ಎಸ್ಸೆಸ್ಸೆಲ್ಸಿ ಪರೀಕ್ಷೆ ನಾಗಮಂಗಲ ತಾಲೂಕು ಜಿಲ್ಲೆಗೆ 7ನೇ ಸ್ಥಾನ

KannadaprabhaNewsNetwork |  
Published : Apr 26, 2026, 03:00 AM IST
23ಕೆಎಂಎನ್ ಡಿ31 | Kannada Prabha

ಸಾರಾಂಶ

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.96ರಷ್ಟು ಫಲಿತಾಂಶ ಬಂದು ನಾಗಮಂಗಲ ತಾಲೂಕು ಜಿಲ್ಲೆಗೆ 7ನೇ ಸ್ಥಾನ ಪಡೆದುಕೊಂಡಿದೆ. ಒಟ್ಟು 53 ಪ್ರೌಢಶಾಲೆಗಳ ಪೈಕಿ 29 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿವೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.96ರಷ್ಟು ಫಲಿತಾಂಶ ಬಂದು ತಾಲೂಕು ಜಿಲ್ಲೆಗೆ 7ನೇ ಸ್ಥಾನ ಪಡೆದುಕೊಂಡಿದೆ. ಒಟ್ಟು 53 ಪ್ರೌಢಶಾಲೆಗಳ ಪೈಕಿ 29 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಲೋಕೇಶ್ ತಿಳಿಸಿದ್ದಾರೆ.

ತಾಲೂಕಿನ ಬಿ.ಜಿ.ನಗರದ ಶ್ರೀ ಭಕ್ತನಾಥಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿನಿ ಫೀರ್ದೋಸ್ ಷರೀಫ್ 625ಕ್ಕೆ 618 ಅಂಕಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿನಿ ಆರ್.ನಿಸರ್ಗ 615 ಅಂಕ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ, ಪಟ್ಟಣದ ಎಲ್ಲೆನ್ ಶಾಲೆ ವಿದ್ಯಾರ್ಥಿನಿ ಎಂ.ಜೀವಿತ 614ಅಂಕ ಪಡೆದು ತಾಲೂಕಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನುಳಿದಂತೆ ತಾಲೂಕಿನ ಬಿ.ಜಿ.ನಗರದ ಶ್ರೀ ಭಕ್ತನಾಥಸ್ವಾಮಿ ಪ್ರೌಢಶಾಲೆ ಕೆ.ಆರ್.ಲೇಖನ (612) ಶೀರಾಪಟ್ಟಣದ ವಿಸ್ಡಂ ಶಾಲೆ ಬಿ.ಎ.ಭುವನ್‌ಗೌಡ(612) ಶ್ರೀ ಭಕ್ತನಾಥಸ್ವಾಮಿ ಪ್ರೌಢಶಾಲೆ ದೀಕ್ಷಿತ(610) ಶೀರಾಪಟ್ಟಣದ ವಿಸ್ಡಂ ಶಾಲೆ ಸಲ್ಮಾ ಜಹಾನ್ (610) ಶ್ರೀ ಭಕ್ತನಾಥಸ್ವಾಮಿ ಪ್ರೌಢಶಾಲೆ ಬಿ.ಎಸ್.ಶ್ರೇಯ (606), ಇಂದಿರಾಗಾಂಧಿ ವಸತಿ ಶಾಲೆ ಡಿ.ಆರ್.ಸಿಂಚನ (606) ಮತ್ತು ಬೆಳ್ಳೂರು ಕ್ರಾಸ್‌ನ ನವೋದಯ ಇಂಟರ್‌ನ್ಯಾಷನಲ್ ಶಾಲೆ ವಿದ್ಯಾರ್ಥಿ ಬಿ.ಎಸ್.ಚಿರಂತ್ (603) ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಒಟ್ಟು 2165 ವಿದ್ಯಾರ್ಥಿಗಳ ಪೈಕಿ 1120 ಮಂದಿ ಬಾಲಕರು, 958 ಮಂದಿ ಬಾಲಕಿಯರು ಸೇರಿ ಒಟ್ಟು 2078 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ತಾಲೂಕಿಗೆ ಶೇ.96ರಷ್ಟು ಫಲಿತಾಂಶ ತಂದುಕೊಟ್ಟಿದ್ದಾರೆ.

ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಸಹಕರಿಸಿದ ಎಲ್ಲಾ ಶಾಲೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಪೋಷಕರಿಗೆ ಅಭಿನಂದಿಸುವುದಾಗಿ ಬಿಇಓ ಎಸ್.ಆರ್.ಲೋಕೇಶ್ ತಿಳಿಸಿದ್ದಾರೆ.ತಾಲೂಕಿನ 29 ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ

ನಾಗಮಂಗಲ:

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ತಾಲೂಕಿನ 29 ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿವೆ.

ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಾದ ಕರಡಹಳ್ಳಿ, ಮೈಲಾರಪಟ್ಟಣ, ಕದಬಹಳ್ಳಿ, ಹೆರಗನಹಳ್ಳಿ, ತಟ್ಟಹಳ್ಳಿ, ಹೊನ್ನಾವರ, ಸಾತೇನಹಳ್ಳಿ, ಕೂಚಹಳ್ಳಿ, ಭೀಮನಹಳ್ಳಿ, ಶೆಟ್ಟಹಳ್ಳಿ, ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ತಾಲೂಕಿನ ಕೋಟೆಬೆಟ್ಟ, ಸೋಮನಹಳ್ಳಿ ಮತ್ತು ಕಂಬದಹಳ್ಳಿಯ ಮೊರಾರ್ಜಿದೇಸಾಯಿ ವಸತಿ ಶಾಲೆ, ತಾಲೂಕಿನ ಚಿಕ್ಕೋನಹಳ್ಳಿಪುರದ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ, ಕಾಳಿಂಗನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆ, ದೇವಲಾಪುರದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಆದಿಚುಂಚನಗಿರಿಯ ಗಂಗಾಧರೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ಬಿಜಿಎಸ್ ಗ್ರಾಮಾಂತರ ಆಂಗ್ಲಮಾಧ್ಯಮ ಪ್ರೌಢಶಾಲೆ, ಮಾಯಿಗೋನಹಳ್ಳಿಯ ಗ್ರಾಮಾಂತರ ಪ್ರೌಢಶಾಲೆ, ವಡೇರಪುರದ ರಂಗನಾಥಸ್ವಾಮಿ ಪ್ರೌಢಶಾಲೆ, ಜಿ.ಬೊಮ್ಮನಹಳ್ಳಿಯ ವಿಶ್ವೇಶ್ವರಯ್ಯ ಗ್ರಾಮಾಂತರ ಪ್ರೌಢಶಾಲೆ, ರಾಮೇನಹಳ್ಳಿಯ ಬಾಪೂಜಿ ಗ್ರಾಮಾಂತರ ಪ್ರೌಢಶಾಲೆ, ಮಾದಿಹಳ್ಳಿಯ ಮಾರುತಿ ಗ್ರಾಮಾಂತರ ಪ್ರೌಢಶಾಲೆ, ಪಟ್ಟಣದ ಎಲ್ಲೆನ್ ಶಾಲೆ, ಬೆಳ್ಳೂರು ಕ್ರಾಸ್‌ನ ನವೋದಯ ಇಂಟರ್‌ನ್ಯಾಷನಲ್ ಸ್ಕೂಲ್, ನಾಗಮಂಗಲದ ಶ್ರೀ ಕುವೆಂಪು ಸ್ಮಾರಕ ಪ್ರೌಢಶಾಲೆ, ಶೀರಾಪಟ್ಟಣದ ವಿಸ್ಡಂ ಪಬ್ಲಿಕ್‌ಶಾಲೆ ಹಾಗೂ ಹೊಸಕೊಪ್ಪಲಿನ ಬ್ರಿಲಿಯಂಟ್ ವ್ಯಾಲಿ ಪಬ್ಲಿಕ್‌ ಶಾಲೆ ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಮೀಸಲಾತಿ ಮಸೂದೆ ತಡೆದ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಪ್ರತಿಭಟನೆ
ಒಳ ಮೀಸಲಾತಿ ಹಂಚಿಕೆ ಅವೈಜ್ಞಾನಿಕ-ಮಾಜಿ ಸಚಿವ ಬಿ.ಸಿ. ಪಾಟೀಲ್ ಆರೋಪ