ಜಮೀನು ಖರೀದಿ ಮಾಡದೆ ಇಸಾರ ಪತ್ರಕ್ಕೆ ₹65 ಲಕ್ಷ?

KannadaprabhaNewsNetwork |  
Published : Aug 23, 2026, 03:00 AM IST
ಫೋಟೋ ೨೨ಡಿಎಚಪಿ೧ | Kannada Prabha

ಸಾರಾಂಶ

ದೇವರಹಿಪ್ಪರಗಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಮಾಡಲು ಸರ್ಕಾರ 3 ಹಂತದಲ್ಲಿ ₹65,31,250 ಹಣ ನೀಡಿ ಸ.ನಂ 56/3 ರಲ್ಲಿ 6.35 ಎಕರೆ ಖರೀದಿ ಪತ್ರ ಮಾಡದೆ ಸರ್ಕಾರದ ನಿಯಮಾವಳಿ ಗಾಳಿಗೆ ತೂರಿ ಇಸಾರ ಪತ್ರ ಮಾಡಿದ್ದು, ಈ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪ್ರಕಾಶ ಗುಡಿಮನಿ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಮಾಡಲು ಸರ್ಕಾರ 3 ಹಂತದಲ್ಲಿ ₹65,31,250 ಹಣ ನೀಡಿ ಸ.ನಂ 56/3 ರಲ್ಲಿ 6.35 ಎಕರೆ ಖರೀದಿ ಪತ್ರ ಮಾಡದೆ ಸರ್ಕಾರದ ನಿಯಮಾವಳಿ ಗಾಳಿಗೆ ತೂರಿ ಇಸಾರ ಪತ್ರ ಮಾಡಿದ್ದು, ಈ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪ್ರಕಾಶ ಗುಡಿಮನಿ ಆಗ್ರಹಿಸಿದ್ದಾರೆ.

ಜಿಲ್ಲಾ, ತಾಲೂಕು ಆಡಳಿತ ವೈಫಲ್ಯ ಖಂಡಿಸಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಹತ್ತಿರ ಹಮ್ಮಿಕೊಂಡಿದ್ದ ಅನಿರ್ದಿಷ್ಟ ಅವಧಿ ಸತ್ಯಾಗ್ರಹದಲ್ಲಿ 3ನೇ ದಿನ ಮಾತನಾಡಿದ ಅವರು, ಪ.ಪಂ 2015-16 ರಿಂದ 2025-26ನೇ ಹಣಕಾಸು ಯೋಜನೆಯಡಿ ಹಾಗೂ ಎಸ್ ಎಫ್ ಸಿ ಯೋಜನೆಯಡಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಅವರು, ಲೋಕಾಯುಕ್ತ ತನಿಖೆಗೆ ಒತ್ತಾಯಿಸಿದರು.

ಕರವೇ ತಾಲೂಕು ಅಧ್ಯಕ್ಷ ರಹೀಮಾನ ಕನಕಲ್ ಹಾಗೂ ಕೆ.ಆರ್.ಎಸ್ ಪಕ್ಷದ ರಾಜ್ಯ ಮುಖಂಡರಾದ ಶಿವಾನಂದ ಯಡಹಳ್ಳಿ ಅವರು ಮಾತನಾಡಿ, ಪ.ಪಂ ವ್ಯಾಪ್ತಿಯಲ್ಲಿ ಎನ್.ಎ ನಿವೇಶನಗಳು ಅಭಿವೃದ್ಧಿ ಮಾಡದೆ ಮಾರಾಟ ಮಾಡಿರುವುದು ಖಂಡನೀಯ. ಅತಿ ಹಿಂದುಳಿದ ತಾಲೂಕು ಅಭಿವೃದ್ಧಿ ಮಾಡದೆ ವಿವಿಧ ಇಲಾಖೆಗಳಲ್ಲಿ ಹಾಗೂ ಹಲವು ವಾರ್ಡುಗಳಲ್ಲಿ ಇ-ಸ್ವತ್ತು, ಕಾರ್ಮಿಕರ ಸಮಸ್ಯೆ ಸೇರಿ ಹಲವಾರು ಸಮಸ್ಯೆಗಳನ್ನು ಇಲ್ಲಿಯವರೆಗೆ ಸರಿಪಡಿಸದಿರುವುದು ಜಿಲ್ಲಾ ಹಾಗೂ ತಾಲೂಕು ಆಡಳಿತದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಹೇಳಿದರು.

ಇದೇ ವೇಳೆ ಕರವೇ ತಾಲೂಕು ಉಪಾಧ್ಯಕ್ಷ ನಾಗೇಶ ಕಮತಗಿ, ಕಾರ್ಮಿಕ ಘಟಕ ಅಧ್ಯಕ್ಷ ಹಸನ್ ಬಾಗವಾನ, ಸಂ. ಕಾರ್ಯದರ್ಶಿ ಭೀರು ಹಳ್ಳಿ, ಮಡಿವಾಳಯ್ಯ ಮಠಪತಿ, ಅಜಿಮ್ ಪಟೇಲ, ಅಶ್ವಾಕ್ ಕೊಡಚಿ ಸೇರಿದಂತೆ ಡಿಎಸ್ಎಸ್, ಕೆ.ಆರ್.ಎಸ್ ಹಾಗೂ ಕರವೇ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಬ್ಬದಲ್ಲಿ ಡಿಜೆ ಬಳಕೆಗೆ ಅವಕಾಶವಿಲ್ಲ
ಪ್ರತಿಭಾವಂತ ಗಾಯಕರಿಗೆ ವೇದಿಕೆ ಕಲ್ಪಿಸಲು ರಾಜ್ಯಮಟ್ಟ ಕಾರ್ಯಕ್ರಮ