6 ವರ್ಷದ ಬಾಲಕಿ ಮೇಲೆ ಪಾನ ಮತ್ತ ಯುವಕನಿಂದ ಅತ್ಯಾಚಾರ

KannadaprabhaNewsNetwork |  
Published : Jan 31, 2024, 02:15 AM IST
ಸಾರ್ವಜನಿಕರು ಆರೋಪಿಯನ್ನ ಹಿಡಿದಿರುವುದು | Kannada Prabha

ಸಾರಾಂಶ

ಕುಡಿದ ಅಮಲಿನಲ್ಲಿ ಶಿವಗಂಗಾ ಚಿತ್ರಮಂದಿರದಿಂದ ಪವನ್ ಎಂಬ ಯುವಕ ನಡೆದುಕೊಂಡು ಕೊರಟಗೆರೆಯ ತ್ರಿಯಂಬಕೇಶ್ವರಿ ನಗರದಲ್ಲಿ ಸುತ್ತಾಡುತ್ತಿರುವಾಗ ಮನೆ ಹತ್ತಿರ ಆಟವಾಡುತ್ತಿದ್ದ 6 ವರ್ಷದ ಬಾಲಕಿಯನ್ನು ಪೋಷಕರು ಮನೆಯಲ್ಲಿಲ್ಲದ ವಿಷಯ ತಿಳಿದು, ಬಾಲಕಿಯ ಮನೆಗೇ ಎಳೆದೊಯ್ದು ಬಾಗಿಲು ಹಾಕಿಕೊಂಡು ಅತ್ಯಾಚಾರವೆಸಗಿದ್ದಾನೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಕುಡಿದ ಅಮಲಿನಲ್ಲಿ ಯುವಕನೊಬ್ಬ ಕುಂಟೆಬಿಲ್ಲೆ ಆಡುತ್ತಿದ್ದ 1ನೇ ತರಗತಿಯ 6 ವರ್ಷದ ಬಾಲಕಿಯನ್ನು ಬಾಲಕಿಯ ಮನೆಗೇ ಹೊತ್ತೊಯ್ದು ಅತ್ಯಾಚಾರವೆಸಗಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಕೊರಟಗೆರೆ ಪಟ್ಟಣದ ತ್ರಿಯಂಬಕೇಶ್ವರಿ ನಗರದಲ್ಲಿ ಈ ಘಟನೆ ಜರುಗಿದ್ದು, ಮಧುಗಿರಿ ತಾಲೂಕಿನ ಐ.ಡಿ ಹಳ್ಳಿಯ ಪವನ್ ಎಂಬ ಯುವಕ ಕುಡಿದ ಮತ್ತಿನಲ್ಲಿ ಈ ಕೃತ್ಯವೆಸಗಿದ್ದಾನೆ.

ಕುಡಿದ ಅಮಲಿನಲ್ಲಿ ಶಿವಗಂಗಾ ಚಿತ್ರಮಂದಿರದಿಂದ ಪವನ್ ಎಂಬ ಯುವಕ ನಡೆದುಕೊಂಡು ಕೊರಟಗೆರೆಯ ತ್ರಿಯಂಬಕೇಶ್ವರಿ ನಗರದಲ್ಲಿ ಸುತ್ತಾಡುತ್ತಿರುವಾಗ ಮನೆ ಹತ್ತಿರ ಆಟವಾಡುತ್ತಿದ್ದ 6 ವರ್ಷದ ಬಾಲಕಿಯನ್ನು ಪೋಷಕರು ಮನೆಯಲ್ಲಿಲ್ಲದ ವಿಷಯ ತಿಳಿದು, ಬಾಲಕಿಯ ಮನೆಗೇ ಎಳೆದೊಯ್ದು ಬಾಗಿಲು ಹಾಕಿಕೊಂಡು ಅತ್ಯಾಚಾರವೆಸಗಿದ್ದಾನೆ.

ಯುವಕ ಪವನ್ ಮೊದಲು 6ನೇ ತರಗತಿಯ ಬಾಲಕಿಯನ್ನು ಎಳೆದೊಯ್ಯಲು ಪ್ರಯತ್ನಿಸಿ ಆ ಮಗು ತಪ್ಪಿಸಿಕೊಂಡು ಓಡಿ ಹೋದ ಕಾರಣ, ಅಲ್ಲೇ ನಿಂತಿದ್ದ ಒಂದನೇ ತರಗತಿಯ ಆರು ವರ್ಷದ ಬಾಲಕಿಯನ್ನು ಎಳೆದೊಯ್ದು ಈ ಕೃತ್ಯವೆಸಗಿದ್ದಾನೆ. ಮನೆಯ ಬಾಗಿಲು ಹಾಕಿಕೊಂಡು ಅತ್ಯಾಚಾರವೆಸಗುವ ಸಂದರ್ಭದಲ್ಲಿ ತಪ್ಪಿಸಿಕೊಂಡು ಹೋಗಿದ್ದ ಬಾಲಕಿ ಅಕ್ಕಪಕ್ಕದ ಜನರಿಗೆ ವಿಷಯ ತಿಳಿಸಿದಾಗ ಅಪ್ರಾಪ್ತ ಬಾಲಕಿಗೆ ಚಿತ್ರಹಿಂಸೆ ನೀಡುತ್ತಿದ್ದ ದುರುಳನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಕೊರಟಗೆರೆ ಸಿಪಿಐ ಅನಿಲ್ ಹಾಗೂ ಪಿಎಸೈ ಚೇತನ್ ಗೌಡ ಹೆಚ್ಚಿನ ತನಿಖೆ ನಡೆಸುತ್ತಿದ್ದು, ಆರೋಪಿ ಪವನ್ ಪೊಲೀಸ್ ವಶದಲ್ಲಿದ್ದಾನೆ ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೌಚಾಲಯಕ್ಕೆ ಬೀಗ ಹಾಕಿ ಮೂತ್ರ ವಿಸರ್ಜನೆ ತಡೆಗೆ ಕನ್ನಡಿ!
ಚಿರತೆಗೆ ಬಾಲಕ ಬಲಿ : ನಾಗಮಲೆಗೆ ಪ್ರಯಾಣ ನಿಷೇಧ