)
ಧಾರವಾಡ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ನೆಪ ನೀಡುತ್ತಾ ನೇಮಕಾತಿ ಪ್ರಕ್ರಿಯೆ ಮುಂದೂಡಲಾಗುತ್ತಿದೆ. ಪೊಲೀಸ್ ನೇಮಕಾತಿ ಅರ್ಜಿ ಶುಲ್ಕ ಕಡಿತಗೊಳಿಸಬೇಕು ಹಾಗೂ ಪರೀಕ್ಷಾ ಅಕ್ರಮ ತಡೆಗಟ್ಟಿ ಪಾರದರ್ಶಕ ನೇಮಕಾತಿಗೆ ಆಗ್ರಹಿಸಿ ಜೂ. 23ರಂದು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆಯು ಪ್ರಸ್ತುತ ಯುವಜನರು ಎದುರಿಸುತ್ತಿರುವ ತೀವ್ರ ನಿರುದ್ಯೋಗ ಸಮಸ್ಯೆ, ನೇಮಕಾತಿಗಳಲ್ಲಿ ನಡೆಯುತ್ತಿರುವ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೇಶವ್ಯಾಪಿ ಹೋರಾಟಗಳನ್ನು ಬೆಳೆಸುತ್ತಿದೆ. ಯುವಜನರ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿರುವ ಸರ್ಕಾರಗಳ ಯುವಜನ ವಿರೋಧಿ, ದಮನಕಾರಿ ನೀತಿಗಳನ್ನು ಹಿಮ್ಮೆಟ್ಟಿಸಲು ನಿರಂತರವಾಗಿ ಚಳವಳಿ ಬೆಳೆಸುತ್ತಿದೆ. ಎಐಡಿವೈಒ ಸಂಸ್ಥೆಗೆ ಈಗ 60ರ ಸಂಭ್ರಮ. ಇದರ ಅಂಗವಾಗಿ ಜೂ. 27ರಂದು ಕೊಲ್ಕತ್ತಾದಲ್ಲಿ ಬೃಹತ್ ಕಾರ್ಯಕ್ರಮ ಸಹ ಸಂಘಟಿಸಲಾಗಿದೆ ಎಂದು ಹೇಳಿದರು.ಎಐಡಿವೈಒ ಸಂಘಟನೆಯನ್ನು ವಿಸ್ತರಿಸಲು, ಸದೃಢಗೊಳಿಸಲು ನವೆಂಬರ್‌ನಲ್ಲಿ ಅಖಿಲ ಭಾರತ ಯುವಜನ ಸಮ್ಮೇಳನವನ್ನು ಜೈಪುರದಲ್ಲಿ ಆಯೋಜಿಸುತ್ತಿದ್ದು, ಅದರ ಭಾಗವಾಗಿ ಸ್ಥಳೀಯ, ತಾಲೂಕು, ಜಿಲ್ಲೆ, ರಾಜ್ಯಮಟ್ಟದ ಸಮ್ಮೇಳನ, ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಈ ರಾಜೀರಹಿತ ಯುವಜನ ಚಳವಳಿಯನ್ನು ಬಲಪಡಿಸಲು ಕರ್ನಾಟಕ ಸೇರಿದಂತೆ ದೇಶಾದ್ಯಂತ ಯುವಜನರು ಕೈಜೋಡಿಸಬೇಕೆಂದು ಮನವಿ ಮಾಡಿದರು.