ಮಾಲಕರ 50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನೇತ್ರದಾನ ಘೋಷಿಸಿದ 52 ಸಿಬ್ಬಂದಿ

KannadaprabhaNewsNetwork |  
Published : Nov 08, 2025, 02:45 AM IST
ಮಾಲಕರ 50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನೇತ್ರದಾನ ಘೋಷಿಸಿದ 52 ಸಿಬ್ಬಂದಿಗಳುಎಸ್ ಆರ್ ಕೆ ಲ್ಯಾಡರ್ಸ್ ಮಾಲಕ ಕೇಶವ ಅಮೈ ಅವರ ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆ | Kannada Prabha

ಸಾರಾಂಶ

ಎಸ್.ಆರ್.ಕೆ.ಲ್ಯಾಡರ್ಸ್ ನ ಮಾಲಕ ಕೇಶವ ಅಮೈ ಹುಟ್ಟು ಹಬ್ಬದ ಸಲುವಾಗಿ ಸಂಸ್ಥೆಯ 52 ಸಿಬ್ಬಂದಿ ಸೇರಿದಂತೆ ಸುಮಾರು 66 ಮಂದಿ ನೇತ್ರದಾನ ಪತ್ರಕ್ಕೆ ಸಹಿ ಹಾಕುವ ಮೂಲಕ ಹುಟ್ಟು ಹಬ್ಬವನ್ನು ಪುತ್ತೂರಿನಲ್ಲಿ ವಿಶೇಷವಾಗಿ ಆಚರಿಸಿದ್ದಾರೆ.

ಎಸ್ಆರ್‌ಕೆ ಲ್ಯಾಡರ್ಸ್ ಮಾಲಕ ಕೇಶವ ಅಮೈ ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆ

ಪುತ್ತೂರು: ನೇತ್ರದಾನದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಮೂಲಕ ತಮ್ಮ ಅಂತರಂಗದಲ್ಲಿ ದೃಷ್ಟಿಯನ್ನು ಹೊಂದಿರುವ ಎಸ್.ಆರ್.ಕೆ.ಲ್ಯಾಡರ್ಸ್ ನ ಮಾಲಕ ಕೇಶವ ಅಮೈ ಹುಟ್ಟು ಹಬ್ಬದ ಸಲುವಾಗಿ ಸಂಸ್ಥೆಯ 52 ಸಿಬ್ಬಂದಿ ಸೇರಿದಂತೆ ಸುಮಾರು 66 ಮಂದಿ ನೇತ್ರದಾನ ಪತ್ರಕ್ಕೆ ಸಹಿ ಹಾಕುವ ಮೂಲಕ ಹುಟ್ಟು ಹಬ್ಬವನ್ನು ಪುತ್ತೂರಿನಲ್ಲಿ ವಿಶೇಷವಾಗಿ ಆಚರಿಸಿದ್ದಾರೆ.

ನ.7ರಂದು ಎಸ್‌ಆರ್‌ಕೆ ಲ್ಯಾಡರ್ಸ್ ನ ಮಾಲಕ ಕೇಶವ ಅಮೈ ಹುಟ್ಟುಹಬ್ಬದ ಪ್ರಯುಕ್ತ ಸಂಸ್ಥೆಯಲ್ಲಿ ಬೆಳಗ್ಗೆ ನೇತ್ರದಾನ ನೋಂದಾವಣೆ ಶಿಬಿರ ಮತ್ತು ಅಡಿಕೆಯನ್ನು ಗೊನೆಯಿಂದ ಬಿಡಿಸುವ, ಕಾಳುಮೆಣಸು ಸ್ವಚ್ಛ ಮಡುವ ಯಂತ್ರ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಬಳಿಕ ಬೀರುಮಲೆಯಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ನೆಟ್ ಬೇಲಿ ಕೊಡುಗೆ ಉದ್ಘಾಟಿಸಲಾಯಿತು. ನಿವೃತ್ತ ಯುವಜನಸೇವಾ ಕ್ರೀಡಾಧಿಕಾರಿ ಮಾಧವ ಬಿ.ಕೆ. ಬೇಲಿ ಉದ್ಘಾಟನೆ ನೆರವೇರಿಸಿದರು. ಅಡಿಕೆಯನ್ನು ಗೊನೆಯಿಂದ ಬಿಡಿಸುವ ಯಂತ್ರವನ್ನು ನಿವೃತ್ತ ಪ್ರಾಂಶುಪಾಲ ಝೇವಿಯರ್ ಡಿ ಸೋಜ ಬಿಡುಗಡೆಗೊಳಿಸಿದರು. ಕಾಳುಮೆಣಸು ಸ್ವಚ್ಚಗೊಳಿಸುವ ಯಂತ್ರವನ್ನು ನಿವೃತ್ತ ದೈಹಿಕ ಶಿಕ್ಷಕ ಶಿವರಾಮ ಏನೆಕಲ್ಲು ಲೋಕಾರ್ಪಣೆಗೊಳಿಸಿದರು.

ಈ ಯೋಗ ಬೇರೆ ಯಾರಿಗೂ ಇಲ್ಲ:ಎಸ್‌ಆರ್‌ಕೆ ಲ್ಯಾಡರ್ಸ್‌ ಮಾಲೀಕ ಕೇಶವ ಅಮೈ ಮಾತನಾಡಿ, ಎಸ್.ಆರ್.ಕೆ. ಪರಿವಾರ ಒಂದು ಯೋಗ. ಇಂತಹ ಆತ್ಮೀಯ, ಹಿತೈಷಿಗಳು, ಮಿತ್ರರು, ಬಂಧುಗಳನ್ನು ಪಡೆದಿರುವ ನನಗೆ ಚೆನ್ನಾಗಿರುವ ಯೋಗ ಇದೆ. ಹುಟ್ಟು ಹಬ್ಬದ ದಿನ ಸಮಾಜಮುಖಿ ಕಾರ್ಯದ ಕುರಿತು ಟೀಮ್ ಎಸ್‌ಆರ್‌ಕೆ ಆಲೊಚನೆ ಹೊರತು ನನ್ನ ಆಲೋಚನೆ ಅಲ್ಲ. ಈ ಯೋಜನೆ, ಯೋಚನೆಯ ಕ್ರೆಡಿಟ್ ಅವರಿಗೆ ಸೇರಿದ್ದು ಎಂದರು.ಬೇಧ ಭಾವ ಇಲ್ಲದ ಸಂಸ್ಥೆ:ಎಸ್‌ಆರ್‌ಕೆ ಲ್ಯಾಡರ್ಸ್‌ ಸಂಸ್ಥೆಯ ಸಿಬ್ಬಂದಿ ಮನೋಜ್ ಬಿ ಅವರು, ದೃಢ ನಿರ್ಧಾರದ ಸಾಧನೆ ಕೇಶವಣ್ಣ ಅವರದ್ದು. ಅವರ ಸಾಧನೆ ನಮಗೆ ಸ್ಪೂರ್ತಿ. ಇಲ್ಲಿ ಮಾಲಕ ಕಾರ್ಮಿಕರ ಬೇಧಬಾವ ಇಲ್ಲ. ನಮಗೆ ಯಾವುದೇ ತೊಂದರೆ ಆದರೂ ಪರಿಹಾರ ಸಿಗುತ್ತದೆ ಎಂದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್, ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ಸತೀಶ್ ಭಟ್, ಸುಬ್ರಹ್ಮಣ್ಯ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಮೋದ್ ಕೆ.ಕೆ ,ಸ್ಪಂದನಾ ಸಮುದಾಯ ಸಹಕಾರಿ ಸಂಘದ ಉಪಾಧ್ಯಕ್ಷ ಚೇತನ್ ಆನೆಗುಂಡಿ, ಮೊದಲಾದವರು ಇದ್ದರು.ಕೇಕ್ ಕಟ್ ಮಾಡುವ ಮೂಲಕ ಕೇಶವ ಅಮೈ ಮತ್ತು ಅವರ ಸಹೋದರಿ ಶ್ರೀಲತಾ ಅವರಿಗೂ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಲಾಯಿತು. ರಕ್ಷಿತ್ ಕಬಕ, ಪ್ರವೀಣ್, ಗಣೇಶ್ ಕಬಕ, ಬಾಲಕೃಷ್ಣ ಗೌಡ, ಕೀರ್ತೇಶ್, ಸುಮಾ, ಕೀರ್ತನ್, ಅಶ್ವಿನಿ, ಲಿವಿಟ ಪಿಂಟೊ, ಅತಿಥಿಗಳನ್ನು ಗೌರವಿಸಿದರು. ದೀಪಕ್ ಪ್ರಾರ್ಥಿಸಿದರು. ರಕ್ಷಿತ್ ಆಚಾರ್ಯ ಸ್ವಾಗತಿಸಿದರು. ಅಶ್ವಿನಿ ವಂದಿಸಿದರು. ಕಾರ್ಯಕ್ರಮ ಯೋಜನೆಯ ರೂವಾರಿ ದಿನೇಶ್ ನಿರೂಪಿಸಿದರು. ಪ್ರಮೋದ್ ಕೆ.ಕೆ ಅವರ ಪತ್ನಿ ವಿಜಯಲಕ್ಷ್ಮಿ, ಕೇಶವ ಅಮೈ ಅವರ ಪುತ್ರ ಗಗನ್ ಕೇಶವ್, ಕೇಶವ ಅಮೈ ಅವರ ಸಹೋದರಿ ಹೇಮಾವತಿ , ಶ್ರೀಲತಾ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಪ್ರಸಾದ್ ನೇತ್ರಾಲಯದ ಮನೋಹರ್ ಅವರು ನೇತ್ರದಾನ ಶಿಬಿರದ ನೋಂದಣಿ ಕಾರ್ಯ ನೆರವೇರಿಸಿದರು.

PREV

Recommended Stories

83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!