ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ನಗರ ದೇವತೆ ಶ್ರೀ ಜಾಲಾರಿ ಗಂಗಮ್ಮ ದೇವಾಲಯದ 62ನೇ ವರ್ಷದ ಶ್ರೀ ಧರ್ಮರಾಯರ ಹೂವಿನ ಕರಗ ಮಹೋತ್ಸವವು ಸಂಭ್ರಮದಿಂದ ನೆರವೇರಿತು. ಉತ್ಸವಕ್ಕೆ ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾದರು.ಶನಿವಾರ ರಾತ್ರಿ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮೇಲೂರಿನ ಕೆ.ಧರ್ಮೇಂದ್ರ ಅವರು ಈ ಬಾರಿಯ ಕರಗವನ್ನು ಶನಿವಾರ ರಾತ್ರಿ 9 ಕ್ಕೆಹೂವಿನ ಹೊತ್ತು ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ಧರ್ಮರಾಯಸ್ವಾಮಿ ದೇವಾಲಯದ ಗರ್ಭಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ ವಾದನ, ಮಂಗಳ ವಾದ್ಯಗಳು ಮೊಳಗಿದವು. ಬೀದಿಗಳಲ್ಲಿ ಸಂಚರಿಸಿದ ಕರಗ
ಗಂಟೆನಾದ, ಪೊಂಬುವಾದ್ಯದೊಂದಿಗೆ ಕರಗ ಪ್ರದಕ್ಷಿಣೆ ಸಾಗಿತು. ನಗರದ ಪ್ರಮುಖ ಬೀದಿಗಳಲ್ಲಿ ಕರಗದೊಂದಿಗೆ ಹೆಜ್ಜೆ ಹಾಕಿದರು. ನಗರದ ವಿವಿಧೆಡೆ ಕರಗಧಾರಿಯ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ನಗರದ ಪ್ರತಿಯೊಂದು ಮನೆಯಿಂದ ಪೂಜೆ ಸ್ವೀಕರಿಸಿತು.ಕರಗ ಹೊತ್ತ ಧರ್ಮೇಂದ್ರ ತಮಟೆ ಸದ್ದಿನ ನಡುವೆ ರಾಮಾವತಾರದಲ್ಲಿ ಬಿಲ್ಲು-ಬಾಣ ಹಿಡಿದು ರಾಕ್ಷಸ ಸಂಹಾರ ನಡೆಸಿದ ದೃಶ್ಯ, ಪಂಜುಗಳನ್ನು ಹಿಡಿದು ಕಾಂತಾರದ ನೃತ್ಯ, ಕೆಲ ಹೊತ್ತು ವಿವಿಧ ಭಂಗಿಗಳಲ್ಲಿ ನರ್ತಿಸಿದರು. ಕರಗಕ್ಕೂ ಮುನ್ನ ದೇವಾಲಯದಲ್ಲಿ ಮುಂಜಾನೆಯಿಂದಲೇ ಧರ್ಮರಾಯಸ್ವಾಮಿಗೆ ಕ್ಷೀರಾಭಿಷೇಕ ಜಲಾಭಿಷೇಕ ಸೇರಿದಂತೆ ನಾನಾ ಅಭಿಷೇಕಗಳು ಅರ್ಚನೆಗಳು ದೇವಾಲಯದ ಸಂಪ್ರದಾಯದಂತೆ ನಡೆದವು.
ದೇವಾಲಯಕ್ಕೆ ಪ್ರವೇಶಕರಗವು ಚಿಕ್ಕಬಳ್ಳಾಪುರ ನಗರ ಸೇರಿದಂತೆ ಹೊರವಲಯದ ಮುಸ್ಟೂರು, ಅಣಕನ ಗೊಂದಿ ಗ್ರಾಮಗಳಿಗೂ ತೆರಳಿ ಪ್ರತಿಯೊಂದು ಮನೆಯಿಂದ ಪೂಜೆ ಸ್ವೀಕರಿಸಿ, ಭಾನುವಾರ ಸಂಜೆ ದೇವಾಲಯಕ್ಕೆ ವಾಪಸ್ ಬಂದ ಕರಗ ದೇವಾಲಯದ ಮುಂದೆ ಹಾಕಿದ್ದ ಅಗ್ನಿಕುಂಡ ಹಾಯ್ದು ದೇವಾಲಯಕ್ಕೆ ಪ್ರವೇಶಿಸಿತು.ಈ ವೇಳೆ ಕರಗ ಸಮಿತಿಯ ಅಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ವಿ. ಗಂಗಾಧರಮೂರ್ತಿ, ರಾಮು, ನಗರಸಭೆ ಮಾಜಿ ಅಧ್ಯಕ್ಷ ಮುನಿಕೃಷ್ಣ, ಸುದರ್ಶನ್, ಗೋವಿಂದರಾಜು ಮತ್ತಿತರರು ಕರಗ ಮಹೋತ್ಸವದಲ್ಲಿದ್ದರು.