ಕನ್ನಡಪ್ರಭ ವಾರ್ತೆ ಪಾಂಡವಪುರ
ಬಳಿಕ ಮಾತನಾಡಿದ ಅವರು, ಗ್ರಾಮೀಣ ಜನರ ಮನೆಮನೆಗೆ ಕಾವೇರಿ ನೀರು ಪೂರೈಕೆ ಮಾಡಬೇಕು ಎಂಬ ಉದ್ದೇಶದಿಂದ ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಬನಘಟ್ಟ ಗ್ರಾಮದಲ್ಲಿ ₹42 ಲಕ್ಷ ಹಾಗೂ ಬಳೇಅತ್ತಿಗುಪ್ಪೆ ಗ್ರಾಮದಲ್ಲಿ ₹51 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.ತಾಲೂಕಿನಲ್ಲಿ ಸರ್ಕಾರಿ ಜಮೀನು ಒತ್ತುವರಿಗಳ ತೆರವು ಮಾಡುವುದಕ್ಕೆ ಸೂಕ್ತ ಕ್ರಮವಹಿಸಲಾಗುವುದು. ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯ್ತಿ ಮಟ್ಟದಲ್ಲಿ ಎರಡು ದಿನಗಳ ಕಾಲ ಸಭೆ ನಡೆಸಿ ಸರ್ವೇ ನಡೆಸಲಾಗುವುದು. ಸಾರ್ವಜನಿಕರ ಸರ್ವೇ ನಂಬರ್ ಆಸ್ತಿ, ಗ್ರಾಮಠಾಣ ಹಾಗೂ ಸರಕಾರಿ ಜಮೀನು ಎಷ್ಟಿದೆ ಎನ್ನುವುದನ್ನು ನಿಗಧಿಪಡಿಸಲಾಗುವುದು ಎಂದರು.
ಈ ವೇಳೆ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಎಇಇ ಮಹದೇವಸ್ವಾಮಿ, ಎಇ ಕುಮಾರ್, ಬನಘಟ್ಟ ಗ್ರಾಪಂ ಮಾಜಿ ಸದಸ್ಯ ಕುಮಾರ್, ಹಿರೀಮರಳಿ ಶಿವಕುಮಾರ್, ಬಳೇಅತ್ತಿಗುಪ್ಪೆ ಗ್ರಾಮದಲ್ಲಿ ಅಮೃತಿರಾಜಶೇಖರ್, ಕೈಲಾಸಮೂರ್ತಿ, ಶಿವಕುಮಾರ್, ವಿಜಿಕುಮಾರ್, ಚಾಮಪ್ಪ, ಈಶ್ವರ, ಶಿವಪ್ಪ, ಕಾಳೇನಹಳ್ಳಿ ಆನಂದ್, ಗುತ್ತಿಗೆದಾರ ಎಂ.ಹರೀಶ್, ಉಜ್ವಲ್, ಅಕ್ಷಯ್, ಪಿಡಿಓ ನಿರಂಜನ್ ಸೇರಿದಂತೆ ಹಲವರು ಇದ್ದರು.