ಖಾನಾಪುರ ಕ್ಷೇತ್ರಕ್ಕೆ ₹ 500 ಕೋಟಿ ಅನುದಾನ: ನಿಂಬಾಳಕರ

KannadaprabhaNewsNetwork |  
Published : Feb 16, 2026, 03:00 AM IST
ನಿಂಬಾಳಕರ | Kannada Prabha

ಸಾರಾಂಶ

ಖಾನಾಪುರ: ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಡಿ ಖಾನಾಪುರ ವಿಧಾನಸಭಾ ಕ್ಷೇತ್ರಕ್ಕೆ ₹ 500 ಕೋಟಿಯಷ್ಟು ಅನುದಾನ ಸಿಕ್ಕಿದ್ದು, ಇದರಿಂದ ಸಾವಿರಾರು ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿವೆ ಎಂದು ಮಾಜಿ ಶಾಸಕಿ, ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳಕರ ಮಾಹಿತಿ ನೀಡಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಕಾರ ಕಳೆದ 1000 ದಿನಗಳಲ್ಲಿ ಈ ಯೋಜನೆಗಳಿಗಾಗಿ ₹ 1.16 ಲಕ್ಷ ಕೋಟಿ ವ್ಯಯಿಸಿದೆ. ರಾಜ್ಯದ 1.37 ಕೋಟಿ ಕುಟುಂಬಗಳಿಗೆ ಇದರಿಂದ ಪ್ರಯೋಜನ ಸಿಕ್ಕಿದೆ. ನಮ್ಮ ತಾಲೂಕಿಗೆ ಈ ಯೋಜನೆಗಳಡಿ ವಿತರಣೆಗೆ ಪ್ರತಿ ತಿಂಗಳು ₹ 20 ಕೋಟಿ ಅನುದಾನ ಲಭ್ಯವಾಗುತ್ತಿದ್ದು, ಗ್ಯಾರಂಟಿ ಯೋಜನೆಗಳು ಪ್ರಾರಂಭವಾಗಿ 27 ತಿಂಗಳಲ್ಲಿ ₹ 500 ಕೋಟಿಗೂ ಹೆಚ್ಚು ಹಣ ಲಭ್ಯವಾಗಿದೆ. ಈ ಮೂಲಕ ಬಡವರು, ಸಾಮಾನ್ಯರು, ಶ್ರಮಜೀವಿಗಳು, ಕಾರ್ಮಿಕರು, ರೈತರು ಮತ್ತು ಮಹಿಳೆಯರ ಸಬಲೀಕರಣಕ್ಕೆ ಪಕ್ಷ ಹೆಚ್ಚು ಒತ್ತು ನೀಡಿದೆ. ಆದರೆ, ಕೇಂದ್ರ ಸರ್ಕಾರ ಇದಕ್ಕೆ ತದ್ವಿರುದ್ಧವಾಗಿದ್ದು, ಮೋದಿ ಸರ್ಕಾರದ ನೀತಿಯು ಅದಾನಿ-ಅಂಬಾನಿಯಂತಹ ಉದ್ಯಮಿಗಳ ಪರವಾಗಿದೆ. ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡುವತ್ತ ಮೋದಿ ವಾಲುತ್ತಿದ್ದಾರೆ. ಇದನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಥಣಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ
ಪು4...ಲೀಡ್‌.... ಕಲಾವಿದರಿಗೆ ಬೇಕಿದೆ ಸಮಾಜ, ಸರ್ಕಾರದ ನೆರವು