ಕೆ.ಎಂ. ಮಂಜುನಾಥ್
ಬಿಪಿಎಲ್ ಕಾರ್ಡ್‌ಗಳಿಗಾಗಿ ಜಿಲ್ಲೆಯ ಸಾವಿರಾರು ಕುಟುಂಬ ಎದುರು ನೋಡುತ್ತಿವೆ!
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಬಳಿಕ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕಾರ್ಡ್‌ಗಳಿಗೆ ಮತ್ತಷ್ಟು ಬೇಡಿಕೆ ಬಂದಿದ್ದು, ಸರ್ಕಾರದ ವಿವಿಧ ಯೋಜನೆಗಳ ಬಳಕೆ ಸೇರಿದಂತೆ ಮಾಸಿಕ ಪಡಿತರಕ್ಕಾಗಿ ಬಿಪಿಎಲ್ ಕುಟುಂಬಗಳು, ತೀವ್ರ ಸಮಸ್ಯೆ ಎದುರಿಸುತ್ತಿವೆ.ತುರ್ತು ಆರೋಗ್ಯ ಸಂಬಂಧ ನೀಡುವ ಪಡಿತರ ಕಾರ್ಡ್‌ಗಳನ್ನು ಹೊರತುಪಡಿಸಿ 2021- 22ರಿಂದ ಕಾರ್ಡ್ ವಿತರಣೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಬಿಪಿಎಲ್ ಕಾರ್ಡ್‌ಗೆಂದು ಸಲ್ಲಿಸಿದ ಅರ್ಜಿಗಳ ಸಂಖ್ಯೆ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿದೆ.
2018ರ ಬಳಿಕ ಈವರೆಗೆ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್‌ಗಾಗಿ ಬರೋಬ್ಬರಿ 9376 ಜನರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಬಹುತೇಕ ಅರ್ಜಿಗಳನ್ನು ಪರಿಶೀಲಿಸಿ, ಅನುಮೋದನೆ ಸಿದ್ಧಪಡಿಸಿಕೊಳ್ಳಲಾಗಿದೆ. 2018ರಲ್ಲಿ 13875 ಅರ್ಜಿಗಳ ಸಲ್ಲಿಕೆಯಾಗಿದ್ದವು. ಈ ಪೈಕಿ 36 ಅರ್ಜಿಗಳು ಮಾತ್ರ ವಿಲೇವಾರಿಯಾಗದೆ ಉಳಿದಿದ್ದು, ಉಳಿದ 13839 ಅರ್ಜಿಗಳು ಅನುಮೋದಿಸಲಾಗಿದೆ. 2019ರಲ್ಲಿ 8799 ಅರ್ಜಿ ಸಲ್ಲಿಕೆಯಲ್ಲಿ 8529 ಅರ್ಜಿಗಳು ವಿಲೇವಾರಿಯಾಗಿದ್ದು, 270 ಮಾತ್ರ ಬಾಕಿ ಉಳಿದಿವೆ.
ಸಚಿವ ನೀಡಿದ್ದ ಭರವಸೆ ಹುಸಿ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಒಂದು ತಿಂಗಳೊಳಗೆ ಹೊಸ ಪಡಿತರ ಚೀಟಿಗಳನ್ನು ವಿತರಣೆ ಮಾಡುವುದಾಗಿ 2023ರ ಆ. 4ರಂದು ಭರವಸೆ ನೀಡಿದ್ದರು. ಇದರಿಂದ ಕಾರ್ಡ್‌ಗೆಂದು ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳು ಸಂತಸಗೊಂಡಿದ್ದರು. ಆದರೆ, ಸರ್ಕಾರ ನಾನಾ ಕಾರಣಗೊಳನ್ನೊಡ್ಡಿ ಪಡಿತರ ಚೀಟಿ ವಿತರಣೆಯನ್ನು ವಿಳಂಬ ಮಾಡುತ್ತಲೇ ಬಂದಿದೆ. ಸರ್ಕಾರ ಯಾವಾಗ ಪಡಿತರ ಚೀಟಿ ವಿತರಿಸುತ್ತದೆ ಎಂಬುದು ಇಲಾಖೆ ಅಧಿಕಾರಿಗಳು ಸಹ ಗೊತ್ತಿಲ್ಲವಾದ್ದರಿಂದ ಕಾರ್ಡ್ ಕೇಳಿಕೊಂಡು ನಿತ್ಯ ಇಲಾಖೆಗೆ ಬರುವ ಜನರಿಗೆ ಖಚಿತ ಮಾಹಿತಿ ಇಲ್ಲದೆ ತೊಳಲಾಟ ಅನುಭವಿಸುವಂತಾಗಿದೆ.
ನಿರ್ದಿಷ್ಟ ಆದಾಯ ಮಿತಿಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರ ನೀಡುವ ಗುರುತಿನ ಚೀಟಿಯೇ ಬಿಪಿಎಲ್.
ದುರ್ಬಲ ಕುಟುಂಬಗಳಿಗೆ ಸುರಕ್ಷತಾ ಜಾಲವನ್ನು ಒದಗಿಸುವುದು ಹಾಗೂ ಅವರ ಮೂಲ ಅಗತ್ಯಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳುವುದು ಬಿಪಿಎಲ್ ಕಾರ್ಡ್ ಯೋಜನೆ ಪ್ರಾಥಮಿಕ ಉದ್ದೇಶವಾಗಿದೆ.
ಬಿಪಿಎಲ್ ಕಾರ್ಡ್‌ಗೆ ಅರ್ಜಿದಾರರ ಸಂಖ್ಯೆ
ಸಂಡೂರು ತಾಲೂಕು 1641
ಸಿರುಗುಪ್ಪ ತಾಲೂಕು 2308ಕುರುಗೋಡು ತಾಲೂಕು 1166
ಕಂಪ್ಲಿ ತಾಲೂಕು 883ಒಟ್ಟು 9376