ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು
ತಳಕಲ್ಲ ಇಂಜಿನಿಯರಿಂಗ್ ಕಾಲೇಜಿನಲ್ಲಿ 5 ಟ್ರೇಡ್ ಜರುಗುತ್ತಿದ್ದು, 1048 ವಿದ್ಯಾರ್ಥಿಗಳು ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಸದ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಸತಿ ನಿಲಯ ಖಾಸಗಿಯವರ ನೇತೃತ್ವದಲ್ಲಿ ಜರುಗುತ್ತಿದ್ದು. ಊಟಕ್ಕೆ ಹಣ ವಿದ್ಯಾರ್ಥಿಗಳು ಪಾವತಿಸಬೇಕಾಗಿದೆ. ವಿದ್ಯಾರ್ಥಿ ನಿಲಯಗಳಲ್ಲಿ ಊಟದ ಮೆಸ್ ಖಾಸಗಿ ಸಂಸ್ಥೆಗಳ ಮೂಲಕ ನಡೆಯುತ್ತಿದ್ದರಿಂದ ಪ್ರತಿ ವಿದ್ಯಾರ್ಥಿಗೂ ತಿಂಗಳಿಗೆ ₹ 4,500 ರಷ್ಟು ಭಾರವಾಗುತ್ತಿತ್ತು. ಆದರೆ ಈಗ ಈ ಹಾಸ್ಟೆಲ್ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ನೇರ ನಿರ್ವಹಣೆಗೆ ಸರ್ಕಾರ ನೀಡಿದೆ. ಇದರ ಫಲವಾಗಿ ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ ಸರಾಸರಿ ₹ 50,000 ರವರೆಗೆ ಆರ್ಥಿಕ ಹೊರೆ ಉಳಿತಾಯವಾಗಲಿದೆ.
ಸರ್ಕಾರ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರತಿ ಜಿಲ್ಲೆಗೆ ಎರಡರಂತೆ 62 ಮೆಟ್ರಿಕ್-ನಂತರದ ವಸತಿ ನಿಲಯ ಪ್ರಾರಂಭಿಸುವ ಆದೇಶ ಮಾಡಿತ್ತು. ಇವುಗಳ ಪೈಕಿ ಒಟ್ಟು 10 ಇಂಜಿನಿಯರಿಂಗ್ ವಸತಿ ನಿಲಯಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ 50: 50 ಅನುದಾನದ ಅನುಪಾತದಲ್ಲಿ ಕಟ್ಟಡ ನಿರ್ಮಾಣ ಮಾಡಲು ಸಹ ಘೋಷಿಸಿತ್ತು.ಸರ್ಕಾರದ ಭಾಷಣದ ಕಂಡಿಕೆ 204ರಲ್ಲಿ ಘೋಷಣೆ ಪ್ರಕಾರ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗೆ ಎರಡರಂತೆ ಮೆಟ್ರಿಕ್-ನಂತರದ ವಸತಿ ನಿಲಯಗಳನ್ನು ಹುದ್ದೆಗಳ ಸೃಜನೆಯೊಂದಿಗೆ ಪ್ರಾರಂಭಿಸಲು ಮಂಜೂರಾತಿ ನೀಡಿ ಆದೇಶಿತ್ತು.
ತಳಕಲ್ಲಿ ಇಂಜಿನಿಯರ್ ಕಾಲೇಜಿನಲ್ಲಿ ಸುಮಾರು 600 ಇಂಜಿನಿಯರ್ ವಿದ್ಯಾರ್ಥಿಗಳು ವಸತಿ ಇರಲು ಅವಕಾಶ ಇದ್ದು, ತಳಕಲ್ಲ ಇಂಜಿನಿಯರ್ ಕಾಲೇಜಿಗೆ ವಸತಿ ನಿಲಯ ಮಂಜೂರು ಮಾಡಲು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು, ಇದರಿಂದ ಇಲಾಖೆ ತಳಕಲ್ ಇಂಜಿನಿಯರಿಂಗ್ ಕಾಲೇಜು ಇಲ್ಲಿ 300 ವಿದ್ಯಾರ್ಥಿ ಹಾಗೂ 300 ವಿದ್ಯಾರ್ಥಿನಿಯರಿಗೆ ಅವಶ್ಯಕವಿರುವ ಕೊಠಡಿ, ಅಗತ್ಯ ಮೂಲಸೌಕರ್ಯ ಸಹ ಇದ್ದು ವಸತಿ ನಿಲಯ ಮಂಜೂರಾತಿ ನೀಡಿ ಆದೇಶಿಸಿದ್ದಾರೆ.
ತಳಕಲ್ಲ ಇಂಜಿನಿಯರಿಂಗ್ ಕಾಲೇಜಿಗೆ 3 ಬಾಲಕರ, 3 ಬಾಳಕಿಯರ ವಸತಿ ನಿಲಯ ಮಂಜೂರಾಗಿದೆ. ಇದರಿಂದ 600 ಬಡ ವಿದ್ಯಾರ್ಥಿಗಳಿಗೆ ವಸತಿ ಸಹಿತ ಇಂಜಿನಿಯರಿಂಗ್ ಅಭ್ಯಾಸ ಮಾಡುವ ಅವಕಾಶ ಸಿಗಲಿದೆ. ಶೈಕ್ಷಣೀಕರ ಅಭಿವೃದ್ಧಿಗೆ ವಸತಿ ನಿಲಯಗಳು ಭದ್ರ ಬುನಾದಿ ಆಗಿವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗು ಶಾಸಕ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.
ಎಂದು ತಳಕಲ್ಲ ಇಂಜಿನಿಯರ್ ಕಾಲೇಜಿನ ಪ್ರಾಂಶುಪಾಲ ವಿರೇಶ ಬಾಗೋಡಿ ತಿಳಿಸಿದ್ದಾರೆ.