ಗುಂಡ್ಲುಪೇಟೆ: ಪಟ್ಟಣದ ಬಳಿಯ ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಆವರಣದಲ್ಲಿ ಕಟ್ಟಡಕ್ಕಾಗಿ ೯ ಆಲದ ಮರಗಳ ಹರಾಜು ಹಾಕುವ ಅರಣ್ಯ ಇಲಾಖೆ ವಿರುದ್ಧ ಪರಿಸರಕ್ಕಾಗಿ ನಾವು ಸಂಘಟನೆ ಹಾಗೂ ಸ್ಥಳೀಯರ ವಿರೋಧದಿಂದ ಬಂಡೀಪುರ ಅರಣ್ಯ ಇಲಾಖೆ ಮರಗಳ ಹರಾಜು ನಿಲ್ಲಿಸಿದೆ.
ಮೈಸೂರು ಪಿಯುಸಿಎಲ್ ಅಧ್ಯಕ್ಷ ಕಮಲ್ ಗೋಪಿನಾಥ್ ಮಾತನಾಡಿ, ೯ ಆಲದ ಮರಗಳು ಇನ್ನೂರು ವರ್ಷಗಳಷ್ಟು ಹಳೆಯ ಮರಗಳಾಗಿವೆ. ಇವು ಪಾರಂಪರಿಕ ಮರಗಳು. ಇಂತಹ ಮರಗಳ ರಕ್ಷಣೆಗೆ ಮುಂದಾಗಬೇಕಾದ ಅರಣ್ಯ ಇಲಾಖೆ ಕಡಿದು ಕಟ್ಟಡ ಕಟ್ಟಲು ಅವಕಾಶ ನೀಡಿದ್ದು ತಪ್ಪು ಎಂದು ಪ್ರತಿಪಾದಿಸಿದರು.
ಎಸಿಎಫ್ ಭರವಸೆ:ಪರಿಸರ ಹೋರಾಟಗಾರರ ಒತ್ತಾಯಕ್ಕೆ ಬಂಡೀಪುರ ಅರಣ್ಯ ಇಲಾಖೆಯ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಮಣಿದು ಮಾತನಾಡಿ, ಹರಾಜನ್ನು ರದ್ದು ಪಡಿಸುವ ಸಂಬಂಧ ಮೇಲಧಿಕಾರಿಗಳ ಜೊತೆ ಮಾತನಾಡುತ್ತೇನೆ. ಸದ್ಯಕ್ಕೆ ಮರ ಕಡಿಯುವುದಿಲ್ಲ ಎಂದು ಭರವಸೆ ನೀಡಿದರು. ''''''''ಪರಿಸರಕ್ಕಾಗಿ ನಾವು'''''''' ಸಂಘಟನೆಯ ಲೀಲಾ ವೆಂಕಟೇಶ್, ಭಾಗ್ಯ,ಕಾಮಾಕ್ಷಿ ಗೌಡ, ಶ್ವೇತಾ, ಸುಮತಿ, ಸುಶೀಲಾ, ಸುಗುಣ, ಇಂದಿರಾ, ಅರುಣ್, ಭಾನು ಪ್ರಶಾಂತ್, ಮನ್ಸೂರ್, ಅಕ್ಬರ್, ಶೈಲಜೇಶ್, ಪರಿಸರ ಪ್ರೇಮಿಗಳಾದ ವಿ.ಆರ್.ಸುಬ್ಬರಾವ್, ಮಡಹಳ್ಳಿ ಮಣಿ, ಸಚಿನ್, ಮಹದೇವಸ್ವಾಮಿ, ಪ್ರದೀಪ್, ನಾಗಾರ್ಜುನ್ ಸೇರಿದಂತೆ ಸ್ಥಳೀಯರು ಇದ್ದರು.