ಹುಮನಾಬಾದ್: ಹೈದ್ರಾಬಾದ್ ದಿಂದ ಕಲಬುರಗಿ ಸಾಗಿಸುತ್ತಿದ್ದ ಅಕ್ರಮ ಸಾಗಾಟ ಮಾಡಲಾಗುತ್ತಿರುವ ಗುಟ್ಕಾ ಲಾರಿ ಸಹಿತ ಜಪ್ತಿ ಮಾಡಿರುವ ಘಟನೆ ಹುಮನಾಬಾದ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪಟ್ಟಣದ ಹೊರವಲಯದ ಆರ್‌ಟಿಒ ಕಚೇರಿ ಸಮೀಪ ಲಾರಿ ಚಾಲಕ ಅಹ್ಮದ್ ಖಾನ್ ರೇಹಮಾನ ಖಾನ ಹೈದ್ರಾಬಾದ್ ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದಾರೆ. ಲಾರಿಯಲ್ಲಿ 57 ಚೀಲಗಳಲ್ಲಿ ಗುಟ್ಕಾ ಕಚ್ಚಾ ಪದಾರ್ಥಗಳು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪಿಎಸ್ಐ ಸುರೇಶಕುಮಾರ ಮಾಹಿತಿ ನೀಡಿದ್ದಾರೆ.