ದೀಪಾವಳಿ ಪಟಾಕಿಯಿಂದ 83 ಜನಕ್ಕೆ ಗಾಯ

KannadaprabhaNewsNetwork |  
Published : Nov 10, 2026, 02:30 AM IST
minto hospital 4 | Kannada Prabha

ಸಾರಾಂಶ

ದೀಪಾವಳಿ ಹಬ್ಬದ ಪಟಾಕಿ ಸಿಡಿತದಿಂದ 82 ಮಂದಿ ಗಾಯಗೊಂಡಿದ್ದು, 6 ಮಂದಿಗೆ ತೀವ್ರ ಸ್ಪರೂಪದ ಗಾಯಗಳಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಭಾನುವಾರ ರಾತ್ರಿಯಿಂದ ಸೋಮವಾರ ಮಧ್ಯಾಹ್ನದವರೆಗೆ ಮಿಂಟೋ ಆಸ್ಪತ್ರೆಗೆ 20 ಮಂದಿ ದಾಖಲಾಗಿದ್ದು, 6 ಮಂದಿಗೆ ತೀವ್ರ ಸ್ಪರೂಪದ ಗಾಯಗಳಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 16 ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೀಪಾವಳಿ ಹಬ್ಬದ ಪಟಾಕಿ ಸಿಡಿತದಿಂದ 82 ಮಂದಿ ಗಾಯಗೊಂಡಿದ್ದು, 6 ಮಂದಿಗೆ ತೀವ್ರ ಸ್ಪರೂಪದ ಗಾಯಗಳಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಭಾನುವಾರ ರಾತ್ರಿಯಿಂದ ಸೋಮವಾರ ಮಧ್ಯಾಹ್ನದವರೆಗೆ ಮಿಂಟೋ ಆಸ್ಪತ್ರೆಗೆ 20 ಮಂದಿ ದಾಖಲಾಗಿದ್ದು, 6 ಮಂದಿಗೆ ತೀವ್ರ ಸ್ಪರೂಪದ ಗಾಯಗಳಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 16 ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.

ಪಟಾಕಿಯಿಂದ ಕಣ್ಣು ಗಾಯಗೊಂಡು ಬನ್ನೇರುಘಟ್ಟ, ಬೊಮ್ಮಸಂದ್ರ, ವೈಟ್‌ಫೀಲ್ಡ್ ನಲ್ಲಿರುವ ನಾರಾಯಣ ನೇತ್ರಾಲಯಗಳಲ್ಲಿ 29 ಮಂದಿ ದಾಖಲಾಗಿದ್ದು, ಇವರಲ್ಲಿ 15 ಮಕ್ಕಳೂ ಸೇರಿದ್ದಾರೆ. 7 ಜನರು ದಾರಿಹೋಕರಿಗೆ ಮತ್ತು 22 ಮಂದಿ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದಾರೆ.

ರಾಜಾಜಿನಗರ ನಾರಾಯಣ ನೇತ್ರಾಲಯದಲ್ಲಿ 31 ಮಂದಿ ಪಟಾಕಿಯಿಂದ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ 15 ಮಂದಿ ಪುರುಷರು, 16 ಮಹಿಳೆಯರೂ ಸೇರಿದ್ದಾರೆ. 12 ಮಂದಿ ಪಕ್ಕದಲ್ಲಿ ನಿಂತಿದ್ದಾಗ ಗಾಯಗೊಂಡರೆ, 8 ಮಂದಿ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದಾರೆ. ಉಳಿದವರು ನಡೆದು ಹೋಗುತ್ತಿದ್ದಾಗ ಪಟಾಕಿ ಕಿಡಿ ತಗುಲಿ ಗಾಯಗೊಂಡಿದ್ದಾರೆ. ನಗರದ ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ ಒಬ್ಬರು, ಶಂಕರ ಐ ಆಸ್ಪತ್ರೆಯಲ್ಲಿ ಒಬ್ಬರು ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ರೆಟಿನಾ ಹಾಳು: ಮೇಲಿನ ಮನೆಯಿಂದ ಉರಿಯುತ್ತಿದ್ದ ಹೂಕುಂಡ ಬಡಿದು 53 ವರ್ಷದ ಮಹಿಳೆ ಕಣ್ಣುಗಳು ಸುಟ್ಟಿವೆ. ಈಕೆಯ ಎಡಗಡೆ ಕಣ್ಣು ಸಂಪೂರ್ಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಬಲಗಡೆ ಕಣ್ಣು ಮೇಲ್ಭಾಗದಲ್ಲಿ ಸುಟ್ಟಿದೆ. ಮಿಂಟೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯರು ದೃಷ್ಟಿ ಬರುವ ಯಾವುದೇ ಗ್ಯಾರಂಟಿ ನೀಡಿಲ್ಲ. ಕಣ್ಣಿನ ರೆಟಿನಾ ಸಂಪೂರ್ಣ ಹಾಳಾಗಿದೆ. ಆಸ್ಪತ್ರೆಗೆ ಕರೆ ತಂದ ನಂತರ ತುಂಬಾ ಜಾಗೃತೆಯಿಂದ ಕಣ್ಣಿನ ಆರೈಕೆ ಮಾಡಿದ್ದಾರೆ ಎಂದು ಕುಟುಂಬದವರು ತಿಳಿಸಿದರು.

-ಬಾಕ್ಸ್‌-

ಗಾಯಾಳುಗಳ ಮಾಹಿತಿ

ಆಡುಗೋಡಿಯ ಲಿಖಿತ್ ರೆಡ್ಡಿ (20), ಮಾರುತಿನಗರದ ಕವಿತಾ(22), ಶ್ರೀರಾಂಪುರದ ಮುನಿಸ್ವಾಮಿ (20), ಬನಶಂಕರಿಯ ಕ್ಯಾವಿಮ್ (9), ಜಯನಗರದ ಸ್ವಾಮಿ ದೊರೆ (50), ಕುಮಾರಸ್ವಾಮಿ ಲೇ ಔಟ್ ನ ಸಂಜಯ್ (20), ಎಲೆಕ್ಟ್ರಾನಿಕ್ ಸಿಟಿಯ ಪ್ರಶಾಂತ್ (39), ಚಾಮರಾಜಪೇಟೆಯ ರಮೇಶ್ (33), ನಾಗವಾರದ ಮುಸ್ತಹೀದ್ (21), ದೊಡ್ಡಬಳ್ಳಾಪುರದ ಸುಜನ್(11), ರಾಯಚೂರಿನ ಶಿವಲೀಲಾ (11) ಅವರಿಗೆ ಪಟಾಕಿಯಿಂದ ಗಂಭೀರ ಗಾಯಗಳಾಗಿವೆ. ಇವರೆಲ್ಲಾ ದಾರಿಯಲ್ಲಿ ತಮ್ಮಷ್ಟಕ್ಕೆ ತಾವು ನಡೆದು ಹೋಗುತ್ತಿದ್ದಾಗ ಪಟಾಕಿ ಸಿಡಿದು ಗಾಯಗಳಾಗಿವೆ. ಇವರಿಗೆ ರಕ್ತ ಹೆಪ್ಪುಗಟ್ಟಿದ್ದು ಕನಿಷ್ಠ ಮೂರರಿಂದ ಆರು ವಾರಗಳ ಚಿಕಿತ್ಸೆ ಹಾಗೂ ವಿಶ್ರಾಂತಿ ಅಗತ್ಯವಿದೆ. ಎಲ್ಲರೂ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಲಿಖಿತ್ ರೆಡ್ಡಿ, ಶಬನಂ, ಶಿವಲೀಲಾ, ಸುಜನ್ ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯ ಇದ್ದ ಕಾರಣ ಇವರನ್ನು ಒಳರೋಗಿಗಳಾಗಿ ದಾಖಲಾಗಿದ್ದಾರೆ. ಈ ನಾಲ್ಕು ಜನರಿಗೆ ಗಂಭೀರಗಾಯಗಳಾಗಿದ್ದು, ತಕ್ಷಣಕ್ಕೆ ಚೇತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಣ್ಣುಗಳಿಗೆ 3 ರಿಂದ ನಾಲ್ಕು ತಿಂಗಳು ವಿಶ್ರಾಂತಿ ಅಗತ್ಯವಿದೆ. ಅಲ್ಲದೆ, ವಿವಿಧ ಹಂತದ ಚಿಕಿತ್ಸೆ ಅಗತ್ಯವಿದ್ದು, ಇದೆಲ್ಲಾ ನಡೆದರೂ ದೃಷ್ಟಿ ಬರದಿದ್ದರೆ, ಮತ್ತೊಂದು ಶಸ್ತ್ರ ಚಿಕಿತ್ಸೆ ನಡೆಸಬೇಕು ಎಂದು ಮಿಂಟೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಪಟಾಕಿ ಬ್ಯಾನ್ ಮಾಡಬೇಕು: ನಿಶಾತ್

ಗಾಯಗೊಂಡವರಲ್ಲಿ ಕೆಲವರು ತಾವು ಪಟಾಕಿ ಸಿಡಿಸದೇ ಇದ್ದರೂ ರಸ್ತೆ ಪಕ್ಕದಲ್ಲಿ ಹೋಗುತ್ತಿದ್ದಾಗ ಬೇರೆಯವರಿಂದ ಹಾನಿಯಾಗಿದೆ. ಶಸ್ತ್ರ ಚಿಕಿತ್ಸೆ ಮಾಡಿದವರಿಗೆ ಮೊದಲಿನಂತೆ ದೃಷ್ಟಿ ಬರುವುದಿಲ್ಲ. ಆದ್ದರಿಂದ ನಗರದಲ್ಲಿ ಪಟಾಕಿ ಬ್ಯಾನ್ ಮಾಡಬೇಕು ಸರ್ಕಾರ ಕಾನೂನಿನ ಜಾರಿ ಮಾಡಿ ನಿಯಂತ್ರಿಸಬೇಕು. ಪಟಾಕಿ ನಿಷೇಧಿಸಬೇಕು ಎಂದು ಮಿಂಟೋ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ನಿಶಾತ್ ಸುಲ್ತಾನಾ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ