ನೆಲಮಂಗಲ ತಾಲೂಕಿನಲ್ಲಿ ಶೇ.68ರಷ್ಟು ಬೆಳೆ ಸಮೀಕ್ಷೆ ಪೂರ್ಣ

KannadaprabhaNewsNetwork |  
Published : Oct 20, 2025, 01:02 AM IST
ಪೋಟೋ 2 * 3 : ಬೆಳೆ ಸಮೀಕ್ಷೆ ಆ್ಯಪ್‍ನ ಚಿತ್ರಗಳು | Kannada Prabha

ಸಾರಾಂಶ

ದಾಬಸ್‍ಪೇಟೆ: ಬೆಳೆ ಸಾಲ, ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆ ಮತ್ತು ಬೆಳೆ ಪರಿಹಾರ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ಪಡೆಯಲು ಅಗತ್ಯವಾಗಿರುವ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಮುಗಿಯುತ್ತಾ ಬಂದಿದ್ದು, ರೈತರು ಸೇರಿದಂತೆ ಸಿಬ್ಬಂದಿ ವರ್ಗದವರೂ ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದಾರೆ.

ದಾಬಸ್‍ಪೇಟೆ: ಬೆಳೆ ಸಾಲ, ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆ ಮತ್ತು ಬೆಳೆ ಪರಿಹಾರ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ಪಡೆಯಲು ಅಗತ್ಯವಾಗಿರುವ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಮುಗಿಯುತ್ತಾ ಬಂದಿದ್ದು, ರೈತರು ಸೇರಿದಂತೆ ಸಿಬ್ಬಂದಿ ವರ್ಗದವರೂ ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದಾರೆ.

ರೈತರು ಬೆಳೆದ ಬೆಳೆಗಳನ್ನು ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಲು ಕಳೆದ ನಾಲ್ಕು ವರ್ಷಗಳಿಂದ ಬೆಳೆ ಸಮೀಕ್ಷೆ ಮಾಡುವುದು ಕಡ್ಡಾಯವಾಗಿದೆ. ಇದರ ಜೊತೆಗೆ ಬ್ಯಾಂಕಿನಲ್ಲಿ ಸಾಲ ಸೌಲಭ್ಯಗಳಿಗೆ, ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ಪಡೆಯಲು ಬೆಳೆ ಸಮೀಕ್ಷೆ ಮಾಡಲೇಬೇಕಿದ್ದು, ರೈತರು ಬೆಳೆ ಸಮೀಕ್ಷೆ ಕಾರ್ಯದಲ್ಲಿ ಸ್ವತಃ ತೊಡಗಿಸಿಕೊಂಡು ಜಮೀನಿನ ಬೆಳೆಯ ವಿವರಗಳನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

ಸ್ವಯಂ ಸಮೀಕ್ಷೆ ಹೇಗೆ:

ಪ್ಲೇ ಸ್ಟೋರ್‌ನಲ್ಲಿ ರೈತರ ಬೆಳೆ ಸಮೀಕ್ಷೆ 2025-26 ಆಪ್ ಡೌನ್‍ಲೋಡ್ ಮಾಡಿಕೊಂಡು, ಆರ್ಥಿಕ ವರ್ಷ ಮತ್ತು ಋತು ದಾಖಲಿಸಬೇಕು. ರೈತರ ಹೆಸರು, ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸುವುದು. ನಂತರ ನಮೂದಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಒಟಿಪಿಯನ್ನು ದಾಖಲಿಸಿ ಬೆಳೆ ವಿವರ, ಪಹಣಿ ಮತ್ತು ಮಾಲೀಕರ ವಿವರ ಮೊದಲಾದವುಗಳ ಮಾಹಿತಿ ನೀಡಿ ಬೆಳೆ ಸರ್ವೆ ಪ್ರಾರಂಭ ಕ್ಲಿಕ್ ಮಾಡಬೇಕು. ನಂತರ ಜಮೀನಿನ ಮಾಹಿತಿಯನ್ನು ನಮೂದಿಸಿ ಸದರಿ ರೈತರ ಕೃಷಿ ಭೂಮಿಗೆ ಹೋಗಿ ಸರ್ವೆ ನಂಬರ್, ಗಡಿ ರೇಖೆಯೊಳಗೆ ನಿಂತು ವಿವರವನ್ನು ದಾಖಲಿಸಿ, ಫೋಟೋ ತೆಗೆದು ಮಾಹಿತಿಯನ್ನು ಸೇರಿಸಬೇಕು.

ತಾಲೂಕಿನಲ್ಲಿ ಶೇ.68ರಷ್ಟು ಸಮೀಕ್ಷೆ ಪೂರ್ಣ:

ನೆಲಮಂಗಲ ತಾಲೂಕಿನಲ್ಲಿ ಒಟ್ಟು 97652 ಜಮೀನು ಇದ್ದು ಇದರಲ್ಲಿ 60150 ಜಮೀನುಗಳು ಈಗಾಗಲೇ ಶೇ.68ರಷ್ಟು ಸಮೀಕ್ಷೆ ಪೂರ್ಣವಾಗಿದೆ. 37502 ಜಮೀನುಗಳು ಬಾಕಿ ಉಳಿದಿದ್ದು, 118 ಖಾಸಗಿ ಸಿಬ್ಬಂದಿ ಸಮೀಕ್ಷೆಯಲ್ಲಿ ತೊಡಗಿದ್ದು, ಇನ್ನೊಂದು ವಾರದೊಳಗೆ ಸಮೀಕ್ಷೆ ಪೂರ್ಣವಾಗಿಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅ.20ರಂದು ಕೊನೆಯ ದಿನ:

ಬೆಳೆ ಸಮೀಕ್ಷೆ ಮಾಡಲು ಅ.20ರಂದು ಕೊನೆಯ ದಿನಾಂಕವಾಗಿದ್ದು, ತಾಲೂಕಿನಲ್ಲಿ ಉಳಿದಿರುವ ಶೇ.32ರಷ್ಟು ಸಮೀಕ್ಷೆಗೆ ದಿನಾಂಕವನ್ನು ಸರ್ಕಾರ ವಿಸ್ತರಣೆ ಮಾಡಬಹುದು ಎಂದು ರೈತರಿಗೆ ಕೃಷಿ ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ.

ಕೋಟ್.................

ಬೆಳೆ ಸಮೀಕ್ಷೆ ಸಂದರ್ಭದಲ್ಲಿ ರೈತರೇ ಬೆಳೆ ಸಮೀಕ್ಷೆ ಮಾಡಬಹುದಾಗಿದೆ. ಏನಾದರೂ ತಪ್ಪುಗಳಿದ್ದರೆ 15 ದಿನಗಳ ನಂತರ ರೈತರು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ತಾಲೂಕಿನಲ್ಲಿ ಶೇ.68ರಷ್ಟು ಬೆಳೆ ಸಮೀಕ್ಷೆ ಪೂರ್ಣವಾಗಿದ್ದು, ಇನ್ನೊಂದು ವಾರದೊಳಗೆ ಶೇ.100ರಷ್ಟು ಸಮೀಕ್ಷೆಯನ್ನು ಪೂರ್ಣಗೊಳಿಸುತ್ತೇವೆ.

-ಸಿದ್ದಲಿಂಗಯ್ಯ, ಸಹಾಯಕ ಕೃಷಿ ನಿರ್ದೇಶಕರು, ನೆಲಮಂಗಲ

ಕೋಟ್ ...........

ಕೃಷಿ ಇಲಾಖೆ ರೈತರ ಬೆಳೆ ಸಮೀಕ್ಷೆ ಆ್ಯಪ್ ಮಾಡಿರುವುದು ಸ್ವಾಗತಾರ್ಹ. ಕಳೆದ ಬಾರಿ ಸಾಕಷ್ಟು ರೈತರು ರಾಗಿ ಬಿತ್ತನೆ ಮಾಡಿದ್ದರು. ಬೆಳೆ ಸಮೀಕ್ಷೆ ಮಾಡದಿರುವ ಹಿನ್ನೆಲೆಯಲ್ಲಿ ಪಹಣಿ ಪತ್ರದಲ್ಲಿ ಬೆಳೆ ದಾಖಲೀಕರಣ ಆಗಿರಲಿಲ್ಲ. ಇದರಿಂದ ಸರ್ಕಾರದ ಖರೀದಿ ಕೇಂದ್ರದಲ್ಲಿ ಕೆಲ ರೈತರು ತಾವು ಬೆಳೆದ ಬೆಳೆಯ ಮಾರಾಟಕ್ಕೆ ಅವಕಾಶವೇ ಸಿಗಲಿಲ್ಲ. ಇದು ಸರ್ಕಾರಿ ಸೌಲಭ್ಯ ಪಡೆಯಲು ಸುಲಭ ಮಾರ್ಗವಾಗಿದೆ.

-ಉಮೇಶ್, ರೈತ, ಗಂಗೇನಪುರ

ಪೋಟೋ 2 * 3 :

ಬೆಳೆ ಸಮೀಕ್ಷೆ ಆ್ಯಪ್‍ ಚಿತ್ರಗಳು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ