ಬಡ ಕೂಲಿ ಕಾರ್ಮಿಕನ ಮಗಳಿಗೆ 618 ಅಂಕ: ಸರ್ಕಾರಿ ಪ್ರೌಢ ಶಾಲೆಗೆ ಆಶಾಬಾನು ಟಾಪರ್‌

KannadaprabhaNewsNetwork |  
Published : Apr 25, 2026, 03:00 AM IST
ಹೂವಿನಹಡಗಲಿ ತಾಲೂಕಿನ ಮುದೇನೂರು ಗ್ರಾಮದ ಡಿ.ಆಶಾಭಾನು ಎಸ್ಸೆಸ್ಸೆಎಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢ ಶಾಲೆಗೆ 618 ಅಂಕ ಪಡೆದು ಟಾಪರ್‌ ಆಗಿರುವ ವಿದ್ಯಾರ್ಥಿನಿಗೆ ಅವರ ತಾಯಿ ಸಿಹಿ ತಿನ್ನಿಸುತ್ತಿರುವುದು.  | Kannada Prabha

ಸಾರಾಂಶ

ತೃತೀಯ ಭಾಷೆ ಹಿಂದಿ, ಸಮಾಜ ವಿಷಯದಲ್ಲಿ ನೂರಕ್ಕೆ 100 ಅಂಕ, ಕನ್ನಡದಲ್ಲಿ 123, ಇಂಗ್ಲಿಷ್, ಗಣಿತದಲ್ಲಿ 99, ವಿಜ್ಞಾನದಲ್ಲಿ 97 ಅಂಕ ಪಡೆದಿದ್ದಾರೆ.

ಹೂವಿನಹಡಗಲಿ: ದೈನಂದಿನ ಜೀವನ ನಿರ್ವಹಣೆಗೆ ಕೂಲಿ ಕಾರ್ಮಿಕ ಕೆಲಸ, ತಲೆ ಮೇಲೆ ಗಟ್ಟಿ ಸೂರು ಇಲ್ಲದೇ ಸುತ್ತ ತಗಡು ಕಟ್ಟಿಕೊಂಡು ಜೋಪಡಿಯಲ್ಲಿ ಜೀವನ ಸಾಗಿಸುವ ಕೂಲಿ ಕಾರ್ಮಿನ ಮಗಳು ಡಿ.ಆಶಾಬಾನು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 618 ಅಂಕಗಳನ್ನು ಗಳಿಸಿ ಸರ್ಕಾರಿ ಪ್ರೌಢ ಶಾಲೆ ಕನ್ನಡ ಮಾಧ್ಯಮದಲ್ಲಿ ಟಾಪರ್‌ ಆಗಿ ಹೊರ ಹೊಮ್ಮಿದ್ದಾರೆ.ತಾಲೂಕಿನ ನಂದಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಬಡ ವಿದ್ಯಾರ್ಥಿನಿ ಡಿ.ಆಶಾಬಾನು ನಂದಿಹಳ್ಳಿಯ ಕೂಲಿಕಾರ್ಮಿಕರಾದ ಡಿ.ಪರಿನಾಬಾನು ಮತ್ತು ಮಾಬುಸಾಬ್ ದಂಪತಿಯ ಪುತ್ರಿ ಆಶಾಬಾನು ಬಡತನ ಮೆಟ್ಟಿ ನಿಂತು ಶೈಕ್ಷಣಿಕ ಸಾಧನೆಗೆ ಇಡೀ ಗ್ರಾಮವೇ ಸೈ ಎನ್ನುತ್ತಿದೆ.

ತೃತೀಯ ಭಾಷೆ ಹಿಂದಿ, ಸಮಾಜ ವಿಷಯದಲ್ಲಿ ನೂರಕ್ಕೆ 100 ಅಂಕ, ಕನ್ನಡದಲ್ಲಿ 123, ಇಂಗ್ಲಿಷ್, ಗಣಿತದಲ್ಲಿ 99, ವಿಜ್ಞಾನದಲ್ಲಿ 97 ಅಂಕ ಪಡೆದಿದ್ದಾರೆ.

ಪರೀಕ್ಷೆಯಲ್ಲಿ 625 ಪೂರ್ಣ ಅಂಕ ಬರುವ ನಿರೀಕ್ಷೆಯಲ್ಲಿದ್ದೆ. ಆದರೆ 618 ಅಂಕ ಲಭಿಸಿರುವುದು ಸಂತಸವಾಗಿದೆ. ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನ, ತಾಯಿಯ ಪ್ರೋತ್ಸಾಹದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ವಿಜ್ಞಾನ ವಿದ್ಯಾರ್ಥಿನಿಯಾಗಿ ಮುಂದೆಯೂ ಕಷ್ಟಪಟ್ಟು ಓದಿ ಸಾಧನೆ ಮಾಡುವೆ ಎಂದು ಆಶಾಬಾನು ಹೇಳಿದರು.

ತಾಲೂಕಿನ ಹೊಳಗುಂದಿಯ ಗ್ಲೋಬ್ಲಲ್ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯವರು ಸಾಧಕ ವಿದ್ಯಾರ್ಥಿನಿ ಆಶಾಬಾನು ಮನೆಗೆ ತೆರಳಿ ಸನ್ಮಾನಿಸಿದ್ದಾರೆ.

ವಿದ್ಯಾರ್ಥಿನಿಗೆ ಹಾಸ್ಟೆಲ್ ಸಹಿತ ಪಿಯುಸಿ ವಿಜ್ಞಾನ ವಿಭಾಗಕ್ಕೆ ಉಚಿತ ಪ್ರವೇಶ ಕಲ್ಪಿಸಿಕೊಡುತ್ತೇವೆ ಎಂದು ಪ್ರಾಚಾರ್ಯ ಮಹೇಶ ಕುಮತಿಮಠ ಹೇಳಿದರು. ಕಾಲೇಜಿನ ಆಡಳಿತ ನಿರ್ವಹಣೆ ಅಧಿಕಾರಿ ಎಂ.ದಯಾನಂದ, ವಿ.ಬಿ. ಶಿವಾನಂದ, ಬಸವರಾಜ, ಅಬು ಸಲೆಹಾ, ಸ್ವಾಮಿ, ಅನಿಲ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೋಲಾರ್‌ ಪ್ಯಾನಲಗೆ 2400 ಮರಗಳು ಬಲಿ!
ನಾಳೆ ಕುಮಟಾದಲ್ಲಿ ಸಾಧನಾ ಸೌರಭ ಕಾರ್ಯಕ್ರಮ, ರಾಷ್ಟ್ರೀಯ ಸೌರಭ ಸಮ್ಮಾನ್ ಪ್ರಶಸ್ತಿ ಪ್ರದಾನ