ಶೇ.78ರಷ್ಟು ಅಂತರ್ಜಾಲ ಸೇವೆ ಬೇಡದ್ದಕ್ಕೆ ಬಳಕೆ: ಎಚ್.ಕೃಷ್ಣೇಗೌಡ ಕಳವಳ

KannadaprabhaNewsNetwork |  
Published : Mar 23, 2025, 01:38 AM IST
22ಕೆಎಂಎನ್ ಡಿ27 | Kannada Prabha

ಸಾರಾಂಶ

ಪ್ರತಿಯೊಬ್ಬರು ಉತ್ತಮ ಸಂವಹನ ಕೌಶಲ ಬೆಳಸಿಕೊಳ್ಳಬೇಕು. ಕನಿಷ್ಠ 300 ಪದಗಳನ್ನು ಕಲಿತುಕೊಂಡರೇ ಸುಲಭವಾಗಿ ಇಂಗ್ಲಿಷ್ ಮಾತನಾಡಬಹುದು. ವಿದ್ಯಾರ್ಥಿಗಳು ಸ್ಮಾರ್ಟ್ ಪೋನ್ ಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಬಳಸಿಕೊಳ್ಳಿ.

ಕನ್ನಡಪ್ರಭ ವಾರ್ತೆ ಹಲಗೂರು

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಶೇ.78ರಷ್ಟು ಅಂತರ್ಜಾಲ ಸೇವೆಗಳನ್ನು ಬೇಡದ್ದಕ್ಕೆ ಬಳಸಲಾಗುತ್ತಿದೆ ಎಂಬ ವಿಚಾರ ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದು ಇತಿಹಾಸ ಪ್ರಾಧ್ಯಾಪಕ ಎಚ್.ಕೃಷ್ಣೇಗೌಡ ಕಳವಳ ವ್ಯಕ್ತಪಡಿಸಿದರು.

ಡಿ.ಹಲಸಹಳ್ಳಿ ಗವಿಮಠದಲ್ಲಿ ವಾಸವಿ ಎಜುಕೇಷನ್‌ ಟ್ರಸ್ಟ್‌ನ ವಿಇಟಿ ಪ್ರಥಮ ದರ್ಜೆ ಕಾಲೇಜು ಜೆ.ಪಿ.ನಗರ ಬೆಂಗಳೂರು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ಶಿಸ್ತು ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳ ಜೀವನದಲ್ಲಿ ಸಾಮಾಜಿಕ ಮಾಧ್ಯಮಗಳು ಎಗ್ಗಿಲ್ಲದೇ ಕೆಟ್ಟ ಚಟಗಳಾಗಿ ಬಳಕೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಯುವಜನರಿಗೆ ಮೊಬೈಲ್ ಚಟ ಬಿಡಿಸುವ ಸಲಹಾ ಕೇಂದ್ರ ಆರಂಭ ಆಗುವ ದಿನಗಳು ಆರಂಭ ಆಗುವುದರಲ್ಲಿ ಸಂಶಯವಿಲ್ಲ ಅತಂಕ ವ್ಯಕ್ತಪಡಿಸಿದರು.

ಪ್ರತಿಯೊಬ್ಬರು ಉತ್ತಮ ಸಂವಹನ ಕೌಶಲ ಬೆಳಸಿಕೊಳ್ಳಬೇಕು. ಕನಿಷ್ಠ 300 ಪದಗಳನ್ನು ಕಲಿತುಕೊಂಡರೇ ಸುಲಭವಾಗಿ ಇಂಗ್ಲಿಷ್ ಮಾತನಾಡಬಹುದು. ವಿದ್ಯಾರ್ಥಿಗಳು ಸ್ಮಾರ್ಟ್ ಪೋನ್ ಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಬಳಸಿಕೊಳ್ಳಿ ಎಂದು ಕರೆ ನೀಡಿದರು.

ವಿದ್ಯಾರ್ಥಿಗಳೇ ಮುಂದಿನ ಭವಿಷ್ಯ ಬದುಕು ಉಜ್ವಲ ಆಗಬೇಕಾದರೇ ವಿದ್ಯಾರ್ಥಿ ಜೀವನದಲ್ಲಿ ಓದಬೇಕು. ಇಲ್ಲದಿದ್ದರೇ ಬದುಕು ಮೂರಾಬಟ್ಟೆಯಾಗಲಿದೆ. ಪ್ರತಿಯೊಬ್ಬರೂ ನಿರ್ದಿಷ್ಟ ಗುರಿ ಹೊಂದಿ ಗುರಿ ಉದ್ದೇಶ ಈಡೇರಿಕೆಗೆ ಶ್ರಮಿಸುವ ಜೊತೆಗೆ ಜೀವನದಲ್ಲಿ ಒಳ್ಳೆಯ ಅಭಿರುಚಿ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.

ಈ ವೇಳೆ ಗವಿಮಠದ ಪೀಠಾಧ್ಯಕ್ಷ ಷಡಕ್ಷರ ಸ್ವಾಮಿಜೀ, ಶಿಬಿರದ ಸಂಯೋಜಕರಾದ ನಾರಾಯಣಸ್ವಾಮಿ, ಸಹ ಸಂಯೋಕರಾದ ಐಶ್ವರ್ಯ, ಮಣಿಕಂಠ, ಸಂಸ ಥೀಯೇಟರ್ ಮುಖ್ಯಸ್ಥ ಸುರೇಶ್ ಸೇರಿದಂತೆ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಇಂದು ಶಾಲಾ ವಾರ್ಷಿಕೋತ್ಸವ

ಮಂಡ್ಯ: ಕುವೆಂಪು ನಗರದ ಜ್ಞಾನದೀಪ ವಿದ್ಯಾಲಯ ಎಜುಕೇಷನ್‌ ಟ್ರಸ್ಟ್ ಹಾಗೂ ಅಗಮ್ಯಾಸ್ ಕಿಡ್ಸ್ ಕಾರ್ನರ್ ಶಾಲೆ ಆಶ್ರಯದಲ್ಲಿ ಮಾ.23 ರಂದು 10ನೇ ವರ್ಷದ ಶಾಲಾ ವಾರ್ಷಿಕೋತ್ಸವ ನಡೆಯಲಿದೆ. ನಗರದ ಪಿಇಎಸ್ ಸಂಜೆ ಕಾಲೇಜು ಆವರಣದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನಡೆಯುವ ಸಮಾರಂಭವನ್ನು ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಉದ್ಘಾಟಿಸುವರು.

ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ದಕ್ಷಿಣ ವಲಯದ ಅಧ್ಯಕ್ಷ ಮಂಗಲ ಎಂ.ಇ.‌ಶಿವಣ್ಣ ಅಧ್ಯಕ್ಷತೆ ವಹಿಸುವರು. ಅತಿಥಿಯಾಗಿ ಪತ್ರಕರ್ತ ಚಂದ್ರಶೇಖರ ದ.ಕೋ.ಹಳ್ಳಿ ಪಾಲ್ಗೊಳ್ಳುವರು. ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯ ಡಿ. ಶಶಿಕುಮಾರ್ ಹಾಗೂ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಂಡ್ಯ ಪ್ರಾದೇಶಿಕ ಕೇಂದ್ರದ ಕನ್ನಡ ಸಹಾಯಕ ಪ್ರಾಧ್ಯಾಪಕಿ‌ ಡಾ.ವಿ.ಎನ್.ಗೀತಾಮಣಿ ಅವರನ್ನು ಜ್ಞಾನದೀಪ ವಿದ್ಯಾಲಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಸೋಮಶೇಖರಯ್ಯ ಸನ್ಮಾನಿಸುವರು ಎಂದು ಮುಖ್ಯ ಶಿಕ್ಷಕಿ ಆರ್. ಗೀತಾ ಮಂಜು ತಿಳಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ