ಪಾಲಿಕೆ ಮಾಜಿ ಸದಸ್ಯ, ಕಾಂಗ್ರೆಸ್‌ ಮುಖಂಡ ಎಂ. ಶಿವಣ್ಣ 65ನೇ ಜನ್ಮದಿನಾಚರಣೆ

KannadaprabhaNewsNetwork |  
Published : Jul 16, 2024, 12:34 AM IST
38 | Kannada Prabha

ಸಾರಾಂಶ

ಆದಿಪೂಜಿತ ಗೆಳೆಯರ ಬಳಗ, ಸಿಂಹಾದ್ರಿ ಗ್ರೂಪ್ ಮತ್ತು ಶ್ರೀ ಸಿದ್ದಿವಿನಾಯಕ ಸೇವಾಸಂಘದ ವತಿಯಿಂದ ಕೆ.ಆರ್. ಆಸ್ಪತ್ರೆ ರಸ್ತೆ, ಲಷ್ಕರ್ ಮೊಹಲ್ಲಾದ ಗರಡಿಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು

ಕನ್ನಡಪ್ರಭ ವಾರ್ತೆ ಮೈಸೂರು

ನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ನಗರ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ ಅವರ 65ನೇ ವರ್ಷದ ಹುಟ್ಟುಹಬ್ಬವನ್ನು ವಿವಿಧ ಸಂಘಟನೆಗಳ ನೆರವಿನೊಡನೆ ಆಚರಿಸಲಾಯಿತು.

ಆದಿಪೂಜಿತ ಗೆಳೆಯರ ಬಳಗ, ಸಿಂಹಾದ್ರಿ ಗ್ರೂಪ್ ಮತ್ತು ಶ್ರೀ ಸಿದ್ದಿವಿನಾಯಕ ಸೇವಾಸಂಘದ ವತಿಯಿಂದ ಕೆ.ಆರ್. ಆಸ್ಪತ್ರೆ ರಸ್ತೆ, ಲಷ್ಕರ್ ಮೊಹಲ್ಲಾದ ಗರಡಿಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.

ಬೆಳಗ್ಗೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಉತ್ತನಹಳ್ಳಿಯ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನ ಹಾಗೂ ಗರಡಿಕೇರಿಯ ಶ್ರೀ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಗರಡಿಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಣ್ಣ ಬಣ್ಣದ ಕೆಲಸವನ್ನು ಮಾಡಿಸಿದ್ದು, ಶಾಲೆಯಲ್ಲಿ ಪ್ರತ್ಯೇಕ ತರಗತಿ ನಡೆಸಲು ಅನುಕೂಲವಾಗಲು ಪಾರ್ಟೆಷನ್ ಕೆಲಸ ಮತ್ತು ನೀರಿನ ಸಂಪರ್ಕ ಹಾಗೂ ಶೌಚಾಲಯದ ಮರು ನಿರ್ಮಾಣ ಕಾರ್ಯವನ್ನು ಮಾಡಿಸಿದರು.

ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿ, ಸಿಹಿ ಹಂಚುವ ಮೂಲಕ ಎಂ. ಶಿವಣ್ಣ ಅವರ 65ನೇ ವರ್ಷದ ಜನ್ಮದಿನವನ್ನು ಆಚರಿಸಲಾಯಿತು.

ಈ ವೇಳೆ ಎನ್. ರಾಚಯ್ಯ, ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ವಕ್ತರರು ಶ್ರೀ ಎಂ.ಲಕ್ಷಣ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ,ಎಂ.ರಾಮು, ಮಾಜಿ ಮೇಯರ್‌ ಅನಂತ, ಮಾಜಿ ಸದಸ್ಯೆ ರಾಜಲಕ್ಷ್ಮೀ, ಶ್ರೀ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಎಂ.ಎಸ್. ರವಿಕುಮಾರ್ ಗುಡ್ಡಪ್ಪ, ಪ್ರಕಾಶ್, ಸುರೇಶ್‌ ಬಾಬು, ಎಂ. ಶಂಕರ್ ಉಮೇಶ್, ಎಂ.ಎಸ್. ಮಾಡೆಲ್‌ ಶಾಲೆಯ ಮುಖ್ಯ ಪ್ರಾಧ್ಯಾಪಕರು, ಶಿಕ್ಷಕರು, ವಾರ್ಡ್‌ ನ ಮಹಿಳಾ ಅಧ್ಯಕ್ಷೆ ಲೀಲಾವತಿ, ಮಮತಾ, ಗಿರೀಶ್‌, ವೆಂಕಟೇಶ್‌, ಖಾನ್‌, ಸುನಿಲ್‌, ವಿಕಾಸಸಿಂಹ, ನಂಜಪ್ಪ, ಎಲ್‌. ಶುಭಾ ಇದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ