ಕನ್ನಡಪ್ರಭ ವಾರ್ತೆ ಮೂಡಲಗಿ
ಪಟ್ಟಣದ ಗುಡ್ಲಮಡ್ಡಿ ವೀರಭದ್ರೇಶ್ವರ ದೇವಸ್ಥಾನದ ಕೆ.ಎಚ್. ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಜರುಗಿದ ಶ್ರೀ ಶಿವಬೋಧರಂಗ ಅರ್ಬನ್ ಕೋ ಆಫ್ ಕ್ರೆಡಿಟ್ ಸೊಸೈಟಿಯ 29ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿ ಮಾತನಾಡಿದ ಅವರು, ಸೊಸೈಟಿಯು ಕಳೆದ ಮಾರ್ಚ್ ಅಂತ್ಯಕ್ಕೆ 15814 ಸದಸ್ಯರನ್ನು ಹೊಂದಿದೆ. ₹341 ಕೋಟಿ ಠೇವು ಸಂಗ್ರಹಿಸಿ, ₹393 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ₹191 ಕೋಟಿ ಸಾಲ ನೀಡಿದೆ. ಒಟ್ಟು ₹1335 ಕೋಟಿ ವಾರ್ಷಿಕ ವಹಿವಾಟು ನಡೆಸಿದೆ ಎಂದ ಅವರು ಸೊಸೈಟಿಯು ಪ್ರಗತಿ ಪಥದಲ್ಲಿ ಸಾಗುವಲ್ಲಿ ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ, ಸಿಬ್ಬಂದಿ ಪರಿಶ್ರಮ ಹಾಗೂ ಸಕಾಲಕ್ಕೆ ಗ್ರಾಹಕರು ಸಾಲ ಪಾವತಿ ಮಾಡುತ್ತಿರುವುದೇ ಕಾರಣ ಎಂದರು.
ಮಮದಾಪುರ ಶಾಖೆಯ ಅಧ್ಯಕ್ಷ ಮಹಾದೇವ ಗಾಣಗಿ, ಸಾಲಗಾರರು ಪಡೆದುಕೊಂಡ ಸಾಲವನ್ನು ಸರಿಯಾದ ವೇಳೆಗೆ ಮರುಪಾವತಿಸಿದರೆ ಮಾತ್ರ ಸೊಸೈಟಿ ಇಷ್ಟೊಂದು ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದರು.ರಬಕವಿ ಶಾಖೆಯ ಸಲಹಾ ಸಮಿತಿ ಸದಸ್ಯ ಶಿವಾನಂದ ದಾಶಾಳ ಮಾತನಾಡಿ, ಸೊಸೈಟಿಯು ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮಾತ್ರ ಹೆಸರು ಗಳಿಸದೇ ರಾಜ್ಯದಲ್ಲಿಯೂ ತನ್ನ ಹೆಸರು ಪಸರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.
ಪ್ರಧಾನ ವ್ಯವಸ್ಥಾಪಕ ಸುರೇಶ ನಾಶಿ ಕ್ರೋಡೀಕೃತ ಅಢಾವೆ ಪತ್ರಿಕೆ, ಗುರ್ಲಾಪುರ ಶಾಖೆಯ ವ್ಯಸ್ಥಾಪಕ ವೆಂಕಟೇಶ ಬಾಲರಡ್ಡಿ ವರದಿ ವಾಚನ, ಜಮಖಂಡಿ ಶಾಖಾ ವ್ಯವಸ್ಥಾಪಕ ಅಶೋಕ ಹೊಸಟ್ಟಿ ಸಹಕಾರಿಯ ಲಾಭ-ಹಾನಿ, ಸಾವಳಗಿ ಶಾಖಾ ವ್ಯವಸ್ಥಾಪಕ ಆಸೀಫ್ ದೇಸಾಯಿ ಲಾಭ ವಿಂಗಡಣೆ ಮತ್ತು ಹಣಮಂತ ಕುಂಬಾರ ಅಂದಾಜು ಪತ್ರಿಕೆ ಮಂಡಿಸಿದರು. ಗುರ್ಲಾಪುರ ಶಾಖಾ ವ್ಯವಸ್ಥಾಪಕ ವಿ.ಎಚ್. ಬಾಲರಡ್ಡಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.