೆಗಿಂತ ಹೆಚ್ಚು ಹಿಂಸಾತ್ಮಕವಾಗಿದ್ದು, ಇದೊಂದು ಘೋರ ಅಪರಾಧ ಎಂದು ಪರಿಗಣಿಸಲಾಗಿದೆ ಎಂದು ತಿಳಿಸಿದರು.ದೇಶವನ್ನು ವ್ಯಸನಮುಕ್ತವನ್ನಾಗಿ ಮಾಡಬೇಕು. ಭಾರತ ಹಾಗೂ ರಾಜ್ಯ ಸರ್ಕಾರದ ಸಂಕಲ್ಪದಂತೆ ಕಾರ್ಯೋನ್ಮುಖರಾಗೋಣ, ವಿದ್ಯಾರ್ಥಿಗಳು ಈ ದೇಶದ ಮುಂದಿನ ಬದ್ರ ಬುನಾದಿಯಾಗಿದ್ದು, ವಿದ್ಯಾರ್ಥಿಗಳಲ್ಲಿಯೇ ಸಂಕಲ್ಪ ಮಾಡಿಸುವ ಮೂಲಕ ದೇಶ ಭದ್ರಗೊಳಿಸೋಣ, ಜಿಲ್ಲೆಯಲ್ಲಿ ಎಐ ಮುಖಾಂತರ ಹೊಸ ಟ್ರಾಫಿಕ್ ನಿಯಮ ಜಾರಿಗೆ ತರುತ್ತಿದ್ದು, ಅವುಗಳನ್ನು ಪಾಲಿಸುವುದರ ಜೊತೆಗೆ ಪಾಲಕರಿಗೂ ತಿಳಿಸಿ, ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸಿ. ಮುಂದಿನ ವರ್ಷಗಳಲ್ಲಿ ಮಹಿಳೆಯರೇ ಭಾರತ ಮುನ್ನೆಡೆಸಲಿದ್ದಾರೆ ಎಂದು ಹೇಳಿದರು.